ಕನ್ನಡಪ್ರಭ ವಾರ್ತೆ ಚಿಂಚೋಳಿ
ಭಕ್ತಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ಹಾಗೂ ಜಾತಿ ನಿರ್ಮೂಲನೆ ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ ಎಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕ ಪ್ರೊ. ಎಚ್.ಎಸ್ .ಕೋರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕ ಆಡಳಿತ ಸೌಧ ಆವರಣದಲ್ಲಿ ಶನಿವಾರ ತಾಲೂಕ ಆಡಳಿತ ವತಿಯಿಂದ ಏರ್ಪಡಿಸಿದ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೮ನೇ ಜಯಂತ್ಯುತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಭಕ್ತಕನಕದಾಸರು ಸಾಹಿತ್ಯಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದರು. ೩೧೬ ಕೀರ್ತನೆಗಳನ್ನು ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಸಾರ ನರಸಿಂಹ ಕೃತಿಗಳು ನಾಡಿಗೆ ನೀಡಿದ್ದಾರೆ. ಭಕ್ತಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನು ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರು ಕನಕದಾಸರು ಎಂದು ಪ್ರೊ. ಹೆಚ್.ಎಸ್ .ಕೋರಿ ಹೇಳಿದರು.ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ ಮಾತನಾಡಿ, ಭಕ್ತ ಕನಕದಾಸರು ಸಮಾಜದಲ್ಲಿ ಸಮಾನತೆ ತರಲು ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದವರು. ಕೈಯಲ್ಲಿ ತಂಬೂರಿ ಹಿಡಿದು ತಮ್ಮ ಕೀರ್ತನೆಗಳ ಮೂಲಕ ಮೂಢನಂಬಿಕೆ ಅಂಧಕಾರ ಅನಾಚಾರ, ಅಂಕುಡೊಂಕು ತಿದ್ದಿದವರು ಎಂದರು.
ಕಾರ್ಯಕ್ರಮದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಮಲಿ, ಕುರುಬ ಸಮಾಜದ ಮುಖಂಡ ಹಣಮಂತರಾವ್ ಪೂಜಾರಿ, ಗೋಪಾಲ ಪೂಜಾರಿ ಭಕ್ತಕನಕ ದಾಸರ ಕುರಿತು ಮಾತನಾಡಿದರು.ಕಂದಾಯ ಇಲಾಖೆ ಗ್ರೇಡ-೨ ತಹಸೀಲ್ದಾರ ವೆಂಕಟೇಶ ದುಗ್ಗನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ನಿಂಗಮ್ಮ ಬೀರಾದಾರ್, ಟಿಹೆಚ್‌ಒ ಡಾ. ಮಹ್ಮದ ಗಫಾರ್, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಬಿಇಒ ಲಚಮಯ್ಯ, ರಾಜಕುಮಾರ ಮರಪಳ್ಳಿ, ಸಿದ್ದಾರೂಢ ಹೊಕ್ಕುಂಡಿ, ನೌಕರರ ಸಂಘದ ತಾಲೂಕ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ, ಅಭಿಷೇಕ ಮಲಕೂಡ, ಮಲ್ಲಯ್ಯ ಮುತ್ಯಾ ಶ್ರೀಮಂತ ಕಟ್ಟಿಮನಿ, ತಾಲೂಕ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಅಡಕಿ, ಹಣಮಂತ ಹಿರೇಮನಿ, ಗಿರಿರಾಜ ನಾಟೀಕಾರ ಕೆ.ಎಮ.ಬಾರಿ, ಮಂಜುಳ ಗಂಗನಪಳ್ಳಿ, ಅಲ್ಲದೇ ಕುರುಬ ಸಮಾಜದ ಅನೇಕ ಮುಖಂಡರು ಭಾಗವಹಸಿದ್ದರು. ಜಯಪ್ಪ ಚಾಪೆಲ್ ಸ್ವಾಗತಿಸಿದರು.ಅಶೋಕ ಹೂವಿನಬಾವಿ ನಿರೂಪಸಿದರು, ದೈಹಿಕ ಶಿಕ್ಷಕ ಶಾಮರಾವ್ ಮೋಘಾ ವಂದಿಸಿದರು. ಭಕ್ತ ಕನಕದಾಸರ ಭಾವಚಿತ್ರವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ತಹಸೀಲ ಕಚೇರಿವರೆಗೆ ಡೊಳ್ಳು ಕುಣಿತದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ತಾಲೂಕಿನ ಕುಂಚಾವರಂ, ಶಾದೀಪೂರ, ಐನೋಳಿ, ಐನಾಪೂರ, ಚಿಮ್ಮನಚೋಡ, ನಿಡಗುಂದಾ, ಚಿಮ್ಮಾಇದಲಾಯಿ, ಮಿರಿಯಾಣ, ಚಂದಾಪೂರ ಪಟ್ಟಣದ ಅನೇಕ ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮದಿಂದ ಭಕ್ತ ಕನಕದಾಸರ ಜಯಂತಿ ಆಚರಿಸಿದರು.