)
2 ಭಾಗಗಳಾಗಿ ಬೇರ್ಪಟ್ಟ 39 ಕಾಡಾನೆಗಳ ಗುಂಪು । 22 ಆನೆಗಳು ಮತ್ತೆ ಬೇಲೂರು ಭಾಗಕ್ಕೆ । 18 ಆನೆಗಳು ಮೂಡಿಗೆರೆ ಭಾಗದಲ್ಲಿವೆ
39 ಕಾಡಾನೆಗಳ ಗುಂಪು ಎರಡು ಭಾಗಗಳಾಗಿ ಬೇರ್ಪಟ್ಟಿದ್ದು, 22 ಆನೆಗಳು ಮತ್ತೆ ಬೇಲೂರು ಭಾಗಕ್ಕೆ ಮರಳಿವೆ. ಉಳಿದ 18 ಆನೆಗಳು ಮೂಡಿಗೆರೆ ಭಾಗದಲ್ಲೇ ಬೀಡುಬಿಟ್ಟಿವೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಲವಂತವಾಗಿ ಸ್ಥಳಾಂತ ರಿಸುವ ಅರಣ್ಯ ಇಲಾಖೆ ಕಾರ್ಯಾಚರಣೆಗೆ ತೀವ್ರ ಹಿನ್ನೆಡೆಯಾಗಿದೆ.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಭಾಗದಲ್ಲಿದ್ದ 39 ಆನೆಗಳ ಗುಂಪು ಗುರುವಾರ ರಾತ್ರಿ ಬೇರ್ಪಟ್ಟಿದೆ. 22 ಆನೆಗಳು ಬೇಲೂರಿನ ಕನ್ನಹಳ್ಳಿ ಭಾಗಕ್ಕೆ ಹಿಮ್ಮುಖವಾಗಿ ತೆರಳಿದ್ದರೆ, 18 ಆನೆಗಳು ಮೂಡಿಗೆರೆ ಕನ್ನಾಪುರ ಭಾಗದಲ್ಲಿವೆ. ಇನ್ನು ಮೂರು ಗಂಡಾನೆಗಳು ಬಿಕ್ಕೋಡು ಭಾಗದಲ್ಲಿ ಬೀಡುಬಿಟ್ಟಿವೆ. ಆನೆಗಳ ಗುಂಪುಗಳ ಚಲನವಲನವನ್ನು ಅರಣ್ಯ ಇಲಾಖೆ ತಂಡ ಗಮನಿಸುತ್ತಿದೆ.ಆನೆಗಳ ಸಹಜ ಚಲನವಲನಕ್ಕೆ ಅವಕಾಶ ನೀಡುವ ಬದಲು ಅವುಗಳನ್ನು ಬಲವಂತವಾಗಿ ಭದ್ರಾ ಅಭಯಾರಣ್ಯಕ್ಕೆ ಓಡಿಸ ಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಆನೆಗಳನ್ನು ಬಲವಂತವಾಗಿ ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ. ಅವುಗಳ ಸಹಜ ಚಲನವಲನ ಗಮನಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಮನೋಜ್ ರಾಜನ್ ಸ್ಪಷ್ಟಪಡಿಸಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಮತ್ತಾವರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಆನೆಗಳು ಅತ್ಯಂತ ಬುದ್ಧಿ ವಂತ ಪ್ರಾಣಿಗಳಾಗಿದ್ದು, ಅವುಗಳ ಸಾಮಾಜಿಕ ವ್ಯವಸ್ಥೆ ಬಲಿಷ್ಠವಾಗಿದೆ. ವಿಶೇಷವಾಗಿ ಹೆಣ್ಣಾನೆಗಳು ಮರಿಗಳೊಂದಿಗೆ ಸಂಚರಿಸುವಾಗ ಅವುಗಳಿಗೆ ಅನುಕೂಲವಿಲ್ಲದ ಪ್ರದೇಶಕ್ಕೆ ಹೋಗಲ್ಲ. ಗಂಡಾನೆಗಳು ಮಾತ್ರ ಪ್ರತ್ಯೇಕವಾಗಿ ಬೇರೆಡೆ ಸಂಚರಿ ಸುವ ಸಾಧ್ಯತೆಯಿದೆ. ಹೀಗಾಗಿ ಆನೆಗಳ ಸ್ವಭಾವ ಅರಿತು ಅವುಗಳನ್ನು ಗಮನಿಸಲಾಗುತ್ತಿದೆ. ಆನೆಗಳು ತಮಗೆ ಇಷ್ಟವಾದ ಕಡೆಗೆ ಸಹಜವಾಗಿ ಚಲಿಸಲು ಅವಕಾಶ ನೀಡಲಾಗುತ್ತಿದೆ ಎಂದರು... ಬಾಕ್ಸ್...ಒಂಟಿ ಸಲಗ ಸೆರೆಗೆ ಕಾರ್ಯಾಚರಣೆಚಿಕ್ಕಮಗಳೂರು ನಗರದ ಮತ್ತಾವರ ಅರಣ್ಯ ಪ್ರದೇಶದಲ್ಲಿ ಕಳೆದ 15- 16 ದಿನಗಳಿಂದ ಕೃಷಿ ಬೆಳೆಗಳಿಗೆ ಹಾನಿ ಮಾಡುತ್ತಿದ್ದ ಸುಮಾರು 20 ವರ್ಷದ ಒಂಟಿ ಗಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯ ವನ್ಯ ಜೀವಿ ಸಂರಕ್ಷಣಾಧಿಕಾರಿ (ಸಿಡಬ್ಲ್ಯುಎಲ್) ಆದೇಶದಂತೆ ಆನೆ ಸೆರೆಹಿಡಿಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಬಿಕ್ಕೋಡು ಶಿಬಿರದಿಂದ ಆರು ಕುಮ್ಕಿ ಆನೆಗಳನ್ನು ಕರೆಸಿಕೊಂಡು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಕಾರ್ಯಾಚರಣೆ ಆರಂಭಿಸ ಲಾಗಿದೆ. ಆದರೆ ಸಲಗ ಸಂಪೂರ್ಣವಾಗಿ ದಟ್ಟ ಅರಣ್ಯದೊಳಗೆ ಪ್ರವೇಶಿಸಿದ್ದು, ಡ್ರೋನ್ ಕ್ಯಾಮೆರಾಗಳಿಗೂ ಪತ್ತೆ ಯಾಗಿಲ್ಲ. ಕಡಿದಾದ ಪ್ರದೇಶ ಹಾಗೂ ದಟ್ಟ ಪೊದೆಗಳಿಂದ ಕುಮ್ಕಿ ಆನೆಗಳನ್ನು ಒಳಗೆ ಕರೆದೊಯ್ಯುವುದೂ ಕಷ್ಟವಾಗಿದೆ. ಸತತ 4 ಗಂಟೆಗಳ ಕಾಲ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ಹಂತದಲ್ಲಿ ಸಲಗ ಪತ್ತೆಯಾದರೂ, ಅಲ್ಲಿ ಅರವ ಳಿಕೆ ಮದ್ದು ನೀಡಿದರೆ ಆನೆಯನ್ನು ಸುರಕ್ಷಿತವಾಗಿ ಹೊರಗೆ ಕರೆತರುವುದು ಕಷ್ಟ ಹಾಗಾಗಿ ಆ ಪ್ರಯತ್ನ ಮಾಡಿಲ್ಲ ಎಂದು ಮನೋಜ್ ರಾಜನ್ ತಿಳಿಸಿದರು....ಬಾಕ್ಸ್...ಸಲಗ ಕಾರ್ಯಾಚರಣೆಗೆ ಈಶ ಹೆಸರಿನ ಶ್ವಾನ:
....ಬಾಕ್ಸ್...
...ಬಾಕ್ಸ್...
ಈಗಾಗಲೇ ಒಂದು ಆನೆ ಗುಂಪು ವಾಪಸ್ ಬೇಲೂರು ಭಾಗಕ್ಕೆ ತಲುಪಿಸಿರುವ ಭೀಮಾ ಎಂಬ ಆನೆ. ಇದೀಗ ಮೂಡಿಗೆರೆಯ ಮಾಕೋನಹಳ್ಳಿ ಭಾಗದಲ್ಲಿ ಬೀಡುಬಿಟ್ಟಿರುವ 18 ಆನೆಗಳ ಗುಂಪನ್ನು ಕರೆದೊಯ್ಯುವುದಕ್ಕೆ ಆಗಮಿಸಿದ್ದಾನೆ. ಆನೆ ಗುಂಪಿನ ಸ್ಥಳದಿಂದ ಸುಮಾರು 2-3 ಕಿ.ಮೀ ಅಂತರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಶನಿವಾರ ಅಥವಾ ಭಾನುವಾರದ ವೇಳೆ 18 ಆನೆಗಳ ಗುಂಪನ್ನು ಕರೆದುಕೊಂಡು ಭೀಮಾ ಹೋಗಲಿದ್ದಾನೆ. ಅರಣ್ಯ ಇಲಾಖೆ ಯಾವುದೇ ಕಾರ್ಯಾಚರಣೆ ಬೇಕಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಆನೆ ಗುಂಪಿನ ಪೋಟೊ ಬಳಸಿ