ಡಂಬಳ: ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಪ್ರೌಢಶಾಲಾ ಬಿಆರ್‌ಪಿ ಹನುಮರೆಡ್ಡಿ ಇಟಗಿ ತಿಳಿಸಿದರು.
ಪ್ರತಿಭಾ ಕಾರಂಜಿಯಿಂದ ಜಾನಪದ ನೃತ್ಯ, ಗಜಲ್, ಚಿತ್ರಕಲೆ ಸೇರಿದಂತೆ ವಿವಿಧ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ ಎಂದರು.
ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯೋಪಾಧ್ಯಯರಾದ ಶಶಿಕಲಾ ಸುಳಿಭಾವಿ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ವಿವಿಧ ಕಲೆಗಳಲ್ಲಿ ಕರಗತ ಹೊಂದಿರುತ್ತಾರೆ. ಆ ಪ್ರತಿಭೆ ಹೊರಹೊಮ್ಮಲು ಬಹುದೊಡ್ಡ ಜ್ಞಾನದ ಭಂಡಾರ ಹೆಚ್ಚಿಸುವ ವೇದಿಕೆಯಾಗಿದೆ ಎಂದರು.ಡಂಬಳ ವಲಯ ಸಿಆರ್‌ಪಿ ಮುರ್ತುಂಜಯ್ಯ ಪೂಜಾರ ಮಾತನಾಡಿ, ಪ್ರತಿಯೊಬ್ಬ ಮಗುವಿನ ಜ್ಞಾನದ ಸುಧೆ ಬೆಳೆದು ಬರಲು, ವಿದ್ಯಾರ್ಥಿಗಳ ಜ್ಞಾನದ ಮೂಲಕ ಪ್ರತಿಭೆ ಬೆಳೆವಣಿಗೆಗೆ ಪ್ರಮುಖ ವೇದಿಕೆಯನ್ನು ಒದಗಿಸಿರುವುದು ಪ್ರತಿಭಾ ಕಾರಂಜಿ ಎಂದರು.
ಡಂಬಳ ವಲಯ ಸಿಆರ್‌ಪಿ ಎಸ್.ಎಂ. ಪಾಟೀಲ ಮಾತನಾಡಿ, ಪ್ರತಿಭಾ ಕಾರಂಜಿ ಪ್ರತಿಭೆವುಳ್ಳ ಮಕ್ಕಳಲ್ಲಿ ಹುದಗಿರುವ ಜ್ಞಾನವನ್ನು ಹೊರತರಲು ಮುಖ್ಯ ವೇದಿಕೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಬಹುದೊಡ್ಡ ವೇದಿಕೆಯಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ, ಗ್ರಾಪಂ ಸದಸ್ಯ ಲಿಂಗನಗೌಡ ಹರ್ತಿ ಮಾತನಾಡಿ, ಮಕ್ಕಳ ಪರಿಪಕ್ವತೆ ಹೊರಹೊಮ್ಮಲು ಇಂತಹ ಆಲೋಚನೆಗಳ ಕೇಂದ್ರಬಿಂದುವಾಗಿರುವ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆಗೆ ಒಂದು ದೊಡ್ಡ ವೇದಿಕೆಯಾಗಿದೆ. ಸೂಕ್ತವಾದ ಪ್ರತಿಭೆಗಳನ್ನು ಆಯ್ಕೆ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಮಳ್ಳಪ್ಪ ಅಳವಂಡಿ, ಗ್ರಾಪಂ ಸದಸ್ಯ ಅಲ್ಲಾಭಕ್ಷಿ ದೊಡ್ಡಮನಿ, ಭರಮಗೌಡ ಪಾಟೀಲ, ಪತ್ರಕರ್ತ ರಿಯಾಜಅಹ್ಮದ ದೊಡ್ಡಮನಿ, ಶಿಕ್ಷಕರಾದ ಎಂ.ಕೆ. ಪೂಜಾರ, ಯು.ವಿ. ಹಂಚಿನಾಳ, ಸುರೇಶ ಮಾಳಿ, ರಾಮಪ್ಪ ಕೂಲಿ, ಲಲಿತಾ ಗುಟಿಗೊಂಡಣ್ಣದ, ಎಸ್.ವೈ. ಕನ್ನೆರ, ಶಿವಾನಂದ ಬ್ಯಾಳಿ, ಬಸಿರಾ ದಾದಪ್ಪನವರ, ರವಿ ಕುದಿರಿಮೋತಿ, ಕುಬೇಂದ್ರಶಾಸ್ತ್ರಿ ಹಕ್ಕಂಡಿ, ಐರನ್ ರಾಣಿ, ಚನಬಸಯ್ಯ ಹಿರೇಮಠ, ವೆಂಕಪ್ಪ ನಾಗನೂರ, ಮುಕ್ತಾ ಪಿ.ಟಿ., ದ್ರಾಕ್ಷಾಯಿಣಿ ಮಂಗೋಣಿ, ಹಮ್ಮದ ಕುಷ್ಟಗಿ, ಶಿವಾನಂದ ಉಪ್ಪಾರ, ಶ್ರೀದೇವಿ ಮೂಲಿಮನಿ, ರೋಷನಬಿ, ಡಂಬಳ ಕ್ಲಸ್ಟರ್ ಮಟ್ಟದ ಮುಖ್ಯೋಪಾಧ್ಯಾಯರು, ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದ್ದರು.