-ಸನ್ನತಿ ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಕಲಬುರಗಿ
ಭಾರತ ದೇಶದಲ್ಲಿಯೇ ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರ. ಬೌದ್ಧ ಮಹಾ ಸ್ತೂಫಗಳು ಮತ್ತು ಶಾಸನಗಳು ಬುದ್ಧನ ಜೀವನದ ಐತಿಹಾಸಿಕ ಪರಂಪರೆ ಹೇಳುತ್ತವೆ. ಕುರುಹುಗಳು ನಮ್ಮೆಲ್ಲರಿಗೂ ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತವೆ ಎಂದು ಮೈಸೂರಿನ ಹಿರಿಯ ಪುರಾತತ್ತ್ವಶಾಸ್ತ್ರಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಳಂದ ವಿಹಾರದ ಪಾಲಿ ಇನ್‍ಸ್ಟಿಟ್ಯೂಟ್ ಹಾಗೂ ಗುಲಬರ್ಗ ವಿವಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ''''''''ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸ್ಕೃತಿಕ ಆಯಾಮಗಳು'''''''' ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ 1954 ರಲ್ಲಿ ಕಪಟರಾಳ ಕೃಷ್ಣರಾವ್ ಅವರು ಸನ್ನತಿಯ ಮಹತ್ವ ದಾಖಲೆ ಶೋಧಿಸಿ ಅವುಗಳ ಮಹತ್ವ ದಾಖಲಿಸಿದ್ದಾರೆ. ಅಲ್ಲಿನ ಅಪರೂಪದ ವಸ್ತುಗಳು, ಶಿಲ್ಪಗಳು, ಭೌತಿಕ ಅವಶೇಷ, ಪುರಾವೆ ಬುದ್ಧನ ಜೀವನ ಮತ್ತು ಸಾಧನೆ ಹೇಳುತ್ತವೆ. ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಯೋಜನೆಗೆ ಸನ್ನತಿ ಭೇಟಿ ವೇಳೆ ಸಿಕ್ಕ ಪಳಿಯುಳಿಕೆಗಳಲ್ಲಿ ಮಹತ್ವದ ಅಂಶಗಳು ದೊರಕಿವೆ ಎಂದರು.
ಗುವಿವಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸನ್ನತಿ ಕೇಂದ್ರ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮತ್ತು ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಎಂದರು.
ಸಂಗೀತ ವಿಭಾಗದ ಅಧ್ಯಾಪಕ ಡಾ. ಲಕ್ಷ್ಮಿಶಂಕರ ಜೋಷಿ, ಡಾ. ದಾನಮ್ಮ ಸಂಗಡಿಗರು ನಾಡಗೀತೆ ಹಾಡಿದರು.
ಮೊದಲನೇ ಗೋಷ್ಠಿಯಲ್ಲಿ ಬೆಂಗಳೂರು ಐ.ಜಿ.ಎನ್.ಸಿ ಪೇಲಿಯೋ ಗ್ರಾಫಿಸ್ಟ್ ಡಾ. ಸದ್ಯೋಜಾತ ಭಟ್ಟ, ''''ಸನ್ನತಿ ಶಾಸನಗಳು
ಎರಡನೇ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ದೇವರ ಕೊಂಡಾರೆಡ್ಡಿ ''''ಸನ್ನತಿ ಮತ್ತು ರಾಜಮನೆತನಗಳು'''', ಸಂಶೋಧಕ ಡಾ.ಎಸ್. ಚಂದ್ರಮೋಹನ್ ''''ಸನ್ನತಿ ಮತ್ತು ಬೌದ್ಧ ಧರ್ಮ'''', ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕ ಡಾ. ಎಂ.ಬಿ. ಕಟ್ಟಿ'''''''' ಸನ್ನತಿ ಮತ್ತು ಇತರ ಬೌದ್ಧ ಕೇಂದ್ರಗಳು'''''''' ಕುರಿತು ವಿಷಯ ಮಂಡಿಸಿದರು.
ನಳಂದ ವಿಹಾರದ ಪಾಲಿ ಇನ್‍ಸ್ಟಿಟ್ಯೂಟ್‍ನ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಬಸವರಾಜ ಸಣ್ಣಕ್ಕಿ ಇದ್ದರು.,,ಬಾಕ್ಸ್ ..
ಗುವಿವಿಯಲ್ಲಿ ಶೈಕ್ಷಣಿಕ ವರ್ಷದಿಂದ ಎರಡು ವರ್ಷಗಳ ಎಂಎ ಪಾಲಿ ಮತ್ತು ಬೌದ್ಧ ಸ್ಟಡೀಸ್ ಮತ್ತು ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸುಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ. ಅಂತರರಾಷ್ಟ್ರೀಯ ಮತ್ತು ಹೊರ ರಾಜ್ಯದ ಆಸಕ್ತರು ಪಾಲಿ ಮತ್ತು ಬೌದ್ಧ ಸ್ಟಡೀಸ್ ಕೋರ್ಸ್ ಕಲಿಯಲು ಪ್ರೋತ್ಸಾಹ ನೀಡುವ ಉದ್ದೇಶವಿದೆ. ಈಗಾಗಲೇ ಅಧ್ಯಯನ ಮಂಡಳಿ ಸಭೆಯಲ್ಲಿ ಪಠ್ಯಕ್ರಮಕ್ಕೆ ಅಂತಿಮ ರೂಪ ನೀಡಲಾಗಿದೆ. ಹೆಚ್ಚಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಪಾಲಿ ಮತ್ತು ಬೌದ್ಧ ವಿಷಯಗಳು ಕಲಿಕೆಗೆ ಅವಕಾಶ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ವಿವಿಯಲ್ಲಿ ಪಾಲಿ ಮತ್ತು ಬೌದ್ಧ ವಿಷಯ ಕುರಿತು ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲು ಯೋಜನೆ ರೂಪಿಸಲಾಗುವುದು.
-ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಕುಲಪತಿ, ಗುವಿವಿ