ಉಡುಪಿ: ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಪ್ರಥಮ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ನ. 19ರಂದು ನಾವುಂದ ಕಂಬಳದೊಂದಿಗೆ ಈ ಬಾರಿಯ ಸಾಂಪ್ರದಾಯಿಕ ಕಂಬಳಗಳು ಆರಂಭಗೊಂಡಿದ್ದು, ಫೆ.21ರ ವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ.ಇಂದು ಹಕ್ರೆಮಠ, ನ. 22ರಂದು ಕೆರಗದ್ದೆ ಹಾಗೂ ಉಳ್ಳೂರು, 26 ರಂದು ಮಣೂರು ಮತ್ತು ಯಡ್ತಾಡಿ, 27 ರಂದು ಬಾರ್ಕೂರು, ಬಿಲ್ಲಾಡಿ ಹಾಗೂ ಅಲ್ಬಾಡಿ, 28 ರಂದು ಕೆರ್ಗಾಲ್ ಹಾಗೂ ತೋನ್ಸೆ, 29 ರಂದು ಬನ್ನಾಡಿ, ಇಡೂರು ಕುಂಜ್ಞಾಡಿ, ಎಲ್ಲೂರು ಹಾಗೂ ಕೆಂಜೂರು, 30 ರಂದು ಕೆಂಚನೂರು ಹಾಗೂ ಹೆಗ್ಗುಂಜೆಗಳಲ್ಲಿ ಸಾಂಪ್ರದಾಯಿಕ ಕಂಬಳಗಳು ನಡೆಯಲಿವೆ.
ಮಿಕ್ಕುಳಿದ ದ್ವಿತೀಯ ಹಂತದ ಕಂಬಳಗಳ ದಿನಾಂಕ ಶೀಘ್ರ ಪ್ರಕಟಿಸಲಾಗುವುದು ಎಂದು ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ ತಿಳಿಸಿದ್ದಾರೆ.