ಕಂಬಿಬಾಣೆ: 69ನೇ ನವರಾತ್ರಿ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Oct 04, 2024, 01:32 AM IST
ಚಿತ್ರ.2: ಕಂಬಿಬಾಣೆ ಗಣಪತಿಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ. | Kannada Prabha

ಸಾರಾಂಶ

ಕಂಬಿಬಾಣೆಯಲ್ಲಿರುವ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ 69ನೇ ವರ್ಷದ ನವರಾತ್ರಿ ಉತ್ಸವ ಗುರುವಾರ ಆರಂಭಗೊಂಡಿದೆ. ಅ.12ರ ತನಕ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಂಬಿಬಾಣೆಯಲ್ಲಿರುವ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ 69ನೇ ವರ್ಷದ ನವರಾತ್ರಿ ಉತ್ಸವ ಗುರುವಾರ ಆರಂಭಗೊಂಡಿದೆ. ಅ.12ರ ತನಕ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗುರುವಾರ ಪೂರ್ವಾಹ್ನ ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ಸಂಜೆ ಕುಶಾಲನಗರ ಪ್ರಗತಿ ಕೇಡನಾ ಸಂಗೀತ ಕಲಾ ಕೇಂದ್ರ ವತಿಯಿಂದ ಭರತನಾಟ್ಯ, 5ರಂದು ಸಂಜೆ ಕಂಬಿಬಾಣೆ ಶ್ರೀರಾಮ ಮಕ್ಕಳ ಕುಣಿತ, ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, 6ರಂದು ಬೆಳಗ್ಗೆ ದುರ್ಗಾಹೋಮ ನಡೆಯಲಿದೆ.

ಸಂಜೆ ಝೇಕಾಂರ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ, 7ರಂದು ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 8ರಂದು ಸಂಜೆ ಶ್ರೀಬೈತೂರಪ್ಪ ಭಜನಾ ಮಂಡಳಿ ಕೊಡಗರಹಳ್ಳಿ ವತಿಯಿಂದ ನಿರಲ್ ತುಳು ನಾಟಕ, 9ರಂದು ಓಂ ಶಕ್ತ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

10ರಂದು ಸಂಜೆ ಸಾಮೂಹಿಕ ದುರ್ಗಾ ದೀಪ ನಮಸ್ಕಾರ ಪೂಜೆ ನಡೆಯಲಿದೆ. 11ರಂದು ಶುಕ್ರವಾರದಂದು ಸಂಜೆ ವಾಹನಪೂಜೆ ಮತ್ತು 12ರಂದು ರಾತ್ರಿ ಗ್ರಾಮ ಮುಖ್ಯ ಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಜರಗುವ ದಿನಗಳಂದು ನವರಾತ್ರಿ ಕೊನೆಯ ದಿನದಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ