ಕನ್ನಡಪ್ರಭ ವಾರ್ತೆ ಕಮತಗಿ
ನ. 30ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ಕಮತಗಿ-ಇಂಜಿನವಾರಿ ರಸ್ತೆ ಸುಧಾರಣೆ ಯಾವಾಗ ? ವಿಶೇಷ ವರದಿಗೆ ಸ್ಪಂದಿಸಿದ ಬಾಗಲಕೋಟೆ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚನೆ ನೀಡಿದ ಪರಿಣಾಮ ಶನಿವಾರ ಕಮತಗಿ ಬಸ್ ನಿಲ್ದಾಣದಿಂದ ಕಮತಗಿ ಕ್ರಾಸ್ ವರೆಗಿನ ದ್ವಿಪಥ ರಸ್ತೆ ಡಾಂಬರಿಕರಣ ಕೆಲಸ ಆರಂಭಿಸಲಾಗಿದ್ದು, ಕಮತಗಿ ಕ್ರಾಸ್‌ದಿಂದ ಇಂಜಿನವಾರಿ ಗ್ರಾಮದ ಹತ್ತಿರದವರೆಗಿನ ರಸ್ತೆಯ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.