ಇಂದು ಕಂಬೀರಂಡ-ಕೇಚೆಟ್ಟಿರ ಸೆಮಿ ಫೈನಲ್‌ ಹೋರಾಟ

KannadaprabhaNewsNetwork |  
Published : Apr 30, 2026, 02:30 AM IST
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ  ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿಗುರುವಾರ ನಡೆದ ಪಂದ್ಯದ  ದೃಶ್ಯ. | Kannada Prabha

ಸಾರಾಂಶ

ಇಲ್ಲಿನ ಜನರಲ್ ಕೆ..ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಪಳಂಗಡ ,ಕುಲ್ಲೇಟಿರ ಚೆಪ್ಪುಡಿರ ಹಾಗೂ.ಪರದಂಡ ತಂಡಗಳ ನಡುವೆ ಸೆಮಿಫೈನಲ್ ಸ್ಪರ್ಧೆಗಳು ನಡೆಯಲಿವೆ.

ದುಗ್ಗಳ ಸದಾನಂದ ಕನ್ನಡಪ್ರಭವಾರ್ತೆ ನಾಪೋಕ್ಲುಇಲ್ಲಿನ ಜನರಲ್ ಕೆ..ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಪಳಂಗಡ ,ಕುಲ್ಲೇಟಿರ ಚೆಪ್ಪುಡಿರ ಹಾಗೂ.ಪರದಂಡ ತಂಡಗಳ ನಡುವೆ ಸೆಮಿಫೈನಲ್ ಸ್ಪರ್ಧೆಗಳು ನಡೆಯಲಿವೆ. ಬುಧವಾರ ಪಳಂಗಡ ಮತ್ತು ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳಂಗಂಡ 3-2 ರಿಂದ ಪೆಮ್ಮಂಡ ವಿರುದ್ಧ ಗೆಲುವು ಸಾಧಿಸಿತು.ಚೆಪ್ಪುಡಿರ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ 4-2ರಿಂದ ಕಂಬೀರಂಡ ವಿರುದ್ಧ ಗೆಲುವು ಸಾಧಿಸಿತು.ಕುಲ್ಲೇಟಿರ ಮತ್ತು ನೆಲ್ಲಮಕ್ಕಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಕುಲ್ಲೇಟಿರ 2-0 ಯಿಂದ ನೆಲ್ಲಮಕ್ಕಡ ವಿರುದ್ಧ ಜಯ ಸಾಧಿಸಿತು.

ಮಹಿಳಾ ಹಾಕಿ ಪಂದ್ಯಗಳಲ್ಲಿ ಕಂಭೀರಂಡ 3-0 ಯಿಂದ ಅದೇಂಗಡ ವಿರುದ್ಧ ಗೆಲುವು ಸಾಧಿಸಿದರೆ, ಕೇಚೆಟ್ಟಿರ 4-0ಯಿಂದ ಶಿವಚಾಳಿಯಂಡ ವಿರುದ್ಧ ಗೆಲವು ಸಾಧಿಸಿತು. ಮಹಿಳಾ ಹಾಕಿ ಪಂದ್ಯ ಗುರುವಾರ ಬೆಳಿಗ್ಗೆ11.30ಕ್ಕೆ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿವೆ.

ವೈವಿಧ್ಯಮಯ ಕಾರ್ಯಕ್ರಮಗಳು: ಸೆಮಿ ಫೈನಲ್ ದಿನವಾದ ಗುರುವಾರ ರಾತ್ರಿ ಡಿಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಕ್ಕಬ್ಬೆಯಿಂದ ಹಾಕಿ ಮೈದಾನದವರೆಗೆ 10 ಕಿ.ಮೀ ಮೆರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕುಟುಂಬವಾರು ನಡೆಯುವ ಈ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಭಾಗವಹಿಸಬಹುದಾಗಿದ್ದು ನಿಗದಿತ ಪಾಯಿಂಟ್ ನಿಂದ ಇಬ್ಬರು ಜೋಡಿಯಾಗಿ ಓಡಬೇಕು. ಮೊದಲ ಹಂತ 3.5 ಕಿ.ಮೀ.ಎರಡನೇ ಹಂತ 3.5 ಕಿ.ಮೀ. ಹಾಗೂ ಕೊನೆಯ ಹಂತ 3 ಕಿ.ಮೀ ಆಗಿರುತ್ತದೆ. ಒಂದು ಗುರಿಯನ್ನು ಇಬ್ಬರು ತಲುಪಿದ ಬಳಿಕವಷ್ಟೇ ಮತ್ತೆ ಮುಂದುವರಿಯಬಹುದಾಗಿದೆ.ಮಹಿಳೆಯರ ಹಾಕಿಸೆಮಿಫೈನಲ್ಸ್ ನ ಮುಖ್ಯ ಅತಿಥಿಗಳಾಗಿ ನಿವೃತ್ತ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿ ರಾಧಿಕ ಕರುಂಬಯ್ಯ, ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ.

ವಿಶೇಷತೆಗಳು: ಚೇನಂಡ ಹಾಕಿ ಹಬ್ಬದ ಪಂದ್ಯಾವಳಿ ನಿರ್ದೇಶಕರಾಗಿ ನಾಯಕಂಡ ದೀಪು ಎರಡನೇ ಬಾರಿಗೆ ಕಾರ್ಯನಿರ್ವಹಿಸುತ್ತಿದ್ದು ಆರ್ಮಿ ಯೋಧ ಚೇಯಂಡ ಅಪಚ್ಚು ಅಂಪೈರ್ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೇನಂಡ ಹಾಕಿ ಹಬ್ಬದಲ್ಲಿ 33 ತೀರ್ಪುಗಾರರಿದ್ದು, ಇವರಲ್ಲಿ 3 ಮಹಿಳೆಯರು ಹಾಗೂ 30 ಪುರುಷರ ತೀರ್ಪುಗಾರರಿದ್ದಾರೆ. ಚೇನಂಡ ಹಾಕಿ ಹಬ್ಬವನ್ನು ರಾಷ್ಟ್ರೀಯ ತೀರ್ಪುಗಾರರು ಹಾಗೂ ಅನುಭವಸ್ಥ ಹಿರಿಯ ಆಟಗಾರರು ನಡೆಸಲು ಸಾಥ್ ನೀಡುತ್ತಾ ಬರುತ್ತಿದ್ದಾರೆ. ಇವರಲ್ಲಿ ನಾಯಕಂಡ ದೀಪಕ್ ಚಂಗಪ್ಪ, ಚೆಯ್ಯಂಡ ಲವ ಅಪ್ಪಚ್ಚು, ಚೆಂದಪಂಡ ಆಕಾಶ್ ಚಂಗಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಮೂಕಚಂಡ ನಿರನ್ ನಾಚಪ್ಪ, ಬಲ್ಲಚಂಡ ನಾಣಯ್ಯ, ಅಪ್ಪಚೊಟ್ಟೋಳಂಡ ಅಯ್ಯಪ್ಪ, ಕೊಂಡೀರ ಕೀರ್ತಿ, ಬೊಟ್ಟಂಗಡ ಕೌಶಿಕ್, ಪಟ್ರಪಂಡ ಸಚಿನ್ ಮಂದಣ್ಣ, ಅಣ್ಣಡಿಯಂಡ ಪೊನ್ನಣ್ಣ, ಮೇರಿಯಂಡ ರಾಯ್ ಅಯ್ಯಣ್ಣ, ಬೊಳಿಯಡಿರ ಸುಬ್ಬಯ್ಯ, ಕೊಳುವಂಡ ಚಂಗಪ್ಪ, ಕಲ್ಮಾದಂಡ ಸೋಮಣ್ಣ, ಕಾಳಿಮಾಡ ಕಿರಣ್, ಬಲ್ಲಚಂಡ ಸಜನ್ ಗಣಪತಿ, ಅಯ್ಯನೆರವಂಡ ನಾಚಪ್ಪ, ತಿರೊಡಿರ ನಿರುಪ್ ನಾಣಯ್ಯ, ಕುಂಞಿಯಂಡ ರಿವಿನ್, ಚೇರ್ಮಾದಂಡ ವೀಕ್ಷಿತ, ಚೆಯ್ಯಂಡ ಭಾಗ್ಯಶ್ರೀ, ಪುದಿಯಒಕ್ಕಡ ಅಭಿನ್, ಅರೆಯಡ ಗಿರೀಶ್, ಚೌರೀರ ದೇಚಮ್ಮ, ಮಾಲೆಟ್ಟಿರ ಕಾಳಪ್ಪ, ಕೋಡಿಮಣಿಯಂಡ ಹರ್ಷ, ಕುಮ್ಮಂಡ ಸೋನು, ಕೈಪಟ್ಟೀರ ಬೋಪಣ್ಣ, ಕಂಬೆಯಂಡ ಲಿಖಿತ್ ತಿಮ್ಮಯ್ಯ, ಮಳವಂಡ ತಕ್ಷಕ್ ಬಿದ್ದಪ್ಪ ಹಾಗೂ ನಾಪಂಡ ಕವನ್ ಪಾಲ್ಗೊಂಡಿದ್ದಾರೆ.

ಅಂಕಿಅಂಶಗಳು: ಇದುವರೆಗಿನ ಗೋಲುಗಳು- 1472ಪೆನಾಲ್ಟಿಕಾರ್ನರ್ ಗೋಲುಗಲು- 2248ಪೆನಾಲ್ಟಿಶೂಟ್ ಔಟ್ ಗೋಲುಗಳು -21ಟೈ ಬ್ರೇಕರ್ - 56-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ