ಆಸ್ಪತ್ರೆ ನೀಡಲಾರದ ಸರ್ಕಾರಗಳಿಗೆ ಆರೋಗ್ಯದ ಚಿಂತನೆ ಬಾರದು: ಬಿಎಂ. ಭಟ್

KannadaprabhaNewsNetwork |  
Published : Oct 22, 2026, 02:45 AM IST
ಫೋಟೋ: ೧೫ಪಿಟಿಆರ್-ಪ್ರೊಟೆಸ್ಟ್ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ತಾಲೂಕಿಗೊಂದು ಆರೋಗ್ಯ ಸೇವೆಯ ಆಸ್ಪತ್ರೆ ನೀಡಲಾರದ ಸರ್ಕಾರಗಳು ನಮ್ಮ ಆರೋಗ್ಯದ ಬಗ್ಗೆ ಹೇಗೆ ಚಿಂತನೆ ಮಾಡುತ್ತವೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಸವಲತ್ತುಗಳಿಲ್ಲ. ತಜ್ಞ ವೈದ್ಯರಿಲ್ಲ. ಗರ್ಭಿಣಿಯರನ್ನು ಕರೆದುಕೊಂಡು ಹೋದರೂ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ. ಔಷಧಿಗಳಿಲ್ಲ. ಇದು ಸರ್ಕಾರಗಳ ಆರೋಗ್ಯ ಕೆಟ್ಟಿದೆ ಎಂಬುವುದನ್ನು ಸಾಬೀತು ಪಡಿಸುತ್ತಿದೆ ಎಂದು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಆರೋಪಿಸಿದರು.

ಕನ್ನಡಪ್ರಭ : ತಾಲೂಕಿಗೊಂದು ಆರೋಗ್ಯ ಸೇವೆಯ ಆಸ್ಪತ್ರೆ ನೀಡಲಾರದ ಸರ್ಕಾರಗಳು ನಮ್ಮ ಆರೋಗ್ಯದ ಬಗ್ಗೆ ಹೇಗೆ ಚಿಂತನೆ ಮಾಡುತ್ತವೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಸವಲತ್ತುಗಳಿಲ್ಲ. ತಜ್ಞ ವೈದ್ಯರಿಲ್ಲ. ಗರ್ಭಿಣಿಯರನ್ನು ಕರೆದುಕೊಂಡು ಹೋದರೂ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ. ಔಷಧಿಗಳಿಲ್ಲ. ಇದು ಸರ್ಕಾರಗಳ ಆರೋಗ್ಯ ಕೆಟ್ಟಿದೆ ಎಂಬುವುದನ್ನು ಸಾಬೀತು ಪಡಿಸುತ್ತಿದೆ ಎಂದು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಆರೋಪಿಸಿದರು. ಅವರು ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ಗುರುವಾರ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಈಗ ಇರುವ ಸ್ಥಳದಲ್ಲಿಯೇ ಉಳಿಸಿಕೊಳ್ಳಬೇಕು. ಕ್ಯಾನ್ಸರ್ ಚಿಕಿತ್ಸೆಯ ಕಿದ್ವಾಯಿ ಆಸ್ಪತ್ರೆ ಹಾಗೂ ಹೃದಯರೋಗ ಸಂಬಂಧಿತ ಜಯದೇವ ಆಸ್ಪತ್ರೆಯ ಶಾಖೆಗಳನ್ನು ಪುತ್ತೂರಿನಲ್ಲಿ ಆರಂಬಿಸಬೇಕು ಎಂದು ಆಗ್ರಹಿಸಿ ಪುತ್ತೂರು ಆಡಳಿತಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಸಿಪಿಐಎಂ ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ.ಸತೀಶನ್ ಅವರು ಪುತ್ತೂರಿನ ಪೇಟೆ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಸೌಲಭ್ಯಪೂರ್ಣ ಆಸ್ಪತ್ರೆಯನ್ನಾಗಿ ಮಾಡಬೇಕು ಎಂದರು.ಕಾರ್ಮಿಕ ಮುಖಂಡರಾದ ಈಶ್ವರಿ ಎಲ್ ಪದ್ಮುಂಜ, ದಾಮೋದರ ಹಿರೆಬಂಡಾಡಿ, ಕೃಷ್ಣ ನಿಡ್ಪಳ್ಳಿ, ಚಿದಾನಂದ, ಸುಂದರ್ ಗೋಳಿತ್ತಡಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ರಂಜಿತಾ, ಕಾರ್ಯದರ್ಶಿ ಲತಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ಬಳಿಕ ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ