ಧಾರವಾಡ:
ಬಾಲ ವಿಕಾಸ ಅಕಾಡೆಮಿಯು ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಬಾಲಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ 15 ದಿನಗಳ ವಸತಿಯುತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿ ಉದ್ಘಾಟಿಸಿದ ಅವರು, ರಾಜ್ಯದ 31 ಜಿಲ್ಲೆಗಳ ಬಾಲ ಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಮಾದರಿ ಕಾರ್ಯಕ್ರಮ. ಇಲ್ಲಿ ವಿಶೇಷವಾದ ಸ್ಫೂರ್ತಿ ಪಡೆದು ಮಕ್ಕಳು ಬದುಕನ್ನು ಬದಲಾಯಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಅವಕಾಶ ವಂಚಿತ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವುದು ನಮ್ಮೆಲ್ಲರ ಸದಾಶಯ. ಹತ್ತು ಜಿಲ್ಲೆಗಳಂತೆ ಮೂರು ತಂಡಗಳನ್ನು ಮಾಡಿ, ಐದು ದಿನಗಳಂತೆ ಒಟ್ಟು 15 ದಿನ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವಾರು ಜನ ಸಾಧಕರನ್ನು ಭೇಟಿ ಮಾಡಲಿದ್ದೀರಿ ಎಂದರು.
ಪರಿಸರವಾದಿ ಪಿ.ವಿ. ಹಿರೇಮಠ ಮಾತನಾಡಿ, ಪರಿಸರವನ್ನು ಉಳಿಸುವ ಪರಿಸರ ಜಾಗೃತಿ ಮೂಡಿಸುವ ಕೆಲಸ ಇಂದಿನ ತುರ್ತು ಅಗತ್ಯ. ಮಕ್ಕಳು ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಲು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಶಿಕ್ಷಕ ಫಕಿರೇಶ ಮುಡಿಯನ್ನವರ, ಅಕ್ಷರ ದಾಸೋಹದ ಅಧಿಕಾರಿ ಬಸವರಾಜ, ಶಿಕ್ಷಕ ಹಾಗೂ ಸಾಹಿತಿ ಬೆಂತೂರ, ಅನ್ನಪೂರ್ಣ ಸಂಗಳದ, ಪುಷ್ಪ ಹಂಜಗಿ, ಸ್ವರ್ಣ ಲತಾ ಇದ್ದರು.