ಕಲ್ಯಾಣಪುರ: ಇಲ್ಲಿನ ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಂರಕ್ಷಿತ ವೀರ ಮಾಸ್ತಿ ಕಲ್ಲನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭಾನುವಾರ ಲೋಕಾರ್ಪಣೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿಯ ಆದಿಮ ಕಲಾ ಟ್ರಸ್ಟ್ನ ಸ್ಥಾಪಕ ಸಂಚಾಲಕ ಪ್ರೊ. ಟಿ. ಮುರುಗೇಶಿ, ದಕ್ಷಿಣ ಭಾರತದಲ್ಲಿ 9 - 13 ನೇ ಶತಮಾನದವರೆಗೆ ರಾಜ ಸತ್ತಾಗ ಅವನ ಪತ್ನಿಯರು ಪ್ರಾಣ ತ್ಯಾಗ ಮಾಡುವ ವೇಳೆವಾಳಿ ಪದ್ದತಿ ಇತ್ತು. ಅಂತಹ ವೇಳೆವಾಳಿ ಪ್ರತೀಕವಾಗಿ ಈ ಮಾಸ್ತಿಕಲ್ಲು ನಿರ್ಮಿಸಲಾಗಿದೆ, ಅದರ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದರು.
ಗಜನಿ ಫೌಂಡೇಶನ್ ಮುಲ್ಕಿ ಹಾಗೂ ಪಡುನಾಡು ಕೂಟದ ಅಧ್ಯಕ್ಷ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಜಿಯೋಸಿಸ್ ಟೆಕ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ರಾಜಶೇಖರ ಕೋಟ್ಯಾನ್, ಹಂಪಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಭಾಗವಹಿಸಿದ್ದರು. ಉಪನ್ಯಾಸಕಿ ಸ್ಮಿತಾ ನಿರೂಪಿಸಿದರು.