ಕನಕದಾಸ ಶ್ರೇಷ್ಠ ಸಮಾಜ ಸುಧಾರಕ: ಎಸ್.ಪಿ. ಚಿದಾನಂದ್

KannadaprabhaNewsNetwork |  
Published : Nov 28, 2026, 12:15 AM IST
್ಿ್ಿ್ಿ | Kannada Prabha

ಸಾರಾಂಶ

ಭಕ್ತಿ, ಪ್ರಾರ್ಥನೆ ಮೂಲಕ ಉಡುಪಿ ಕೃಷ್ಣನನ್ನೇ ಒಲಿಸಿಕೊಂಡ ಕನಕದಾಸಕರು ಮಹಾನ್ ದಾರ್ಶನಿಕರು, ಜಾತಿ ವ್ಯವಸ್ಥೆ ವಿರುದ್ಧ ಜನ ಜಾಗೃತಿ ಮೂಡಿಸಿದ ಸಮಾಜ ಸುಧಾರಕರು ಎಂದು ಎಸ್.ಪಿ. ಡೆವಲಪರ್ಸ್ ವ್ಯವಸ್ಥಾನಕ ನಿರ್ದೇಶಕಎಸ್.ಪಿ.ಚಿದಾನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಭಕ್ತಿ, ಪ್ರಾರ್ಥನೆ ಮೂಲಕ ಉಡುಪಿ ಕೃಷ್ಣನನ್ನೇ ಒಲಿಸಿಕೊಂಡ ಕನಕದಾಸಕರು ಮಹಾನ್ ದಾರ್ಶನಿಕರು, ಜಾತಿ ವ್ಯವಸ್ಥೆ ವಿರುದ್ಧ ಜನ ಜಾಗೃತಿ ಮೂಡಿಸಿದ ಸಮಾಜ ಸುಧಾರಕರು ಎಂದು ಎಸ್.ಪಿ. ಡೆವಲಪರ್ಸ್ ವ್ಯವಸ್ಥಾನಕ ನಿರ್ದೇಶಕಎಸ್.ಪಿ.ಚಿದಾನಂದ್ ಹೇಳಿದರು.ನಗರದ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.ಕನಕದಾಸರು ಭಕ್ತಿ ಮಾರ್ಗದಲ್ಲಿ ಸಾಗಿದ ಕನಕದಾಸರು ತಮ್ಮ ಕೀರ್ತನೆಗಳ ಸಮಾಜ ಪರಿವರ್ತನೆಗೂ ಕಾರಣರಾದರು.ಕೃಷ್ಣನ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದಾಗ ಭಕ್ತಿ, ಪ್ರಾರ್ಥನೆ ಮೂಲಕ ಕೃಷ್ಣನು ಕಿಂಡಿಯ ಮೂಲಕ ಕನಕರಿಗೆ ದರ್ಶನ ಕೊಟ್ಟನೆಂದರೆ ಅವರಲ್ಲಿ ಭಕ್ತಿಯ ಶಕ್ತಿ ಅವರಿವಾಗುತ್ತದೆ.ಅಂತಹ ಮಹಾನ್ ಪುರುಷ ಕನಕದಾಸರು ಯಾವುದೇ ಸಮಾಜಕ್ಕೆ ಸೀಮಿತವಲ್ಲ, ವಿಶ್ವವೇ ಆಧರಿಸುವ ಮಹನೀಯರು.ಕನಕದಾಸರು ಆಧ್ಯಾತ್ಮಿಕತೆ ಮೂಲಕ ಅನೇಕ ಕೀರ್ತನೆಗಳನ್ನು ರಚಿಸಿ, ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಮಾರ್ಗವನ್ನು ತೋರಿಸಿದ್ದಾರೆ ಎಂದು ಹೇಳಿದರು.ಬಿಜೆಪಿ ಮುಖಂಡಟಿ.ಆರ್.ಸದಾಶಿವಯ್ಯ, ಶ್ರಮ ಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಸಮಾಜ ಸೇವಕ ನಟರಾಜಶೆಟ್ಟಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಸಂಘದ ಪದಾಧಿಕಾರಿಗಳಾದ ಶಿವಣ್ಣ, ರಾಜಣ್ಣ, ಆದಿಲ್ ಬಾಷಾ, ವಿಜಯಕುಮಾರ್, ಅನಿತಾ, ರಾಮಾಂಜನಯ್ಯ, ನಾಸುರುದ್ದೀನ್, ಸಿದ್ಧಲಿಂಗೇಶ್ವರ, ಪಾರ್ವತಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹೇ ವಿವಿ 15ನೇ ಘಟಿಕೋತ್ಸವ ಇಂದು
ಆಪರೇಷನ್ ಗಜಕ್ಕೆ ಹಿನ್ನಡೆ: ಬೇಲೂರಿಗೆ ಮರಳಿದ 22 ಕಾಡಾನೆಗಳು