ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕದಾಸರ 538ನೇ ಜಯಂತಿ ಕಾರ್ಯಕ್ರಮಕ್ಕೆ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಕ್ತ ಕನಕದಾಸರು ಅಪಾರವಾದ ಜ್ಞಾನದ ಸಂಪತ್ತನ್ನು ಹೊಂದಿದ್ದರು. ಅವರ ಜ್ಞಾನದ ಸಂಪತ್ತಿನ ಫಲವಾಗಿ ಇಂದು ನಾವೆಲ್ಲರೂ ಸಮಾಜದಲ್ಲಿ ಜಾತಿ ಕಂದಕಗಳ ವಿಷ ಬೀಜದಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೇವೆ. ಕನಕದಾಸರು ಆರಾಧ್ಯದೈವವೆಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ಪಾಷ, ಕೀರ್ತನೆಗಳ ಮೂಲಕವೇ ಸಮಾಜದ ಜಾಗೃತಿಯನ್ನು ಕೈಗೊಂಡ ಏಕೈಕ ಮಹಾನೀಯರು ಭಕ್ತ ಕನಕದಾಸರು. ತಮ್ಮೆಲ್ಲಾ ಸಿರಿಬೋಗಗಳನ್ನು ತೊರೆದು ವಿರಾಗಿಯಾಗಿ ಕೀರ್ತನೆಗಳ ರಚನೆ ಮೂಲಕ ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷ ಕಂದಿಕೆರೆ ಸುರೇಶ್‌ಬಾಬು, ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ಜಿಪಂ ಮಾಜಿ ಅಧ್ಯಕ್ಷ ಶಶಿಕಲಾ ಸುರೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷೆ ಶಿಲ್ಪಮುರುಳಿ, ಮಾಜಿಉಪಾಧ್ಯಕ್ಷೆ ಕವಿತಾವೀರೇಶ್, ಚೌಳೂರುಬಸವರಾಜು, ರಾಜಶೇಖರ ಮುಂತಾದವರು ಉಪಸ್ಥಿತರಿದ್ದರು.