ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಕನಕದಾಸರು-ಶಾಸಕ ಮಾನೆ

KannadaprabhaNewsNetwork |  
Published : Nov 09, 2025, 02:45 AM IST
ಫೋಟೊ: 8ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಕಾವ್ಯದ ಹರಿತ ಬರಹದ ಮೂಲಕ ಸಮಾಜಕ್ಕೆ ಎಚ್ಚರಿಕೆಗಳನ್ನು ನೀಡಿದ ಕನಕದಾಸರು ನಮ್ಮ ಜಿಲ್ಲೆಯ ಹೆಮ್ಮೆ, ಇಡೀ ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪ್ರತಿಮ, ಅವಿಸ್ಮರಣೀಯ, ಅವರ ಬದುಕು ಆದರ್ಶ ಹಾಗೂ ಅನುಕರಣೀಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಕಾವ್ಯದ ಹರಿತ ಬರಹದ ಮೂಲಕ ಸಮಾಜಕ್ಕೆ ಎಚ್ಚರಿಕೆಗಳನ್ನು ನೀಡಿದ ಕನಕದಾಸರು ನಮ್ಮ ಜಿಲ್ಲೆಯ ಹೆಮ್ಮೆ, ಇಡೀ ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪ್ರತಿಮ, ಅವಿಸ್ಮರಣೀಯ, ಅವರ ಬದುಕು ಆದರ್ಶ ಹಾಗೂ ಅನುಕರಣೀಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಶನಿವಾರ ಇಲ್ಲಿನ ಕನಕ ಉದ್ಯಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿ ಬಾರಿಯೂ ಸಹ ಮಹಾತ್ಮರು, ಸಂತರ ಜಯಂತಿ ಆಚರಿಸುತ್ತೇವೆ, ಭಕ್ತಿ, ಗೌರವ ಸಮರ್ಪಿಸುತ್ತೇವೆ. ಆದರೆ ಅವರ ಆದರ್ಶ ಗುಣ, ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾತ್ರ ಹಿಂದೇಟು ಹಾಕುತ್ತೇವೆ. 15-16ನೇ ಶತಮಾನದಲ್ಲಿ ಅಸಮಾನತೆ, ಮೇಲು-ಕೀಳು ಭಾವನೆಯ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಸಹ ಕನಕದಾಸರು ಸಾಕಷ್ಟು ಅಡೆತಡೆ ಎದುರಿಸಿದ್ದರು. ಮಾನವ ಧರ್ಮ ದೊಡ್ಡದು, ಮಾನವೀಯತೆ ದೊಡ್ಡದು ಎನ್ನುವ ಭಾವನೆ ಇಟ್ಟುಕೊಂಡು ಸಂಸ್ಕೃತಿ, ಸಂಪ್ರದಾಯ ಉಳಿಸಲು ದುಷ್ಟಶಕ್ತಿಗಳ ವಿರುದ್ಧ ಇಂದೂ ಸಹ ಹೋರಾಟ ನಡೆಸುವಂಥ ಸ್ಥಿತಿ ಇದೆ. ಕನಕದಾಸರು ಎಲ್ಲರನ್ನೂ ಒಂದೇ ವೇದಿಕೆಯಡಿ ಕರೆತರುವ ಪ್ರಯತ್ನ ಮಾಡಿದ್ದರು. ಅಸಮಾನತೆಯ ವಿರುದ್ಧ, ಸಮಾಜದಲ್ಲಿನ ಅಂಕು, ಡೊಂಕು ತಿದ್ದಲು ಆ ಮೂಲಕ ವ್ಯವಸ್ಥೆ ಬಲಿಷ್ಠಗೊಳಿಸಲು ಸಾಕಷ್ಟು ಶ್ರಮ ವಹಿಸಿದ್ದರು. ಸಮಾನತೆಗಾಗಿ ಗಟ್ಟಿ ಧ್ವನಿ ಎತ್ತಿದ್ದ ಕನಕದಾಸರು ನಮ್ಮ ಹಾವೇರಿ ಜಿಲ್ಲೆಯ ಅನರ್ಘ್ಯ ರತ್ನ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ನಿಜವಾದ ಭಕ್ತಿ ಇದ್ದಲ್ಲಿ ಭಗವಂತನ ಕೃಪೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಕನಕದಾಸರೇ ಉತ್ತಮ ಉದಾಹರಣೆ ಎಂದರು. ತಹಸೀಲ್ದಾರ್ ಎಸ್. ರೇಣುಕಾ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಾದುದು. ವೈರಾಗ್ಯದ ಅತ್ಯಂತ ಉತ್ತುಂಗದಲ್ಲಿದ್ದು ಸಮಾಜಕ್ಕೆ ಸಾಹಿತ್ಯದ ಕೊಡುಗೆ ನೀಡಿ, ಸಮಾಜವನ್ನು ಸನ್ಮಾರ್ಗದತ್ತ ಪರಿವರ್ತಿಸಿದ ಕನಕದಾಸರು ಕೀರ್ತನೆಗಳನ್ನೇ ಅದಕ್ಕೆ ದಾರಿ ಮಾಡಿಕೊಂಡರು. ಕುಲದ ನೆನೆಯನ್ನ ಯಾರು ಬಲ್ಲರು ಎಂಬ ಸತ್ಯಕ್ಕೆ ಸೂಕ್ತ ಪದ ಬರೆದ ಅವರು ಅಂತರಂಗ ಬಹಿರಂಗಗಳ ವಾಸ್ತವವನ್ನು ತೆರೆದಿಟ್ಟವರು. ಟೀಕೆಗಳನ್ನು ಟೀಕಿಸಬೇಡಿ, ಸ್ವೀಕರಿಸಿ, ಆತ್ಮವಿಮರ್ಶೆಗೆ ಒಳಪಡಿಸಿ ಎಂಬ ಅವರ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವ ಚಿಂತನೆಯಾಗಿದೆ. ದಾಸ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ ಅಪ್ರತಿಮವಾದುದು ಎಂದರು.ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಮಹೇಶ ಪವಾಡಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ನಮ್ಮೂರು ನಮ್ಮವರು ಹೋರಾಟದ ನಾಯಕ ಹೈಕೋರ್ಟ್‌ ವಕೀಲ ಸಂದೀಪ ಪಾಟೀಲ, ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಕಟ್ಟೇಗೌಡರ್, ಮುಖಂಡರಾದ ಭೋಜರಾಜ ಕರೂದಿ, ಸುರೇಶ ದೊಡ್ಡಕುರುಬರ, ವಿನಾಯಕ ಕುರುಬರ, ಮಾಲತೇಶ ಗಂಟೇರ, ನಿಂಗಪ್ಪ ಗಾಜಿ, ಪ್ರಕಾಶ ಜಂಗಳಿ, ಜಿ.ಎಸ್. ಕುರುಬರ, ವಿಜಯಕುಮಾರ ದೊಡ್ಡಮನಿ, ಆದರ್ಶ ಶೆಟ್ಟಿ, ಮಾಲತೇಶ ಬ್ಯಾಗವಾದಿ, ರಾಜೇಶ ಕರೆಗೌಡರ, ಚಂದ್ರಪ್ಪ ಜಾಲಗಾರ, ಎಸ್.ಎಂ.ಕೋತಂಬರಿ, ದಾನಪ್ಪ ಗಂಟೇರ, ಚಂದ್ರಪ್ಪ ಆನವಟ್ಟಿ, ಡಾ.ಚನ್ನಪ್ಪ ದೊಡ್ಡಚಿಕ್ಕಣ್ಣನವರ , ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಹಸೀಲ್ದಾರ್ ಕಚೇರಿ ಮತ್ತು ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸಹ ನಡೆದ ಕನಕ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ