ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹೆಮ್ಮೆಯ ವಿಷಯ: ನೀಲಪ್ರಭಾ

KannadaprabhaNewsNetwork |  
Published : Sep 20, 2024, 01:33 AM IST
ಗುರುಮಠಕಲ್ ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣವನ್ನು ತಹಸೀಲ್ದಾರ್ ಕೆ. ನೀಲಪ್ರಭಾ ನೇರೆವೇರಿಸಿದರು. | Kannada Prabha

ಸಾರಾಂಶ

Kalyan Karnataka Liberation Day Pride: Neelaprabha

ಗುರುಮಠಕಲ್‌: ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯವಾಗಲು ನಡೆದ ಹೋರಾಟ, ತ್ಯಾಗ, ಬಲಿದಾನ ಕೊನೆಗೆ ಪಟೇಲರ ನಿರ್ಧಾರದಿಂದ ಹೈದ್ರಾಬಾದ್ ಕರ್ನಾಟಕ ಭಾರತದಲ್ಲಿ ವಿಲೀನವಾಗಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸುತ್ತಿದ್ದು, ಹೆಮ್ಮೆಯ ವಿಷಯ ಎಂದು ತಹಸೀಲ್ದಾರ್ ಕೆ. ನೀಲಪ್ರಭಾ ಹೇಳಿದರು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜರೋಹಣ ಸಮಿತಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಧ್ವಜರೋಹಣ ನೇರವೇರಿಸಿ ಅವರು ಮಾತನಾಡಿ, ಭಾರತಕ್ಕೆ ಆ.14 ರಂದು ಸ್ವಾತಂತ್ರ್ಯವಾದರೆ ನಮ್ಮ ಭಾಗಕ್ಕೆ ಸೆ.17 ರಂದು ಸ್ವಾತಂತ್ರ್ಯ ಸಂಭ್ರಮ ಆಚರಿಸುತ್ತಿದ್ದೇವೆ ಎಂದರು. ಶಿಕ್ಷಕ ಚಂದ್ರಶೇಖರ್ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ತಾಪಂ ಇಒ ಅಮರೇಶ ಪಾಟೀಲ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂತೋಷಕುಮಾರ್ ನಿರೇಟಿ, ಸಿಡಿಪಿಒ ಶರಣಬಸಪ್ಪ, ಉಪತಹಸೀಲ್ದಾರ್ ನರಸಿಂಹಸ್ವಾಮಿ, ಎಎಸ್‌ಐ ಭೀಮಪ್ಪ ಕಾನಾಗಡ್ಡ, ತಾಲೂಕು ಸರ್ಕಾರಿ ನೌಕರರ ಪ್ರಾಥಮಿಕ ಶಾಲೆ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಶಿಕ್ಷಣ ಸಂಯೋಜಕ ರವೀಂದ್ರ ಚಹ್ವಾಣ, ಗ್ರೇಡ್-2 ತಹಸೀಲ್ದಾರ್ ಹೀಜಾಜ್ ಹುಲ್ ಹಕ್, ಸಿಆರ್‌ಪಿ ಬಾಲಪ್ಪ, ದೈಹಿಕ ಶಿಕ್ಷಕರಾದ ಅಂಜನೇಯಲು, ಲಕ್ಷ್ಮಿಕಾಂತರೆಡ್ಡಿ, ದೇವಿಂದ್ರಪ್ಪ, ಮಹೇಶ ಕಲಾಲ್ ವಿದ್ಯಾರ್ಥಿಗಳು ಇದ್ದರು.

-----

18ವೈಡಿಆರ್14 ಗುರುಮಠಕಲ್ ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣವನ್ನು ತಹಸೀಲ್ದಾರ್ ಕೆ. ನೀಲಪ್ರಭಾ ನೇರೆವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ