ಕುಷ್ಟಗಿ: ಭಕ್ತ ಕನಕದಾಸರು ಸಮಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಅವರು, ಒಂದೆ ಜಾತಿಗೆ ಸೀಮಿತಗೊಳ್ಳದೆ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ದಾರ್ಶನಿಕರ ಜಯಂತಿ ಮೆರವಣಿಗೆ ಮತ್ತು ಉಪನ್ಯಾಸಕ್ಕೆ ಸೀಮಿತಗೊಳಿಸದೆ ಅವರ ಹೆಸರಿನಲ್ಲಿ ಉತ್ತಮ ಕಾರ್ಯ ಮಾಡುವ ಮೂಲಕ ಅವರ ತತ್ವಾದರ್ಶ ಅಳವಡಿಸಿಕೊಂಡು ಸಮಾಜದಲ್ಲಿ ಮನುಷ್ಯತ್ವದಿಂದ ಸಾಮಾಜಿಕ ಸಾಮರಸ್ಯದಿಂದ ಬದುಕು ನಡೆಸಲು ಮುಂದಾಗಬೇಕು ಎಂದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಸಮಾಜದಲ್ಲಿ ಉತ್ತಮ ಬದುಕನ್ನು ಸಾಗಿಸಲು ಹಾಗೂ ಸನ್ಮಾರ್ಗ ಪಡೆಯಲು ಕನಕದಾಸರಂತಹ ದಾರ್ಶನಿಕರ ತತ್ವ ಅರಿತುಕೊಂಡು ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಕಿತ್ತೆಸೆಯಲು ಮುಂದಾಗಬೇಕು ಎಂದರು.ಶಿಕ್ಷಕ ಶರಣಪ್ಪ ತೆಮ್ಮಿನಾಳ ಉಪನ್ಯಾಸ ನೀಡಿ, ಮನುಷ್ಯ ನಾನು ನನ್ನಿಂದ ಎನ್ನುವ ಮೌಢ್ಯದಿಂದ ಹೊರಬರಬೇಕು. ಕನಕದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆ ತಂದವರಾಗಿದ್ದಾರೆ ಎಂದರು.
ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಮಾಜಿ ಜಿಪಂ ಸದಸ್ಯ ಕೆ ಮಹೇಶ, ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಪ್ಪ ಚೌಡ್ಕಿ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಿವಾನಂದಯ್ಯ ಗುರುವಿನ, ಶರಣಯ್ಯ ಗುರುವಿನ, ಕಳಕಯ್ಯ ಗುರುವಿನ, ಹಿರಿಯ ನ್ಯಾಯವಾದಿ ಫಕೀರಪ್ಪ ಚಳಗೇರಿ, ಹನಮಂತಪ್ಪ ಚೌಡ್ಕಿ, ದೇವೆಂದ್ರಪ್ಪ ಬಳೂಟಗಿ, ಬಸವರಾಜ ಹಳ್ಳೂರು, ಕಂದಕೂರಪ್ಪ ವಾಲ್ಮೀಕಿ, ಸಂಗಪ್ಪ ಪಂಚಮ್, ದೊಡ್ಡಪ್ಪ ಗಾಣದಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕನಕದಾಸ ಪುತ್ತಳಿಗೆ ಮಾಲಾರ್ಪಣೆ: ಕುಷ್ಟಗಿ ಪಟ್ಟಣದ ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕನಕದಾಸರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಾದಿಮನಾಳ ಶಾಖಾ ಮಠದ ಶಿವಸಿದ್ದೇಶ್ವರ ಶ್ರೀಗಳು, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯಾಪುರ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ವಿಜಯಕುಮಾರ ಹಿರೇಮಠ, ಪರಶುರಾಮ್ ನಾಗರಾಳ, ಶಿವನಗೌಡ ಮಾಲಗಿತ್ತಿ, ಪ್ರಭುಶಂಕರಗೌಡ, ಹಾಲುಮತ ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.