ಮನುಕುಲಕ್ಕೆ ಕನಕದಾಸರ ಕೊಡುಗೆ ಅಪಾರ: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Nov 19, 2024, 12:49 AM IST
18ಕೆಪಿಎಲ್1:ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ  ಜಿಲ್ಲಾಡಳಿತದ ವತಿಯಿಂದ ಜರುಗಿದ  ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲಕ್ಕೆ ಅಪಾರ ಸಂದೇಶ ನೀಡಿದ್ದಾರೆ.

ಕನಕದಾಸರ 537ನೇ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲಕ್ಕೆ ಅಪಾರ ಸಂದೇಶ ನೀಡಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಜರುಗಿದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನಕದಾಸರು ಎಲ್ಲಾ ಸಮಾಜದ ಸಮಾನತೆ ಮತ್ತು ಏಕತೆಗಾಗಿ ಶ್ರಮಿಸಿ, ತಮ್ಮ ಕೀರ್ತನೆಗಳ ಮೂಲಕ ಅಂದಿನ ಸಮಾಜದ ಅಂಕುಡೊಂಕು ತಿದ್ದಿದ್ದಾರೆ. ಬಸವಣ್ಣ, ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸರಂತಹ ಅನೇಕ ಮಹನೀಯರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿರುವುದರಿಂದ ಅವರ ಜಯಂತಿ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲಾ ಸಮಾಜದವರೂ ಪಾಲ್ಗೊಂಡಾಗ ಮಾತ್ರ ಈ ಮಹನೀಯರ ಜಯಂತಿಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.ನಗರದ ಕನಕದಾಸ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಕನಕದಾಸರ ಪುತ್ಥಳಿಯ ಉದ್ಘಾಟನೆ ಹಾಗೂ ಕನಕ ಭವನದ ಅಡಿಗಲ್ಲು ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ನೆರವೇರಿಸಬೇಕೆಂಬ ಸಮಾಜದವರ ಕೋರಿಕೆಯಂತೆ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಿದ್ದೇವೆ. ಇದರ ಜೊತೆಗೆ ಕೊಪ್ಪಳದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಏತ ನೀರಾವರಿ ಯೋಜನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.ಶಿಕ್ಷಕಿ ಅರುಣಾ ನರೇಂದ್ರ ಪಾಟೀಲ್ ಭಕ್ತ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ, ಸಮಾನತೆ, ಸಮಬಾಳ್ವೆಯ ದಾರಿಯನ್ನು ತೋರಿದ ಮಹಾನ ದಾಸರು ಕನಕದಾಸರಾಗಿದ್ದಾರೆ. ಲೋಕದ ಅಂಕುಡೊಂಕನ್ನು ತಿದ್ದಲು ತಮಗಿರುವ ಭಾಗ್ಯವನ್ನೆ ತೊರೆದಿರುವ ಖ್ಯಾತಿ ಅವರದ್ದಾಗಿದೆ. ದಾಸ ಪರಂಪರೆಯ ಹೊನ್ನಸಿರಿಯಾಗಿರುವ ಕನಕರು ದಾರ್ಶನಿಕ ಲೋಕದ ಧ್ರುವತಾರೆಯಾಗಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಅಂದಿನ ಹರಿದಾಸ ಪರಂಪರೆಯಲ್ಲಿ ಅವರು ಉನ್ನತ ಹಾಗೂ ಗೌರವದ ಸ್ಥಾನ ಪಡೆದುಕೊಂಡಿದ್ದರು. ಕೀರ್ತನೆಗಳನ್ನಷ್ಟೆ ಅಲ್ಲದೇ ಹಲವಾರು ಕಾವ್ಯಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯಕ್ಕೂ ಅವರು ಕೊಡುಗೆ ನೀಡಿದ್ದಾರೆ ಎಂದರು.ಇದೇ ಸಂದರ್ಭ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ ಪಡೆದವರು ಮತ್ತು ನೂತನವಾಗಿ ಪಿಎಸ್ಐಗಳಾಗಿ ಆಯ್ಕೆಯಾದ ಸಮಾಜದ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ನಗರಸಭೆ ಸದಸ್ಯರಾದ ಉಮಾ ಪಾಟೀಲ್, ಅಕ್ಬರಪಾಶಾ ಪಲ್ಟನ್ ಹಾಗೂ ಅಜೀಮುದ್ದಿನ್ ಅತ್ತಾರ, ಸಮಾಜದ ಮುಖಂಡರಾದ ಕೆ. ಬಸವರಾಜ ಹಿಟ್ನಾಳ, ಜುಮ್ಮಣ್ಣ ನಂದಾಪುರ, ಭರಮಪ್ಪ ನಗರ, ಜಿಡಿಯಪ್ಪ ಬಂಗಾಳಿ, ಡಾ. ಚಂದ್ರಪ್ಪ, ಗುಡದಪ್ಪ ಬಾನಪ್ಪನವರ, ಹನುಮಂತಪ್ಪ ಕೌದಿ, ದ್ಯಾಮಣ್ಣ ಚಿಲವಾಡಗಿ, ಬೀರಪ್ಪ ಅಂಡಗಿ, ಹನುಮೇಶ ಮುರಡಿ, ಅಮರೇಶ ಉಪಲಾಪುರ ಸೇರಿದಂತೆ ಸಮಾಜದ ಇತರೆ ಹಲವಾರು ಜನರು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇತರರಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ