ಕಾಮನಕೆರೆ ಮೊರಾರ್ಜಿ ವಸತಿ ನಿಲಯ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Aug 03, 2025, 01:30 AM IST
2 ಬೀರೂರು 1ಬೀರೂರು ಸಮೀಪದ ಕಾಮನಕೆರೆ ಮೊರಾರ್ಜಿ ವಸತಿ ಶಾಲೆಗೆ ಖಾಯಂ ಪ್ರಾಚಾರ್ಯರು ಮತ್ತು ನಿಲಯ ಮೇಲ್ವಿಚಾರಕರನ್ನು ನೇಮಕಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬೀರೂರುವಸತಿ ಶಾಲೆಗೆ ಖಾಯಂ ಪ್ರಾಚಾರ್ಯ ಮತ್ತು ನಿಲಯದ ಮೇಲ್ವಿಚಾರಕರನ್ನು ನೇಮಕ ಮಾಡುವವರೆಗೂ ಊಟ ಮಾಡುವುದಿಲ್ಲ ಎಂದು ತಾಲೂಕಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಗಳು ಶಾಲಾ ಆವರಣ ದಲ್ಲಿ ಧರಣಿ ನಡೆಸಿದ ಪ್ರಸಂಗ ಶನಿವಾರ ನಡೆಯಿತು.

ನಮ್ಮ ಸಮಸ್ಯೆಗೆ ಸ್ಪಂದಿಸುವ ವಾರ್ಡನ್ ವೀಣಾರನ್ನು ಬದಲಿಸಬಾರದು । ಕೂಡಲೇ ಪ್ರಾಚಾರ್ಯರನ್ನು ಬದಲಿಸಲು ಆಗ್ರಹ

ಕನ್ನಡಪ್ರಭ ವಾರ್ತೆ, ಬೀರೂರು

ವಸತಿ ಶಾಲೆಗೆ ಖಾಯಂ ಪ್ರಾಚಾರ್ಯ ಮತ್ತು ನಿಲಯದ ಮೇಲ್ವಿಚಾರಕರನ್ನು ನೇಮಕ ಮಾಡುವವರೆಗೂ ಊಟ ಮಾಡುವುದಿಲ್ಲ ಎಂದು ತಾಲೂಕಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಗಳು ಶಾಲಾ ಆವರಣ ದಲ್ಲಿ ಧರಣಿ ನಡೆಸಿದ ಪ್ರಸಂಗ ಶನಿವಾರ ನಡೆಯಿತು.

ಈ ಹಿಂದೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ದೈಹಿಕ ಶಿಕ್ಷಕ ಯಲ್ಲಪ್ಪ ಸರಿಯಾಗಿ ಊಟ-ತಿಂಡಿ ನೀಡುತ್ತಿ ರಲಿಲ್ಲ. ಆದರೆ ಇತ್ತೀಚೆಗೆ ಆಲ್ದೂರಿನಿಂದ ನಿಯೋಜನೆ ಮೇಲೆ ಬಂದಿರುವ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಶುಚಿ, ರುಚಿ ಯಾದ ಊಟ ನೀಡುತ್ತಿದ್ದರು. ನಮ್ಮ ಸಮಸ್ಯೆ ಆಲಿಸುತ್ತಿದ್ದರು. ಆದರೆ ಯಾವುದೋ ಕಾರಣ ನೀಡಿ ಅವರನ್ನು ಅಮಾನತು ಮಾಡ ಲಾಗಿದೆ. ಅಮಾನತು ಮಾಡುವುದು ಇಲಾಖೆಗೆ ಸಂಬಂಧಿಸಿದ ವಿಚಾರ. ಈ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ವಿಷಯ ಶಿಕ್ಷಕರಿಗೆ ನಿಲಯ ಮೇಲ್ವಿಚಾರಣೆ ಉಸ್ತುವಾರಿ ನೀಡಬಾರದು ಮತ್ತು ಪ್ರಾಚಾರ್ಯರನ್ನು ಕೂಡಲೇ ಬದಲಿಸಬೇಕು ಎಂಬುದು ನಮ್ಮ ಆಗ್ರಹ ಎಂದು ವಿದ್ಯಾರ್ಥಿಗಳು ಅಳಲುತೋಡಿಕೊಂಡರು.ಶಾಲೆಯ ಕೆಲವು ಶಿಕ್ಷಕರ ಸಣ್ಣ ಸಣ್ಣ ತಪ್ಪುಗಳಿಗೆ ನೋಟಿಸ್ ನೀಡಲಾಗುತ್ತದೆ. ಆದರೆ ಪ್ರಾಚಾರ್ಯರು ರಾತ್ರಿ ಸಮಯ ತಮ್ಮ ಮನೆಗೆ ವಿದ್ಯಾರ್ಥಿಗಳ ಕೈಯಲ್ಲೆ ಊಟ ತರಿಸಿಕೊಳ್ಳುತ್ತಾರೆ. ಇದು ತಪ್ಪಲ್ಲವೆ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು, ಮಕ್ಕಳ ಕೈಲಿ ಊಟ ತರಿಸಿಕೊಳ್ಳುವ ಪ್ರಾಚಾರ್ಯರಿಗೇಕೆ ನೋಟಿಸ್ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

ಊಟದಲ್ಲಿ ಹುಳುಗಳಿರುತ್ತವೆ. ರುಚಿಯಾಗಿರುವುದಿಲ್ಲ. ಕೆಲವು ದಿನಗಳ ಹಿಂದಷ್ಟೇ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ನ್ಯೂನ್ಯತೆ ಸರಿಪಡಿಸಿ ಕೊಳ್ಳುವಂತೆ ನಿಲಯದ ಸಿಬ್ಬಂದಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರು ಶಾಲೆಗೆ ಭೇಟಿ ನೀಡು ತ್ತಾರೆ ಎಂದಾಗ ಮಾತ್ರ ಶುಚಿ, ರುಚಿಯಾಗಿ ಅಡುಗೆ ಮಾಡಲಾಗುತ್ತದೆ ಎಂದು ನಿಲಯದ ವ್ಯವಸ್ಥೆಯ ಬಗ್ಗೆ ಆರೋಪಿಸಿದರು.ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ವಸತಿ ಶಾಲೆಗೆ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಊಟ ಮಾಡದೆ ಶಾಲೆ ಮುಂದೆ ಧರಣಿಯಲ್ಲಿ ನಿರತರಾದರು. ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಂಯೋಜಕಿ ಶೈಲಾ ಮಾತನಾಡಿ, ನ್ಯೂನ್ಯತೆ ಸರಿಪಡಿಸಲಾಗುವುದು ಮತ್ತು ಶಾಲೆಗೆ ವಿದ್ಯಾರ್ಥಿ ಗಳ ಬೇಡಿಕೆಯಂತೆ ಕಾಯಂ ಮೇಲ್ಚಿಚಾರಕರು ಮತ್ತು ಪ್ರಾಚಾರ್ಯರನ್ನು ನೇಮಕ ಮಾಡುವಂತೆ ಹಿರಿಯ ಅಧಿಕಾರಿ ಗಳಿಗೆ ಮಕ್ಕಳ ಪರವಾಗಿ ಮನವಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಸಂತೋಷ್ ಮತ್ತಿತರಿದ್ದರು.-- ಬಾಕ್ಸ್ ಸುದ್ದಿ--

ನಿಯೋಜನೆ, ವರ್ಗಾವಣೆಗೆ ಆದೇಶ

ವಸತಿ ನಿಲಯದ ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಿದ್ಯಾರ್ಥಿ ನಿಲಯದ ಗೀತಾ ಅವರನ್ನು ಕಾಮನಕರೆ ವಸತಿ ಶಾಲೆಗೆ ಮೇಲ್ವಿಚಾರಕಿಯಾಗಿ ಹಾಗೂ ಚೌಳಹಿರಿಯೂರಿನ ವಸತಿ ಶಾಲೆ ಪ್ರಾಂಶುಪಾಲ ಧನರಾಜ್ ರನ್ನು ಹೆಚ್ಚುವರಿ ಪ್ರಾಂಶುಪಾಲರಾಗಿ ಕಾಮನಕೆರೆ ವಸತಿ ಶಾಲೆಗೆ ನಿಯೋಜಿಸಿ ಆದೇಶ ಮಾಡಿದ್ದು. ಈ ಹಿಂದೆ ಮೇಲ್ವಿಚಾರಕ ಹುದ್ದೆಯಲ್ಲಿದ್ದ ಯಲ್ಲಪ್ಪ ಅವರ ಬಗ್ಗೆ ವಿದ್ಯಾರ್ಥಿಗಳಿಂದ ಸಾಕಷ್ಟು ದೂರು ಬಂದ ಹಿನ್ನಲೆಯಲ್ಲಿ ಕೊಪ್ಪ ತಾಲೂಕಿನ ಹರಂದೂರಿನ ವಸತಿ ಶಾಲೆಗೆ ವರ್ಗಾಯಿಸಿರುವುದಾಗಿ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದರು. 2 ಬೀರೂರು 1ಬೀರೂರು ಸಮೀಪದ ಕಾಮನಕೆರೆ ಮೊರಾರ್ಜಿ ವಸತಿ ಶಾಲೆಗೆ ಖಾಯಂ ಪ್ರಾಚಾರ್ಯರು ಮತ್ತು ನಿಲಯ ಮೇಲ್ವಿಚಾರಕರನ್ನು ನೇಮಕಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''