ಕನಕಗಿರಿ: ದಾಸ ಸಾಹಿತ್ಯಕ್ಕೆ ಕನಕದಾಸರು ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಮಾತನಾಡಿ, ಕನಕದಾಸರ ಕೀರ್ತನೆಗಳಿಂದ ಸಮಾಜ ಪರಿವರ್ತನೆಯಾಗಿರುವುದು ಸತ್ಯ. ಕನಕರ ಮನಸ್ಸಿನಲ್ಲಿರೋ ಐಕ್ಯತೆಯ ಬೆಳಕನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ. ಹಾಲುಮತವೆಂಬ ಶ್ರೇಷ್ಠ ಸಮಾಜದ ಯುವ ಸಮೂಹ ದುಶ್ಚಟಕ್ಕೆ ಬಲಿಯಾಗಿದೆ. ವ್ಯಸನದಿಂದ ಹೊರಬಂದು ಸಮಾಜ ಮುನ್ನಡೆಸಿದಾಗ ಮಾತ್ರ ದಾಸರ ಜಯಂತಿ ಆಚರಿಸುವುದಕ್ಕೂ ಸಾರ್ಥವಾಗುತ್ತದೆ ಎಂದರು.
ಈ ವೇಳೆ ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷ, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ನಾಗಪ್ಪ ಹುಗ್ಗಿ, ವೈ.ಎಂ ದೇವರಾಜ್, ಕೊಮಾರೆಪ್ಪ ನರಿ, ಸಣ್ಣೆಪ್ಪ ಸಿಂಗಾಪೂರ, ಹೂವಪ್ಪ ಚೌಡ್ಕಿ, ಪರಸಪ್ಪ ಚೌಡ್ಕಿ, ಪಾಮಣ್ಣ ಚಳ್ಳಾರಿ, ಹುಲಗಪ್ಪ ಚೌಡ್ಕಿ, ದುರುಗಪ್ಪ ಆದಾಪೂರ, ವಿರೇಶ ಚಿನ್ನೂರು, ನಾಗರಾಜ ವಿಠಲಾಪೂರ, ಗಂಗಾಧರ ಚೌಡ್ಕಿ, ನಿರುಪಾದೆಪ್ಪ ಗುರುವಿನ್, ಶರಣಪ್ಪ ತಂಗಡಗಿ, ರಾಮು ಆಗೋಲಿ, ಪಪಂ ಸದಸ್ಯರು ಹಾಗೂ ಹಾಲುಮತ ಸಮಾಜದವರು ಇದ್ದರು.ವಿವಿಧೆಡೆ ಆಚರಣೆ: ಎಪಿಎಂಸಿ, ಕಾಂಗ್ರೆಸ್, ಬಿಜೆಪಿ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಪಪಂ, ಸಿಡಿಪಿಒ ಕಚೇರಿ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.