ಮುಂಡರಗಿ: ಕನಕದಾಸರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿ ಸಾಹಿತ್ಯ ರಚಿಸಲಿಲ್ಲ. ಅವರು ಇಡೀ ಮನುಕುಲಕ್ಕೆ ಒಳಿತಾಗುವ ಮತ್ತು ಆದರ್ಶವಾಗುವಂತಹ ಸಾಹಿತ್ಯ ರಚಿಸಿದರು. ಅವರ ಸಾಹಿತ್ಯಕ್ಕೆ ಒಂದು ಚೌಕಟ್ಟನ್ನು ಹಾಕಿ ಅವರ ಆದರ್ಶಕ್ಕೆ ಬೇಲಿಹಾಕಿ ನಿಲ್ಲಿಸುವುದು ಸರಿಯಲ್ಲ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.
ತಿಮ್ಮಪ್ಪನಾಗಿ ಹುಟ್ಟಿದ ವ್ಯಕ್ತಿಯೊಬ್ಬ ಭಕ್ತನಾಗುತ್ತಾನೆ. ಕನಕನಾಗುತ್ತಾನೆ. 350ಕ್ಕೂ ಹೆಚ್ಚು ಕೀರ್ತನೆಗಳನ್ನು ರಚನೆ ಮಾಡುತ್ತಾನೆ. ಕಸಕದಾಸರು ಹೇಳಿದಂತೆ ಕುಲ ಕುಲ ಕುಲವೆಂದು ಬಡಿದಾಡುವುದು ಸರಿಯಲ್ಲ.
ಅತ್ಯಂತ ಮುಂದುವರಿದ ಇಂದಿನ ದಿನಮಾನಕಾಲದಲ್ಲಿ ಜಾತಿ, ಮತ, ಪಂಥ ಮೀರಿ ಎಲ್ಲರೂ ಮನುಷ್ಯರಾಗಿ ಪ್ರೀತಿ, ವಿಶ್ವಾಸದಿಂದ ಕೂಡಿ ಬಾಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಮೂಲಕ ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಂಜುನಾಥ ಮುಂಡವಾಡ, ಜ್ಯೋತಿ ಹಾನಗಲ್, ಯಂಕಣ್ಣ ಯಕ್ಲಾಸಪುರ, ಮುತ್ತು ಬಳ್ಳಾರಿ, ವಿಶ್ವನಾಥ ಹೊಸಮನಿ, ಉದಯಕುಮಾರ ಯಲಿವಾಳ, ಶಿವಾನಂದ ಇಟಗಿ, ಬಸವರಾಜ, ಮಂಜುಳಾ ಇಟಗಿ, ವಿ.ಎಸ್. ಗಟ್ಟಿ, ಅಶ್ವಿನಿ ಗೌಡರ್, ಪ್ರಭಾವತಿ, ಶರಣಪ್ಪ ಮುದಿಯಜ್ಜನವರ ಮಾತನಾಡಿದರು.