ಕಂಬಿಬಾಣೆ-ಚಿಕ್ಲಿಹೊಳೆ ರಸ್ತೆ ಸ್ಥಿತಿ ಅಧೋಗತಿ

KannadaprabhaNewsNetwork |  
Published : Aug 01, 2026, 03:45 AM IST
ಕಂಬಿಬಾಣೆ ಚಿಕ್ಲಿಹೊಳೆ ರಸ್ತೆ ಅವ್ಯವಸ್ಥೆ  | Kannada Prabha

ಸಾರಾಂಶ

ಕಂಬಿಬಾಣೆ ಚಿಕ್ಲಿಹೊಳೆಯಲ್ಲಿ ಜಲಾಶಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರೂ ಜನರ ಸಮಸ್ಯೆ ಅರಣ್ಯರೋಧನವಾಗಿದೆ.

ಸುಂಟಿಕೊಪ್ಪ: ಕಂಬಿಬಾಣೆ ಚಿಕ್ಲಿಹೊಳೆಯಲ್ಲಿ ಜಲಾಶಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರೂ ಜನರ ಸಮಸ್ಯೆ ಅರಣ್ಯರೋಧನವಾಗಿದೆ. ಕಂಬಿಬಾಣೆಯಿಂದ ೪ ಕೀ.ಮೀ ದೂರದ ಚಿಕ್ಲಿಹೊಳೆ ಜಲಾಶಯವಿದ್ದು, ಇಲ್ಲಿಂದ ರಂಗಸಮುದ್ರದ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಸಂಪರ್ಕ ರಸ್ತೆಯ ೨ ಕೀ.ಮಿ ವ್ಯಾಪ್ತಿ ಹೊಂಡ ಗುಂಡಿಗಳಿಂದ ಕೂಡಿದೆ. ರಸ್ತೆಯ ಇಕ್ಕೆಲೆಗಳಲ್ಲಿ ಮೀಸಲು ಆನೆಕಾಡು ಪ್ರದೇಶವಾಗಿದ್ದು ಕಾಡು ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ಪಾದಚಾರಿ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವವರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.

ಕಂಬಿಬಾಣೆ ಚಿಕ್ಕಿಹೊಳೆ ಸಂಪರ್ಕ ರಸ್ತೆಯು ಸುಮಾರು ೨ ಕೀ.ಮಿ. ಹಲವಷ್ಟು ಕಡೆ ದುರಸ್ತಿಗೆ ಬಾಕಿ ಉಳಿದುಕೊಂಡಿದ್ದು ಇದರಿಂದ ಮಧ್ಯ ಮಧ್ಯ ಭಾಗದಲ್ಲಿ ನಿರ್ವಹಿಸಲಾಗಿರುವ ನೂತನ ಕಾಂಕ್ರಿಟ್ ರಸ್ತೆಯು ಹೊಂಡ ಗುಂಡಿಗಳಾಗಿ ಮಾರ್ಪಡಾಗಿದೆ. ರಸ್ತೆ ೨೦೦ ರಿಂದ ೫೦೦ ಮೀಟರ್‌ವರೆಗೆ ದುರಸ್ತಿ ನಡೆಯಬೇಕು. -ಆರ್.ಆರ್.ಮೋಹನ್ ಕಂಬಿಬಾಣೆ ಗ್ರಾ.ಪಂ.ಮಾಜಿ ಅಧ್ಯಕ್ಷ

ಈ ಭಾಗದಲ್ಲಿ ಬಡ ಮಧ್ಯಮ ವರ್ಗದ ಜನಾಂಗದವರೇ ನೆಲೆಸಿದ್ದು, ಇವರ ಮಕ್ಕಳು ನಿತ್ಯ ನೂರಾರು ಮಂದಿ ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಹೋಗುವ ವೇಳೆ ವಾಹನಗಳಿಂದ ಕೆಸರು ಮಣ್ಣಿನ ನೀರು ರಾಚುತ್ತದೆ. ಈ ಭಾಗದ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. - ಇ.ಬಿ. ಜೋಸೆಫ್ ೭ನೇ ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ

ಚಿಕ್ಲಿಹೊಳೆ ಜಲಾಶಯದ ೨ ಬದಿಯಲ್ಲಿ ಕಾಡು ಗಿಡಗಂಟಿಗಳು ಬೆಳೆದು ನಿಂತಿದ್ದು, ಕಾಡಾನೆಗಳು ವನ್ಯ ಪ್ರಾಣಿಗಳು ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಾಡು ಗಿಡಗಳನ್ನು ಕಡಿದು ತೆರವುಗೊಸಬೇಕಿದೆ.- ಸಂತೋಷ್ ಚಿಕ್ಲಿಹೊಳೆ ಭಾಗದ ನಿವಾಸಿ, ಆಟೋಚಾಲಕ

೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ೩ನೇ ವಾರ್ಡ್ ವ್ಯಾಪ್ತಿಗೆ ಈ ಗ್ರಾಮವು ಸೇರಿದೆ. ರಸ್ತೆಯ ಅವ್ಯವಸ್ಥೆಯ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾವೇರಿ ನೀರಾವರಿ ನಿಗಮದ ಹಾರಂಗಿ ವ್ಯಾಪ್ತಿಯ ಅಭಿಯಂತರಿಗೆ ಪತ್ರವನ್ನು ಬರೆಯಲಾಗಿದೆ. -ನಂದೀಶ್‌ಕುಮಾರ್ ಹೊಸಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದುಷಿ ಡಾ. ಉಷಾ ಹೆಬ್ಬಾರ್ ಗೆ ಗುರುವಂದನೆ
ಮಾನವ ಹಸ್ತಕ್ಷೇಪದಿಂದ ಪ್ರಕೃತಿ ವಿಕೋಪ: ದಿನೇಶ್ ಹೊಳ್ಳ