2022-23ರ ಕನೆಹಲಗೆ ವಿಭಾಗದ ಚಾಂಪಿಯನ್ ಅಪ್ಪು-ಥೋನ್ಸೆ ಸಾವುಕನ್ನಡಪ್ರಭ ವಾರ್ತೆ ಕಾರ್ಕಳ
ಬೇಲಾಡಿಬಾವ ಅಶೋಕ್ ಶೆಟ್ಟಿ ಅವರ ಕನಹಲಗೆ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಥೋನ್ಸೆ ಮತ್ತು ಅಪ್ಪು ಮೃತಪಟ್ಟ ಕೋಣಗಳು. ಈ ಘಟನೆ ಕರಾವಳಿಯ ಕಂಬಳ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ.ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಅದರಿಂದ ಹಟ್ಟಿಗೆ ಹೊಂದಿದ್ದ ಭತ್ತದ ಬಣವೆಗೂ ಬೆಂಕಿ ಹರಡಿತು. ಈ ವೇಳೆ ಉಂಟಾದ ಬೆಂಕಿಯ ಕೆನ್ನಾಲಿಗೆಯು ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಕಂಬಳದ ಕೋಣಗಳನ್ನು ಆಹುತಿ ತೆಗೆದುಕೊಂಡಿದೆ. ಕಂಬಳ ಪ್ರಿಯರು ಈ ಘಟನೆಯ ಬಗ್ಗೆ ಕಂಬನಿ ಮಿಡಿದಿದ್ದಾರೆ.
ಅಪ್ಪು-ಥೋನ್ಸೆ ಜೋಡಿಯು ಕನಹಲಗೆ ವಿಭಾಗದಲ್ಲಿ ಪ್ರಾದೇಶಿಕ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಹಲವು ಪ್ರಶಸ್ತಿ ಜಯಿಸಿದೆ.--------------ಥೋನ್ಸೆ ಮತ್ತು ಅಪ್ಪು ನಮ್ಮ ಕುಟುಂಬದ ಭಾಗವಾಗಿದ್ದರು. ಇಂತಹ ಘಟನೆ ಸಂಭವಿಸುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ.
। ಅಶೋಕ್ ಶೆಟ್ಟಿ, ಕೋಣಗಳ ಮಾಲಿಕ------------------------
ಕಂಬಳ ಕೋಣಗಳ ಸಾಧನೆಗಳ ವಿವರ:ಥೋನ್ಸೆ ಮತ್ತು ಅಪ್ಪು ಕೋಣಗಳು 2022-23ರ ಕನೆಹಲಗೆ ವಿಭಾಗದ ಕಂಬಳ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದವು. ಥೋನ್ಸೆ ನಂತರದ 2023–24ರ ಋತುವಿನಲ್ಲಿ ನಿವೃತ್ತಿ ಹೊಂದಿತ್ತು. ಈ ಕೋಣವನ್ನು ಅಲೆವೂರಿನಿಂದ ತರಲಾಗಿತ್ತು.ಅಪ್ಪು ಕೋಣ ಅಡ್ಡಹಲಗೆ, ಕನೆಗಲಗೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿತ್ತು. ಕೊಣಚೂರು, ಕೊಂಡೊಟ್ಟು, ಚೆನ್ನನೊಟ್ಟಿಗೆ ಹಗ್ಗ ಹಿರಿಯ ವಿಭಾಗಗಳಲ್ಲಿ ಈ ಕೋಣ ಗಮನ ಸೆಳೆಯುತ್ತಾ ಬಂದಿತ್ತು. ಅಶೋಕ್ ಶೆಟ್ಟಿಯವರ ಕೋಣಗಳು ಒಟ್ಟಾರೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದವು.