ಕೊಪ್ಪಳ: ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯ ನೀಡಿದ ಕನಕದಾಸರು ಶತಮಾನದ ಸಂತ, ಮೇರು ಸಾಹಿತಿಗಳಾಗಿದ್ದಾರೆ. ತಮ್ಮ ಅಮೂಲ್ಯ ಕೀರ್ತನೆಗಳು ಹಾಗೂ ಶ್ರೇಷ್ಟ ಸಾಹಿತ್ಯ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕ ಬೆಳಗಿದ ದಾಸ ವೇರಣ್ಯರಾದ ಕನಕದಾಸರ ಚಿಂತನೆಗಳು ಸರ್ವಕಾಲೀಕ ಶ್ರೇಷ್ಟವಾಗಿವೆ ಎಂದು ಡಾ. ಹನುಮಂತ ಹೇರೂರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚನ್ನಬಸವ ಮಾತನಾಡಿ, ಕನಕದಾಸರ ಜೀವನವೇ ಒಂದು ಆದರ್ಶ. ಅವರ ಜಯಂತಿ ಆಚರಣೆ ಮತ್ತು ಅಧ್ಯಯನದ ಮೂಲಕ ಅವರ ಜೀವನ ತಾವು ಅರಿಯಬೇಕು, ಅವರ ಆದರ್ಶ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಪ್ಪ ನಿರೂಪಿಸಿದರು, ಡಾ. ಸುಮಲತಾ ಬಿ.ಎಂ. ಸ್ವಾಗತಿಸಿದರು, ಚೇತನಾ ಪ್ರಾರ್ಥಿಸಿದರು.