ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರ: ಡಾ. ಎನ್.ಎಂ. ಅಂಬಲಿ

KannadaprabhaNewsNetwork |  
Published : Nov 21, 2025, 02:15 AM IST
ಕಾರ್ಯಕ್ರಮವನ್ನು ಶಾಂತಲಿಂಗ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನಕದಾಸರ ಸಾಹಿತ್ಯ ಹಿಡಿದರೆ ಹಿಡಿತುಂಬ, ಬಿಟ್ಟರೆ ಬ್ರಹ್ಮಾಂಡ ಎನ್ನುವ ಹಾಗೆ ಅವರ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿದೆ.

ನರಗುಂದ: 12ನೇ ಶತಮಾನದ ಸಮಗ್ರ ಆಶಯಗಳನ್ನು ತಮ್ಮ ಸಾಹಿತ್ಯದ ಮೂಲಕ ಜನಮಾನಸಕ್ಕೆ ತಲುಪಿದವರು ಕನಕದಾಸರು. ಜನವಾಣಿಯನ್ನು ದೇವವಾಣಿಗೆ ಕರೆದುಕೊಂಡು ಹೋದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಸಾಹಿತ್ಯದ ಮೂಲಕ ಜಾತಿಗೆ ತಿಲಾಂಜಲಿ ನೀಡಿದ ಕನಕದಾಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ಕನಕ ಸಿರಿ ಪ್ರಶಸ್ತಿ ಪುರಸ್ಕೃತ ಡಾ. ಎನ್.ಎಂ. ಅಂಬಲಿ ತಿಳಿಸಿದರು.ಪಟ್ಟಣದ ಎಸ್.ವೈ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ತಿಂಗಳು- 2025ರ ಪ್ರಯುಕ್ತ ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ವಿಷಯದ ಕುರಿತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಸಾಹಿತ್ಯ ಹಿಡಿದರೆ ಹಿಡಿತುಂಬ, ಬಿಟ್ಟರೆ ಬ್ರಹ್ಮಾಂಡ ಎನ್ನುವ ಹಾಗೆ ಅವರ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿದೆ ಎಂದರು.ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಗಜಲ್ ಕವಿ ಆನಂದ ಭೋವಿ ಮಾತನಾಡಿ, ಕವಿಯ ಅನುಭವದ ಅಂತರಾಳದ ಮೂಲಕ ಹೊರಹೊಮ್ಮುವ ನುಡಿಗಳೆ ಕವನಗಳಾಗಿವೆ. ಹೀಗಾಗಿ ಕವಿ ಕವಿತೆ ರಚನೆ ಮಾಡುವಾಗ ತೀಕ್ಷ್ಣತೆ ಹಾಗೂ ಪದಬಳಕೆಯ ಬಗೆಗೆ ಗಮನಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಯುವ ಕವಿಗಳಾದ ಪ್ರೊ. ಎಸ್.ಎಸ್. ಪೂಜಾರ, ಮಂಜು ಘಾಳಿ, ಸುನೀಲ ಕಳಸದ, ಶರಣು ಸೂಡಿ, ಚೈತ್ರಾ ಓದೇಗಾರ, ಶಿವಾನಂದ ಕೋಟಿ, ನೀಲಕಂಠ ಮಡಿವಾಳರ, ಬಾರಕೇರ ಅವರು ಕವನ ವಾಚನ ಮಾಡಿದರು. ಸಂಸ್ಥೆ ಅಧ್ಯಕ್ಷ ವಿ.ಬಿ. ಪಾಟೀಲ, ಪ್ರಾ. ಆರ್.ಬಿ. ಪಾಟೀಲ, ಬಂಡಾಯ ಸಾಹಿತಿ ಮಾರುತಿ ಬೋಸಲೆ, ನಿವೃತ್ತ ಪ್ರಾದ್ಯಾಪಕ ಪಿ.ಎಸ್. ಅಣ್ಣಿಗೇರಿ, ಮಹಾಂತೇಶ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿವಾನಂದ ಕೋಟಿ ಸ್ವಾಗತಿಸಿದರು. ಎ.ಪಿ. ಖ್ಯಾತನಗೌಡ್ರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!