ಬ್ಯಾಡಗಿ: ಸರ್ಕಾರದ ರೈತ ವಿರೋಧಿ ಧೋರಣೆಗಳಿಂದ ಕೃಷಿ ಧರ್ಮಕ್ಕೆ ಪೆಟ್ಟು ಬೀಳುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಶವಕ್ಕೆ ಬೆಲೆ ನಿರ್ಧರಿಸುವುದರ ಬದಲು ಸಾವಿನ ನಿಖರ ಕಾರಣಕ್ಕೆ ಪರಿಹಾರ ಕಂಡುಕೊಳ್ಳದಿದ್ದರೇ ದೇಶದಲ್ಲಿ ಕೃಷಿ ಉಳಿಯಲು ಸಾಧ್ಯವಿಲ್ಲ. ವಿಷಯದ ಗಂಭೀರತೆ ಅರ್ಥೈಸಿಕೊಳ್ಳದಿದ್ದರೇ ನಮ್ಮನ್ನಾಳುವ ಸರ್ಕಾರಗಳು ಅಳಬೇಕಾಗುತ್ತದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣಸಿಂಗ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗಳು ಖಾಲಿ
ಕೃಷಿಕ ಸಮಾಜದ ಸದಸ್ಯ ಗಂಗಣ್ಣ ಎಲಿ ಮಾತನಾಡಿ, ಭಾರತದ ಆರ್ಥಿಕತೆಗೆ ರೈತರು ಶೇ. 27ರಷ್ಟು ಕೊಡುಗೆ ನೀಡುತ್ತಿದ್ದೇವೆ. ಹೀಗಿದ್ದರೂ ರೈತ ಕೃಷಿಯಿಂದ ಬರುವ ಲಾಭದಲ್ಲಿ ತನ್ನ ಕುಟುಂಬಗಳ ನಿರ್ವಹಣೆ ಸೇರಿದಂತೆ ಹಣ ಸಂಪಾದಿಸಲು ಹೆಣಗಾಡಬೇಕಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೃಷಿಕರ ಮಕ್ಕಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಸದ್ದಿಲ್ಲದಂತೆ ಹಳ್ಳಿಗಳು ಖಾಲಿಯಾಗುತ್ತಿವೆ ಎಂದರು.ಅನ್ನ ಹಾಕಿದ ಕುಟುಂಬಕ್ಕೇ ಕುತ್ತು
ಹವಾಮಾನ ವೈಪರೀತ್ಯ
ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಈ ವೇಳೆ ತಹಸೀಲ್ದಾರ್ ಫಿರೋಜ್ ಶಾ ಸೋಮನಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ಹಿರಿಯ ತೋಟಗಾರಿಕೆ ನಿರ್ದೇಶಕ ಅಶೋಕ ಕುರುಬರ, ಕೃಷಿಕ ಸಮಾಜದ ಬಸವರಾಜ ಸಂಕಣ್ಣನವರ, ಮಲ್ಲನಗೌಡ ಭದ್ರಗೌಡ್ರ, ರಮೇಶ ಮೋಟೆಬೆನ್ನೂರ, ಷಣ್ಮುಖಪ್ಪ ತೋಟದ, ಮಹದೇವಪ್ಪ ಪುಟ್ಟನಗೌಡ್ರ, ನಿಂಗನಗೌಡ ಪಾಟೀಲ, ಕಲ್ಲಪ್ಪ ತಳಮನಿ, ಮಹಲಿಂಗಪ್ಪ ಪುಟ್ಟಪ್ಪನವರ, ಬಸವರಾಜ ರೊಡ್ಡನವರ, ನಾಗರಾಜ ಕುರುವತ್ತಿ, ಶಿವಪ್ಪ ಪೋಟೇರ, ರಾಮಪ್ಪ ಓಲೇಕಾರ, ಮಂಜುನಾಥ ಬೆಳಕಿನಕೊಂಡ ಇನ್ನಿತರರಿದ್ದರು.