ಕನ್ನಡಪ್ರಭ ವಾರ್ತೆ ಕಲಬುರಗಿ
371ನೇ ಜೇ ಕಲಂ ಕಲ್ಯಾಣಕ್ಕೆ ಅಷ್ಟೇ ಯಾಕೆಂದು ಪ್ರಶ್ನಿಸಿ ಬೆಂಗಳೂರಲ್ಲಿ ಜೂ.1ರಂದು ಅವರು ನಡೆಸಲು ಮುಂದಾಗಿರುವ ಹೋರಾಟವನ್ನು ಸಭೆಯಲ್ಲಿ ಖಂಡಿಸಲಾಯ್ತು. ಸಂವಿಧಾನ ವಿರೋಧಿ ಪ್ರತಿಭಟನೆಗೆ ಕಲ್ಯಾಣದಲ್ಲಿ ಉಗ್ರ ಹೋರಾಟಕ್ಕೆ ನಿರ್ಧಾರ ಮಾಡಲಾಯ್ತು.
ಸಭೆಯಲ್ಲಿ ಪಾಲ್ಗೊಂಡಿದ್ದ 7 ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸಲು ತಜ್ಞರ, ಪರಿಣಿತರ, ಬುದ್ಧಿಜೀವಿಗಳ, ಹೋರಾಟಗಾರರ,ಯುವ , ವಿದ್ಯಾರ್ಥಿಗಳ ಮತ್ತು ಆಯಾ ಕ್ಷೇತ್ರದ ಗಣ್ಯರುಗಳ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರು ಭಾಗದಲ್ಲಿನ ಕಲ್ಯಾಣ ವಿರೋಧಿ ಧೋರಣೆ ಖಂಡಿಸಿದರು.ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಬೆಂಗಳೂರಿನಲ್ಲಿ ಕೆಲವು ಸಂವಿಧಾನ ವಿರೋಧಿ ಶಕ್ತಿಗಳು ಬರುವ ಜೂನ್ 1ನೇ ತಾರೀಕಿನಂದು ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ ವಿಶೇಷ ಸ್ಥಾನಮಾನದಿಂದ ರಾಜ್ಯದ ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಪಾಲು ಕಲ್ಯಾಣ ಕರ್ನಾಟಕದರೆ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯ ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ಪ್ರತಿಭಟನೆ ಅಸಂವಿಧಾನಿಕ ಎಂದರು.
ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕದ ಸಚಿವರು ಮತ್ತು ಜನಪ್ರತಿನಿಧಿಗಳಿಗೆ ಸಂಪರ್ಕಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಭೇಟಿ ಮಾಡುವುದು ಅದರಂತೆ ಎಳು ಜಿಲ್ಲೆಗಳಿಗೆ ಭೇಟಿ ನೀಡಿ ಉಗ್ರ ಹೋರಾಟ ಹಮ್ಮಿಕೊಳ್ಳಲು ಇಂದಿನ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮುಂದಿನ ಹೋರಾಟದ ಬಗ್ಗೆ ಸೈಯದ್ ಸಜ್ಜಾದ ಅಲಿ, ಮನೀಷ್ ಜಾಜು,ಲಿಂಗರಾಜ ಸಿರಗಾಪೂರ, ಮಂಜುನಾಥ ನಾಲವರಕರ್, ಸುಭಾಷ್ ಶೀಲವಂತ, ಬಿ.ಬಿ.ನಾಯಕ, ಶಿವಲಿಂಗಪ್ಪ ಭಂಡಕ, ದತ್ತು ಭಾಸಗಿ, ಮುತ್ತಣ್ಣ ನಾಡಗೇರಿ, ಗೋಪಾಲ ನಾಟಿಕರ್, ಮನೋಹರ್ ಬೀರನೋರ, ಭೀಮರಾಯ ಕಂದಳ್ಳಿ,ರಾಜಶೇಖರ ಹೀರೆಮಠ,ವಿನೋದ, ಮಹೆಬೂಬ್, ಅಸ್ಲಂ ಚೌಂಗೆ, ಅಬ್ದುಲ್ ರಹೀಂ, ಆನಂದ ದೇಶಪಾಂಡೆ ಮಾತನಾಡಿದರು.
ಈ ದುಂಡು ಮೇಜಿನ ಸಭೆಯಲ್ಲಿ ಅಶೋಕ ಗುರೂಜಿ,ಮಲ್ಲಿನಾಥ ಸಂಗಶೆಟ್ಟಿ,ಬಾಬಾ ಫಕ್ರುದ್ದೀನ್, ಶರಣಬಸಪ್ಪ ಕುರಿಕೋಟಾ, ಗಿರೀಶ ಗೌಡ,ರಾಜು ಜೈನ, ಆನಂದ ಕಪನೂರ, ಬಸವರಾಜ ಕೋಣಿನ, ಶರಣಪ್ಪ ಕಿರಣಗಿ, ಶಿವಕುಮಾರ್ ಪಾಟೀಲ, ವೀರಶೆಟ್ಟಿ ಹುಡುಗಿ,ಪೊ.ಮಂಜೂರ್ ಅಹ್ಮದ್, ಸಾಬಿರ ಅಲಿ, ಬಸವರಾಜ ಕಲ್ಯಾಣಿ, ತುಕಾರಾಂ ರಾಠೋಡ್, ಅಮಿತ್ ಪರಮೇಶ್ವರ ಸೇರಿದಂತೆ ನೂರಾರು ಆಯಾ ಕ್ಷೇತ್ರದ ಗಣ್ಯರು, ನಾಗರಿಕರು, ಯುವಕರು ವಿಧ್ಯಾರ್ಥಿಗಳು ಭಾಗವಹಿಸಿದರು.ಸಭೆಯಲ್ಲಿ ಕೈಗೊಂಡ ನಿರ್ಣಯಗಳು
2) ಕಲ್ಯಾಣ ಕರ್ನಾಟಕದ ಸಚಿವರು ಸಂಸದರ ಶಾಸಕರುಗಳ ಸಭೆ ನಡೆಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಭೇಟಿ ಮಾಡಲು ಒತ್ತಡ ತರುವುದು.
4) ಉಗ್ರ ಹೋರಾಟಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್ ಹೋರಾಟ ನಡೆಸುವದು.
6) ಸಂವಿಧಾನ ವಿರೋಧಿ ಮತ್ತು 371ನೇ ಜೇ ಕಲಂ ವಿರೋಧಿ ಶಕ್ತಿಗಳ ಹೋರಾಟಕ್ಕೆ ಸರ್ಕಾರ ಅವಕಾಶ ನೀಡದಂತೆ ಒತ್ತಾಯಿಸುವುದು.