ನಿವೇಶನ, ವಸತಿ ರಹಿತರ ಸೂಕ್ತ ಸಮೀಕ್ಷೆಗೆ ಸಂಸದ ಶ್ರೇಯಸ್ ಪಟೇಲ್ ಸೂಚನೆ

KannadaprabhaNewsNetwork |  
Published : Aug 03, 2025, 01:30 AM IST
2ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆಯಲ್ಲಿ ನಿಗದಿತ ಗುರಿ ತಲುಪಲು ಬೀರೂರು ಮತ್ತು ಕಡೂರು ಎರಡೂ ಪುರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಕಡೂರು ಪುರಸಭೆಯಲ್ಲಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಮೀಕ್ಷೆ ಕುರಿತು ನಡೆದ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಕಡೂರು

ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆಯಲ್ಲಿ ನಿಗದಿತ ಗುರಿ ತಲುಪಲು ಬೀರೂರು ಮತ್ತು ಕಡೂರು ಎರಡೂ ಪುರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಪುರಸಭೆಯಲ್ಲಿ ಶನಿವಾರ ಕಡೂರು-ಬೀರೂರು ಪುರಸಭಾ ವ್ಯಾಪ್ತಿಯ ವಸತಿ ಮತ್ತು ನಿವೇಶನ ರಹಿತರ ಪಟ್ಟಿಯ ಸಮೀಕ್ಷೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಡೂರು ದೊಡ್ಡ ಪುರಸಭೆಯಾಗಿ ಬೆಳೆದಿದೆ. ವಸತಿ ಮತ್ತು ನಿವೇಶನ ರಹಿತರ ಸಂಖ್ಯೆ ನಿಖರವಾಗಿ ಗುರುತಿಸಬೇಕು. ಈ ತನಕ ವಾರ್ಡುಗಳ ಪೈಕಿ 18 ಕೊಳಚೆ ಪ್ರದೇಶಗಳ ಸ್ಥಳ ಗುರುತಿಸ ಲಾಗಿದೆ. ನಿವೇಶನ ಮತ್ತು ವಸತಿ ರಹಿತರು ಸೇರಿ 1482 ಜನ ಅರ್ಜಿ ಸಲ್ಲಿಸಿದ್ದಾರೆ. ಬೀರೂರಲ್ಲಿ 1530 ಅರ್ಜಿಗಳಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಬೇಕಿದೆ ಎಂದರು.ಕನಿಷ್ಠ ಈ ಸಂಖ್ಯೆ 5 ಸಾವಿರ ವಾಗುವ ಸಂಭವವಿದೆ. ಆ. 15ರ ವರೆಗೆ ಈ ಸಮೀಕ್ಷೆ ವರದಿ ಸಲ್ಲಿಸಲು ಅವಕಾಶ ಇದ್ದು ಅಷ್ಟ ರೊಳಗೆ ಕ್ರಿಯಾಶೀಲರಾಗಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ತಯಾರಿಸಿ. ಈ ಹಿಂದೆ ನಿವೇಶನಕ್ಕೆ ಅರ್ಜಿ ಸಲ್ಲಿಸಿ ತಾಂತ್ರಿಕ ಕಾರಣದಿಂದ ಕೈ ಬಿಟ್ಟವರಿಗೂ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರ ಕಡೆ ಗಮನ ಹರಿಸದಿದ್ದರೆ ಅರ್ಹರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದನ್ನು ಗಮನದಲ್ಲಿಟ್ಟು ಕೊಂಡು ಕಾರ್ಯ ನಿರ್ವಹಿಸಿ, ಬೀರೂರು ಪುರ ಸಭಾ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ, ಜನತೆಗೆ ಸ್ಪಷ್ಟ ಮಾಹಿತಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದರು. ಪಟ್ಟಣದಲ್ಲಿ ಜಾಗದ ಕೊರತೆ ಪರಿಣಾಮ ಮನೆಗಳ ನಿವೇಶನ ರಹಿತರ ಪಟ್ಟಿ ಸಮೀಕ್ಷೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಸರ್ಕಾರಿ ಹಂತದಲ್ಲಿ ದೊಡ್ಡ ಮಟ್ಟದ ಜಾಗ ಲಭ್ಯವಾದಲ್ಲಿ ನಿಗದಿತ ಗುರಿಗಿಂತ ಹೆಚ್ಚು ಪಟ್ಟು ನಿವೇಶನ ರಹಿತರ ಗುರುತಿ ಸಲು ಸಾಧ್ಯ ಎಂದು ಪುರಸಭೆ ಸದಸ್ಯ ಸೈಯ್ಯದ್ ಯಾಸೀನ್ ತಿಳಿಸಿದರು.ಈಗಾಗಲೇ ಟೆಂಡರ್ ಅನುಮೋದನೆ ಹಂತದಲ್ಲಿರುವ ಪಟ್ಟಣದ ರೇಲ್ವೆಗೇಟ್ ಬಳಿ ಬ್ರಿಡ್ಜ್ ನಿರ್ಮಾಣದ ಕಾಮಗಾರಿ ಪ್ರಕ್ರಿಯೆ ಚುರುಕುಗೊಳಿಸಬೇಕಿದೆ. ಪ್ರಯಾಣಿಕರ ಒತ್ತಾಸೆಯಂತೆ ಕಡೂರು ರೈಲ್ವೆ ನಿಲ್ದಾಣದಲ್ಲಿ ಜನ ಶತಾಬ್ದಿ ಮತ್ತು ವಂದೇ ಭಾರತ್ ರೈಲು ನಿಲುಗಡೆಗೆ ಅವಕಾಶ ಕಲ್ಲಿಸಬೇಕಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮನವಿ ಸಲ್ಲಿಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ಡಿಶ್ ಮಂಜುನಾಥ್ ಮಾತನಾಡಿ, ಕಡೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಇದೆ. 2ನೇ ಪ್ಲಾಟ್ ಫಾರಂನಲ್ಲಿ ಪ್ರತ್ಯೇಕ ಟಿಕೇಟ್ ಕೌಂಟರ್ ಸ್ಥಾಪಿಸಿದರೆ ಪ್ರಯಾಣಿಕರಿಗೆ ಅನುಕೂಲ ಎಂದರು.ಈ ಸಂದರ್ಭದಲ್ಲಿ ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಗೋಪಾಲ್ ಜಾದವ್, ಕಡೂರು ಬೀರೂರು ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಜಿ.ಪ್ರಕಾಶ್, ಪುರಸಭಾ ಸದಸ್ಯರಾದ ಮರುಗುದ್ದಿ ಮೋಹನ್, ಇಕ್ಬಾಲ್, ಶಶಿಧರ್ ಮತ್ತಿತರಿದ್ದರು. 2ಕೆಕೆಡಿಯು2. ಕಡೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಮೀಕ್ಷೆ ಪ್ರಗತಿಯ ಕುರಿತು ಪರಿಶೀಲನಾ ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಭಾಗ್ಯಲಕ್ಷಿ, ಮೋಹನ್, ಗೋಪಾಲ್ ಜಾದವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''