ಕಲ್ಯಾಣಪುರ: ಉಡುಪಿ ತುಳುಕೂಟದಿಂದ ತುಳು ಮಿನದನ

KannadaprabhaNewsNetwork |  
Published : Dec 10, 2024, 12:32 AM IST
09ತುಳು | Kannada Prabha

ಸಾರಾಂಶ

ತುಳುಕೂಟ ಉಡುಪಿ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ರೋಟರಿ ಕ್ಲಬ್ ಕಲ್ಯಾಣಪುರ ಜೈ ತುಳುನಾಡ್ ಉಡುಪಿ, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಆಶ್ರಯದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಶನಿವಾರ ತುಳುಮಿನದನ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ತನ್ನದೇ ಆದಂತಹ ಸ್ವಂತ ಲಿಪಿ ಹೊಂದಿಕೊಂಡು ಸಮೃದ್ಧವಾಗಿದೆ. ದೇಶವಿದೇಶಗಳಲ್ಲಿ ತುಳುವರು ಹರಡಿಕೊಂಡಿದ್ದು, ಯವಜನತೆಯ ತುಳು ಭಾಷೆ ಮಾತನಾಡುವ ಮೂಲಕ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ.ನಾವೂರು ಹೇಳಿದ್ದಾರೆ.

ತುಳುಕೂಟ ಉಡುಪಿ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ರೋಟರಿ ಕ್ಲಬ್ ಕಲ್ಯಾಣಪುರ ಜೈ ತುಳುನಾಡ್ ಉಡುಪಿ, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಆಶ್ರಯದಲ್ಲಿ ಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಶನಿವಾರ ನಡೆದ ತುಳುಮಿನದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಕರಾವಳಿಯಲ್ಲಿ ತುಳು ಭಾಷಾ ಮೀಸಲಾತಿಯೊಂದಿಗೆ ಅನುಮತಿ ಪಡೆದ ವೈದ್ಯಕೀಯ ಕಾಲೇಜುಗಳು ಪ್ರಸ್ತುತ ಡೀಮ್ಡ್ ಯುನಿವರ್ಸಿಟಿಯಾಗಿ ಮಾರ್ಪಾಟುಗೊಂಡು ತುಳು ಕೋಟಾದಡಿ ವೈದ್ಯಕೀಯ ಸೀಟುಗಳನ್ನು ರದ್ದುಗೊಳಿಸಿರುವುದು ವಿಷಾದನೀಯ ಎಂದರು.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ಧರ್ಮಗುರು ಫರ್ಡಿನಾಂಡ್ ಗೋನ್ಸಾಲೀಸ್, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಡಾ. ಮಾಧವೆ ಎಂ.ಕೆ, ಕುಡ್ಲ ಜೈ ತುಳುನಾಡ್ ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಪೂಂಜ, ಉಡುಪಿ ಘಟಕದ ಅಧ್ಯಕ್ಷೆ ಸುಶೀಲಾ ಜಯಕರ್, ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ಬ್ಯಾಪ್ಟಿಸ್ಟ್ ಡಯಾಸ್, ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ಕೋಶಾಧಿಕಾರಿ ಎಂ.ಜಿ.ಚೈತನ್ಯ ಇದ್ದರು.

ತುಳುಕೂಟ ಉಡುಪಿ ತುಳು ಮಿನದನ ಕಾರ್ಯಕ್ರಮದ ಸಂಚಾಲಕ ಡಾ.ವಿ.ಕೆ.ಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ