ಇಂದಿನಿಂದ ಕಲ್ಲೇಶ್ವರ ದೇಗುಲ ಉದ್ಘಾಟನೆ ಕಾರ್ಯಕ್ರಮ

KannadaprabhaNewsNetwork |  
Published : Apr 20, 2026, 01:30 AM IST
ಕಲ್ಲೇಶ್ವರ ದೇವಸ್ಥಾನ | Kannada Prabha

ಸಾರಾಂಶ

ತಾಲೂಕಿನ ಅದರಂತೆ ಗ್ರಾಮದ ನೂತನ ಕಲ್ಲೇಶ್ವರ ದೇವಾಲಯ ಪ್ರವೇಶ, ಕಲ್ಲೇಶ್ವರ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಏ. ೨೦ರಿಂದ ೨೩ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಅದರಂತೆ ಗ್ರಾಮದ ನೂತನ ಕಲ್ಲೇಶ್ವರ ದೇವಾಲಯ ಪ್ರವೇಶ, ಕಲ್ಲೇಶ್ವರ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಏ. ೨೦ರಿಂದ ೨೩ರವರೆಗೆ ನಡೆಯಲಿದೆ.

ಏ. ೨೦ರಂದು ನೂತನ ವಿಗ್ರಹ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ, ಏ. ೨೧ರಂದು ಪ್ರಧಾನ ಕಲಶ ಸ್ಥಾಪನೆ, ವಾಸ್ತುಹವನ, ಪೀಠಶುದ್ದಿ, ವಿಗ್ರಹ ಸ್ಥಾಪನೆ ಇರುತ್ತದೆ. ಏ. ೨೨ರಂದು ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶ ಸ್ಥಾಪನೆ, ಪ್ರಧಾನ ಹೋಮ ಏರ್ಪಡಿಸಲಾಗಿದೆ. ಸಂಜೆ ೭ರಿಂದ ಶ್ರೀದೇವಿ ಭಜನಾ ಮಂಡಳಿಯಿಂದ ಭಜನೆ, ರಾತ್ರಿ ೯ಕ್ಕೆ ಅದರಂತೆ ಕಲ್ಲೇಶ್ವರ ನಾಟ್ಯ ಸಂಘದಿಂದ ಕುಡುಕ ಕಟ್ಟಿದ ತಾಳಿ ನಾಟಕ ಪ್ರದರ್ಶನಗೊಳ್ಳಲಿದೆ.

ಏ. ೨೩ರಂದು ರುದ್ರಾಭಿಷೇಕ, ವಿಶೇಷ ಅಲಂಕಾರಪೂಜೆ, ಶ್ರೀಗಳ ಸಾನ್ನಿಧ್ಯದಲ್ಲಿ ಶಿಖರ ಪ್ರತಿಷ್ಠಾಪನೆ, ಕಲಶಾರೋಹಣ, ಪೂರ್ಣಾಹುತಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ನಂತರ ನಡೆಯುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು, ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮಿಗಳು ವಹಿಸಲಿದ್ದು, ಕೊಡಚಾದ್ರಿ ಚಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಕೆ.ಎನ್., ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿಳೇಕಲ್ ಕನ್ನಪ್ಪ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರನ್ನು ಸನ್ಮಾನಿಸಲಾಗುತ್ತದೆ. ಶಾಸಕ ಗೋಪಾಲಕೃಷ್ಣ ಬೇಳೂರು, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಎಚ್.ಹಾಲಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.

ಕಲ್ಲೇಶ್ವರ ದೇವಸ್ಥಾನವನ್ನು ೩೦೦ ವರ್ಷಗಳ ಹಿಂದೆ ಕೆಳದಿ ಅರಸರು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ೨೦೦೧ರಲ್ಲಿ ಪುನರ್ ನಿರ್ಮಾಣ ಮಾಡಲಾಗಿತ್ತು. ಇದೀಗ ೧.೫೦ ಕೋಟಿ ರು. ವೆಚ್ಚದಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಆರ್ಥಿಕ ಸಹಕಾರದಿಂದ ನೂತನ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಗಿ ಖರೀದಿ ಕೇಂದ್ರಕ್ಕೆ ಹೊರ ಜಿಲ್ಲೆಯ ರಾಗಿ
ಬಹುಮತವಿದ್ದರೂ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿಗರೇ ಅಡ್ಡಗಾಲು