ನವ ಚೈತನ್ಯ, ಉತ್ಸಾಹ ವೃದ್ಧಿಸಲು ಕ್ರೀಡೆಗಳು ಸಹಕಾರಿ-ಜಿಲ್ಲಾಧಿಕಾರಿ

KannadaprabhaNewsNetwork |  
Published : Nov 21, 2025, 02:15 AM IST
20ಎಚ್‌ವಿಆರ್8 | Kannada Prabha

ಸಾರಾಂಶ

ಎಲ್ಲಾ ಸಂಪತ್ತುಗಳಿಗಿಂತ ಅರೋಗ್ಯ ಸಂಪತ್ತು ಹೆಚ್ಚು ಮಹತ್ವದ್ದಾಗಿದೆ. ಆರೋಗ್ಯ ಸರಿಯಾಗಿ ಕಾಯ್ದುಕೊಳ್ಳದಿದ್ದಲ್ಲಿ ನಾವುಗಳು ಏನು ಸಂಪಾದಿಸಿದರೂ ಅದು ಲೆಕ್ಕಕ್ಕೆ ಇರುವುದಿಲ್ಲ. ಹೀಗಾಗಿ ಆರೋಗ್ಯದ ಕಡೆಗೆ ನಾವುಗಳು ಹೆಚ್ಚು ಕಾಳಜಿ ವಹಿಸಬೇಕು, ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.

ಹಾವೇರಿ: ಎಲ್ಲಾ ಸಂಪತ್ತುಗಳಿಗಿಂತ ಅರೋಗ್ಯ ಸಂಪತ್ತು ಹೆಚ್ಚು ಮಹತ್ವದ್ದಾಗಿದೆ. ಆರೋಗ್ಯ ಸರಿಯಾಗಿ ಕಾಯ್ದುಕೊಳ್ಳದಿದ್ದಲ್ಲಿ ನಾವುಗಳು ಏನು ಸಂಪಾದಿಸಿದರೂ ಅದು ಲೆಕ್ಕಕ್ಕೆ ಇರುವುದಿಲ್ಲ. ಹೀಗಾಗಿ ಆರೋಗ್ಯದ ಕಡೆಗೆ ನಾವುಗಳು ಹೆಚ್ಚು ಕಾಳಜಿ ವಹಿಸಬೇಕು, ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ 3 ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಯಾವುದೇ ಒಂದು ಆಡಳಿತ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಜವಾಬ್ದಾರಿಗಳಿವೆ. ಅದರಲ್ಲಿ ಮೊದಲನೇಯದು ರಾಜ್ಯಸ್ವ ಸಂಗ್ರಹಣೆ ಮತ್ತು ಒಳಾಡಳಿತ ನಿರ್ವಹಣೆ, ಎರಡನೆಯದು ಪ್ರಾಂತ್ಯಗಳ ರಕ್ಷಣೆ ಮೊದಲನೇ ಕೆಲಸವನ್ನು ಕಂದಾಯ ಇಲಾಖೆ ಮಾಡಿದರೆ ಎರಡನೆಯ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿಕೊಂಡು ಬಂದಿದೆ ಎಂದರು.ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರು ದಿನದ 24 ಗಂಟೆ ಕರ್ತವ್ಯದಲ್ಲಿರುತ್ತಾರೆ. ಇವರಿಗೆ ಬೇರೆ ಇಲಾಖೆಗಳಂತೆ ನಿರ್ದಿಷ್ಟ ಕಾಲ ಮಿತಿಯಿಲ್ಲ. ಸಮಾಜದಲ್ಲಿ ನಡೆಯುವ ಕೊಲೆ, ಸುಲಿಗೆ, ಕಳ್ಳತನ ಇದರ ನಡುವೆ ಹಬ್ಬ ಹರಿದಿನಗಳು, ದಿನಾಚರಣೆಗಳು ಹಾಗೂ ಇನ್ನಿತರೇ ಕೆಲಸದ ಒತ್ತಡ, ಹೀಗೆ ಬೇರೆ ಬೇರೆ ಸವಾಲುಗಳೊಂದಿಗೆ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾರೆ, ಅನಿರೀಕ್ಷಿತವಾಗಿ ಉಂಟಾದ ಒತ್ತಡವನ್ನು ಶಮನಗೋಳಿಸಲು ಕ್ರೀಡಾಕೂಟಗಳು ಉಪಯುಕ್ತವಾಗಲಿವೆ ಮತ್ತು ಕ್ರೀಡಾ ಚಟುವಟಿಕೆಗಳಿಂದ ನವ ಚೈತನ್ಯ ಉತ್ಸಾಹ ಹೆಚ್ಚಾಗುತ್ತದೆ. ಇದು ಕೇವಲ ಕ್ರೀಡಾಕೂಟದಂತಹ ಕಾರ್ಯಕ್ರಮಕ್ಕೆ ಸೀಮಿತವಾಗದೆ. ಪ್ರತಿದಿನ ಯಾವುದಾದರೊಂದು ಕ್ರೀಡೆಯಲ್ಲಿ ನಮ್ಮನ್ನು ನಾವುಗಳು ತೊಡಗಿಸಿಕೊಳ್ಳಬೇಕು. ಇದರಿಂದ ದೈಹಿಕವಾಗಿ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸ್ವಾಗತಿಸಿದರು. ಬಳಿಕ ಪರೇಡ್ ಕಮಾಂಡರ್ ಆರ್‌ಪಿಐ ಶಂಕರ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ 6 ಪ್ಲಟೂನ್‌ಗಳಾದ ಹಾವೇರಿ ಉಪ ವಿಭಾಗ, ಶಿಗ್ಗಾಂವಿ ಉಪ ವಿಭಾಗ, ಮಹಿಳಾ ಪೊಲೀಸ್ ಹಾವೇರಿ, ರಾಣೆಬೆನ್ನೂರ್ ಉಪ ವಿಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾವೇರಿ, ವಿಶೇಷ ಘಟಕ ಹಾವೇರಿ ಇವರಿಂದ ಪಥಸಂಚಲನ ನಡೆಯಿತು ಮತ್ತು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೆ ಸಂದರ್ಭದಲ್ಲಿ ಪೊಲೀಸ್ ಪೇದೆ ಸಂತೋಷ್ ನಾಯ್ಕ್ ಕ್ರೀಡಾ ಜ್ಯೋತಿ ಹಿಡಿದು ಸಾಗಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಪುನೀತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಶಿರಕೋಳ, ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಪೊಲೀಸ್ ಸಿಬ್ಬಂದಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ