ಕನ್ನಡಪ್ರಭ ವಾರ್ತೆ ಆನಂದಪುರ
ದಾಸಶ್ರೇಷ್ಠರೆಂದೇ ಕರೆಯಲಾಗುವ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು ಎಂದು ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯ ಈಶ್ವರಪ್ಪ ತಿಳಿಸಿದರು.ಅವರು ಶನಿವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನಕದಾಸರ ಕೀರ್ತನೆಗಳು, ಭಕ್ತಿ ಸಂಯೋಜನೆಗಳು ಸಮಾಜವನ್ನು ಪ್ರೇರೇಪಿಸುತ್ತಿವೆ ಮತ್ತು ಉನ್ನತಿಗೊಳಿಸುತ್ತಿವೆ. ಕನಕದಾಸರ ಜೀವನದಲ್ಲಿ ಬದ್ಧತೆ, ಸಾಮಾಜ ಸುಧಾರಣೆ ಮತ್ತು ಸಾಹಿತ್ಯ ಪ್ರತಿಭೆಯನ್ನು ಕಾಣಬಹುದು ಎಂದರು.
ಕನಕದಾಸರ ಜೀವನದಲ್ಲಾದ ಮಹತ್ತರ ಬದಲಾವಣೆ ಅವರ ಜೀವನ ಮಹತ್ತರವಾದ ತಿರುವನ್ನು ಪಡೆದುಕೊಂಡಿದ್ದೇ ಅವರು ಉಡುಪಿಯಲ್ಲಿರುವ ಶ್ರೀಕೃಷ್ಣ ಮಠದ ಮುಖ್ಯಸ್ಥರಾದ ಸಂತ ವ್ಯಾಸರಾಜರನ್ನು ಭೇಟಿ ಮಾಡಿದ ನಂತರವಾಗಿತ್ತು. ಇವರಿಬ್ಬರ ಭೇಟಿ ಕನಕದಾಸರಲ್ಲಿ ಆಧ್ಯಾತ್ಮಿಕ ಪರಿವರ್ತನೆಯನ್ನು ತಂದಿತು. ವ್ಯಾಸರಾಜರ ಬೋಧನೆಗಳಿಂದ ಪ್ರೇರಿತರಾದ ಕನಕದಾಸರು ತಮ್ಮ ಎಲ್ಲಾ ಭೌತಿಕ ಅನ್ವೇಷಣೆಗಳನ್ನು ತೊರೆದು ಭಕ್ತಿಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದವರು ಎಂದು ಹೇಳಿದರು.ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ಜನಪ್ರಿಯವಾದವು ಮಹಾಭಾರತ ಮಹಾಕಾವ್ಯದ ಕನ್ನಡ ರೂಪಾಂತರವಾದ ''''''''ನಳಚರಿತ'''''''' ಮತ್ತು ಭ್ರಮೆ ಮತ್ತು ಆಧ್ಯಾತ್ಮಿಕ ವಿಮೋಚನೆಯ ಸ್ವರೂಪದ ಕುರಿತಾದ ಸಾಹಿತ್ಯಿಕ ಪ್ರಯಾಣವಾದ ''''''''ಮೋಹನ ತರಂಗಿಣಿ'''''''' ಕರ್ನಾಟಕ ಸಂಗೀತಕ್ಕೆ ಕನಕದಾಸರ ಕೊಡುಗೆ ಹೊಸ ರೂಪ ನೀಡಿತು.
ಕನಕದಾಸರು ಕೇವಲ ಸಂತರಾಗಿ ಮಾತ್ರವಲ್ಲ, ಒಬ್ಬ ಸಮಾಜ ಸುಧಾರಕರೂ ಆಗಿದ್ದರು. ಕನಕದಾಸರು ಸಮಾಜದಲ್ಲಿ ಸಮತೋಲನವನ್ನು ತರುವುದಕ್ಕಾಗಿ ಪ್ರತಿಪಾದನೆಯನ್ನು ಮಾಡಿದವರು. ಆಗಿನ ಕಾಲದ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದವರು. ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಮೇಲೆ ಪ್ರಭಾವ ಬೀರಿತು ಅವರ "ರಾಮಧಾನ್ಯ ಚರಿತೆ "ಯೇ ಉತ್ತಮ ಉದಾಹರಣೆಯಾಗಿದೆ ಎಂದರು. ಕೆಪಿಎಸ್ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.