ಉಡುಪಿ ಉಚ್ಚಿಲ ದಸರಾದಲ್ಲಿ ಕವಿಗೋಷ್ಠಿ

KannadaprabhaNewsNetwork |  
Published : Oct 22, 2026, 02:45 AM IST
19ಕವಿಗೋಷ್ಠಿ | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ನೇ ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿ ಆಯೋಜಿಸಲಾಗಿತ್ತು.

ಉಚ್ಚಿಲ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ನೇ ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿ ಆಯೋಜಿಸಲಾಗಿತ್ತು.

ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಸಾಹಿತ್ಯವೂ ಬದುಕಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ದಸರಾದ ಪ್ರಯುಕ್ತ ಕವಿಗೋಷ್ಠಿ ವಿಶೇಷವಾದ ಕಾರ್ಯಕ್ರಮವಾಗಿದೆ. ಮುಂದಿನ ವರ್ಷ ಇನ್ನಷ್ಟು ಉತ್ತಮ ರೀತಿಯಲ್ಲಿ ಆಯೋಜಿಸಲಾಗುವುದು ಎಂದರು.

ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಅವರ ‘ಭಕ್ತಿ ಭಾವ ಬದುಕು’ ಕೃತಿ ಹಾಗೂ ಕವಿ, ಪತ್ರಕರ್ತ ಯಶವಂತ ಬೋಳೂರು ಅವರ ‘ಮೊಗವೀರ ಕುಲಗುರು ಮಾಧವ ಮಂಗಳ ಪೂಜಾರ್ಯರ ಕುರಿತ ಧ್ವನಿ ಸುರುಳಿ’ ಲೋಕಾರ್ಪಣೆಗೊಂಡಿತು.ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈಯ ಅಧ್ಯಕ್ಷ ಅಜಿತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಟ್ರಸ್ಟಿಗಳಾದ ದೇವರಾಜ ಬಂಗೇರ, ಲಕ್ಷ್ಮಣ ಶ್ರೀಯಾನ್, ಉಪಾಧ್ಯಕ್ಷೆ ದಯಾವತಿ ಸುವರ್ಣ, ಸಹ ಕಾರ್ಯದರ್ಶಿ ಪ್ರೀತಿ ಶ್ರೀಯಾನ್, ದ.ಕ.ಘಟಕದ ಉಪಾಧ್ಯಕ್ಷರಾದ ಮೋಹನ್ ಕೋಡಿಕಲ್, ಕಾರ್ಯದರ್ಶಿ ಭರತ್ ಎರ್ಮಾಳು, ಮೊಗವೀರ ಸಮಿತಿ ಕಾರ್ಯಧ್ಯಕ್ಷ ರಾಜೇಶ್ ಪುತ್ರನ್, ಮ್ಯಾನೇಜರ್ ಪ್ರಮೋದ್ ಪುತ್ರನ್, ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ ಪ್ರಮುಖರಾದ ಮೋಹಿನಿ ಮಲ್ಪೆ, ಸುರೇಖ ಪುತ್ರನ್, ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳು, ಯಜ್ಞೇಶ್ ಉಪಸ್ಥಿತರಿದ್ದರು. ಮೊಗವೀರ ಕನ್ನಡ ಮಾಸಿಕದ ಸಂಪಾದಕರಾದ ಅಶೋಕ್ ಸುವರ್ಣ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ