ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕ: ಐಕಳ ಹರೀಶ್ ಶೆಟ್ಟಿ

KannadaprabhaNewsNetwork |  
Published : Dec 24, 2024 12:47 AM IST
ಮೂಲ್ಕಿ ಸೀಮೆ ಅರಸು ಕಂಬಳ ಧಾರ್ಮಿಕ ಸಭೆ | Kannada Prabha

ಸಾರಾಂಶ

ಸುಮಾರು 400 ವರ್ಷಗಳ ಇತಿಹಾಸವಿರುವ ಮೂಲ್ಕಿ ಸೀಮೆಯ ಅರಸು ಕಂಬಳದ ಸಂದರ್ಭ ಜರುಗಿದ ಧಾರ್ಮಿಕ ಸಭೆಯಲ್ಲಿ ಜಾಗತಿಕ ಬಂಟರ ಸಂಘ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿದರು.

ಮೂಲ್ಕಿ ಸೀಮೆ ಅರಸು ಕಂಬಳ ಧಾರ್ಮಿಕ ಸಭೆ

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಂಬಳವು ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಾಗತಿಕ ಬಂಟರ ಸಂಘ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಸುಮಾರು 400 ವರ್ಷಗಳ ಇತಿಹಾಸವಿರುವ ಮೂಲ್ಕಿ ಸೀಮೆಯ ಅರಸು ಕಂಬಳದ ಸಂದರ್ಭ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಜಾಗತಿಕ ಬಂಟರ ಸಂಘ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರವಿಶೆಟ್ಟಿ ಮೂಡಂಬೈಲು, ಮುಂಬೈ ಬಂಟರ ಸಂಘ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆಗುತ್ತು, ರೊನಾಲ್ಡ್ ಫರ್ನಾಂಡೀಸ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಸರ್ಕಾರವು 24 ಕಂಬಳಗಳಿಗೆ 5 ಲಕ್ಷ ರು. ಹಣ ಅನುದಾನ ಮಂಜೂರು ಮಾಡಿದಕ್ಕೆ ಧನ್ಯವಾದ ಸಮರ್ಪಿಸಿ, ಕಂಬಳಗಳಿಗೆ ಭಾರತ ಸರ್ಕಾರದ ಮಾನ್ಯತೆ ಪಡೆಯಲು ಸಂಸದರ ಮೂಲಕ ಪ್ರಯತ್ನ ನಡೆಸಲಾಗುವುದುದೆಂದು ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ, ಅಭಯ ಚಂದ್ರ ಜ್ಯೆನ್‌, ಜಾಗತಿಕ ಬಂಟರ ಸಂಘ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಗುಣಪಾಲ ಕಡಂಬ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಜಗದೀಶ್ ಅಧಿಕಾರಿ, ಸುಚರಿತ ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ರವಿ ಶೆಟ್ಟಿ ಕತಾರ್, ರತ್ನಾಕರ ಜೈನ್, ಐಕಳ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಉದ್ಯಮಿ ಆಸ್ಟಿನ್ ಸಂತೋಷ್, ಪದ್ಮರಾಜ್ ಪೂಜಾರಿ ಮಂಗಳೂರು, ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.

PREV