ಕಳ್ಳಿಗೆ :ಶಾರದಾ ಪೂಜಾ ರಜತ ಮಹೋತ್ಸವ ಸಂಪನ್ನ , ಧಾರ್ಮಿಕ ಸಭೆ.

KannadaprabhaNewsNetwork |  
Published : Oct 22, 2026, 02:45 AM IST
ಕಳ್ಳಿಗೆ :ಶಾರದಾ ಪೂಜಾ ರಜತ ಮಹೋತ್ಸವ ಸಂಪನ್ನ ,ಧಾರ್ಮಿಕ ಸಭೆ.ಸಮಾಜಸೇವೆ, ಶಿಕ್ಷಣ ಮತ್ತು ಧರ್ಮರಕ್ಷಣೆಗೆ ಆದ್ಯತೆ ನೀಡಿ: ಓಡಿಯೂರು ಶ್ರೀ | Kannada Prabha

ಸಾರಾಂಶ

ಕಳ್ಳಿಗೆಯ ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ 25ನೇ ವರ್ಷದ ಶ್ರೀ ಶಾರದಾ ಪೂಜಾ ರಜತ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಪ್ರತಿಷ್ಠಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಶೀಘ್ರದಲ್ಲಿ ನೆರವೇರಲಿ. ಸಂಸ್ಕೃತಿ ಸೇವಾ ಪ್ರತಿಷ್ಠಾನವು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.

ಬಂಟ್ವಾಳ: ಕಳ್ಳಿಗೆಯ ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ 25ನೇ ವರ್ಷದ ಶ್ರೀ ಶಾರದಾ ಪೂಜಾ ರಜತ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಪ್ರತಿಷ್ಠಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಶೀಘ್ರದಲ್ಲಿ ನೆರವೇರಲಿ. ಸಂಸ್ಕೃತಿ ಸೇವಾ ಪ್ರತಿಷ್ಠಾನವು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಸಂಸ್ಕೃತಿ ಸೇವಾ ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಿದರು. ಸಂದೇಶ ಶೆಟ್ಟಿ ಅರೆಬೆಟ್ಟು ಮಾತನಾಡಿ, ಸನಾತನ ಹಿಂದೂ ಧರ್ಮದ ರಕ್ಷಣೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಎಡುವೆಂಚರ್ ಪಿ ಯು ಕಾಲೇಜಿನ ಸಂಸ್ಥಾಪಕ ಅಮೃತ್ ರೈ, ಪ್ರೇಮಾನಂದ ಕುಲಾಲ್ ಕೋಡಿಕಲ್, ದಿವಾಕರ ಪಂಬದಬೆಟ್ಟು, ಜನಾರ್ದನ ಬೊಂಡಾಲ, ಭುವನೇಶ್ ಮೊಗರ್ನಾಡ್, ಪುಷ್ಪ ಬಂಜನ್, ಕವಿತಾ ಜಾರಂದಗುಡ್ಡೆ ಹಾಗೂ ಶಶಿಪ್ರಭಾ ಗುತ್ತಿಹಿತ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿವರ್ಷ ಶ್ರೀ ಶಾರದಾ ಮಾತೆಯ ವಿಸರ್ಜನಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ವಳವೂರು ವಿಶ್ವಜ್ಯೋತಿ ಸಂಘಕ್ಕೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಜ್ ಕುಮಾರ್ ಕನಪಾಡಿ ಹಾಗೂ ಮುಖ್ಯಮಂತ್ರಿಗಳ ಪದಕ ಪಡೆದ ಪೊಲೀಸ್ ಅಧಿಕಾರಿ ಸುಧೀರ್ ಜಾರಂದಗುಡ್ಡೆ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಸಂಸ್ಕೃತಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪುರುಷ ಎನ್ ಸಾಲ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಕಾಂತ್ ದರಿಬಾಗಿಲು ವಂದಿಸಿದರು. ಯತೀಶ್ ಪೂಜಾರಿ ಶಂಭೂರು ಕಾರ್ಯಕ್ರಮ ನಿರೂಪಿಸಿದರು.

3ದಿನಗಳ ಕಾಲ ನಡೆದ ಶ್ರೀ ಶಾರದಾ ರಜತ ಮಹೋತ್ಸವವು ಅ 18ರಂದು ಸಂಪನ್ನ ಗೊಂಡಿತು,ಸಂಜೆ ಭವ್ಯ ಶೋಭಯಾತ್ರೆಯ ಮೂಲಕ ಶ್ರೀ ಶಾರದ ಮಾತೆಯ ವಿಸರ್ಜನಾ ಮೆರವಣಿಗೆಯಲ್ಲಿ ಚೆಂಡೆ, ವಾದ್ಯ, ಗೊಂಬೆ ಆಕರ್ಷಕ ಟ್ಯಾಬ್ಲೋ ಗಳು ಮೆರಗು ನೀಡಿದವು, ಬಳಿಕ ಬ್ರಹ್ಮರಕೊಟ್ಲು ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ