ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ತಾಲುಕಿನ ಕುರುಬ ಸಮುದಾಯದ ಪರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಯನ್ನು ಚಿಕ್ಕೋಡಿ ನಗರದಲ್ಲಿ ಸ್ಥಾಪಿಸಬೇಕೆಂದು ಹಲವು ಸಲ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಜೊತೆಗೆ ಹೋರಾಟಗಳನ್ನು ಸಹ ಮಾಡಲಾಗಿದೆ. ನಮ್ಮ ಸಮುದಾಯದ ವತಿಯಿಂದ ಈ ಎರಡು ಬೇಡಿಕೆಗಳನ್ನು ಮತ್ತೊಮ್ಮೆ ಹೋರಾಟ ಮಾಡಿಯಾದರು ಈಡೇರಿಸಿಕೊಳ್ಳಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಭವನ ಸ್ಥಾಪನೆಗೆ ನಾಯಕರು, ಸಮಾಜ ಸೇವಕ ಪ್ರತಾಪ ಪಾಟೀಲ ಹಾಗೂ ಯುವ ಕೇಸರಿ ಶಿವರಾಜ ಪಾಟೀಲ ₹5 ಲಕ್ಷ ನೀಡಿದ್ದು ಸ್ಥಳ ನಿಗದಿಯಾದ ತಕ್ಷಣವೆ ಮತ್ತೆ ₹5 ಲಕ್ಷ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಚಿಕ್ಕೋಡಿ ಪುರಸಭೆ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪನೆಗೆ ಹಾಗೂ ಕನಕದಾಸ ಭವನ ನಿರ್ಮಾಣಕ್ಕೆ ಸೂಕ್ತ ಜಾಗೆ ಸರ್ಕಾರ ಒದಗಿಸಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ.ಮುರಸಿದ್ದೇಶ್ವರ ದೇವಸ್ಥಾನ ಅಧ್ಯಕ್ಷ ಮುರಾರಿ ಶಿಂಗಾಡೆ, ಸಂತೋಷ ಪೂಜಾರಿ, ಸಿದ್ದಪ್ಪ ಡಂಗೇರ, ಶಂಕರ ಪೂಜಾರಿ, ಲಕ್ಕಪ್ಪಾ ಶಿಂಗಾಡೆ, ಶಂಕರ ಡಂಗೇರ, ವಿಠ್ಠಲ ಕರಿಗಾರ, ಬಸವರಾಜ ದತ್ತವಾಡೆ, ಮುರಾರಿ ಕರಿಗಾರ, ಮಾರುತಿ ದತ್ತವಾಡೆ, ನಾಗರಾಜ ದತ್ತವಾಡೆ, ಮಾರುತಿ ಕರಿಗಾರ ಸೇರಿದಂತೆ ಕುರುಬ ಸಮಾಜ ಬಾಂಧವರು ಇದ್ದರು.