ಕೋವಿಡ್ 19ರ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತು ಮನೆಯಲ್ಲಿ ಇರುವ ಹೊತ್ತಿಗೆ ತಮ್ಮ ಜೀವವನ್ನು ಲೆಕ್ಕಿಸದೆ ನಾಗರೀಕರ ಆರೋಗ್ಯದ ಬಗ್ಗೆ ಕಾಳಜಿ ಹೊತ್ತು ಕೆಲಸವನ್ನು ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರು ಹೇಳಿದರು.
ಹಾವೇರಿ: ಕೋವಿಡ್ 19ರ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತು ಮನೆಯಲ್ಲಿ ಇರುವ ಹೊತ್ತಿಗೆ ತಮ್ಮ ಜೀವವನ್ನು ಲೆಕ್ಕಿಸದೆ ನಾಗರೀಕರ ಆರೋಗ್ಯದ ಬಗ್ಗೆ ಕಾಳಜಿ ಹೊತ್ತು ಕೆಲಸವನ್ನು ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರು ಹೇಳಿದರು.
ನಗರದ ಜಿ.ಎಚ್. ಕಾಲೇಜಿನ ಎನ್.ಎಸ್.ಎಸ್. ಘಟಕಗಳು ಆಯೋಜಿಸಿದ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಹಾವೇರಿ ನಗರದ 29 ಆಶಾ ಕಾರ್ಯಕರ್ತೆರಿಗೂ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಆಶಾ ಸಮ್ಮಾನ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದ ಆರೋಗ್ಯವನ್ನು ಮತ್ತು ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯ ಪಾತ್ರ ಹಿರಿದಾಗಿದೆ. ಎನ್.ಎಸ್.ಎಸ್. ದಿನಾಚರಣೆಯಲ್ಲಿ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಎಂ.ಸಿ. ಕೊಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್.ಎಸ್.ಎಸ್. ಸಂಯೋಜಕರಾದ ಡಾ.ಆನಂದ ಬೈರಾಪುರ, ಆಶಾ ಮೆಂಟರ್ ಆಗಿರುವ ರತ್ನಾ ಮಾಳಗಿ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ.ಎ. ಹೊಳ್ಳಿಯವರ, ಐಕ್ಯುಎಸಿ ಸಂಯೋಜಕರಾದ ರೂಪಾ ಕೋರೆ ಉಪಸ್ಥಿತರಿದ್ದರು.ಡಾ.ಶಮಂತ್‌ಕುಮಾರ್ ಕೆ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯರಾದ ಪ್ರೊ. ಎಂ.ಎ. ಹೊಳ್ಳಿಯವರು ಸ್ವಾಗತಿಸಿದರು. ಘಟಕ ಎರಡರ ಯೋಜನಾಧಿಕಾರಿ ಪ್ರೊ. ಉದಯಕುಮಾರ್ ಕೆ ವಂದಿಸಿದರು. ಮಣಿಕಂಠ ಗೋದಮನಿ ನಿರೂಪಿಸಿದರು.