ಕನಕದಾಸರ ವೈಚಾರಿಕ ಹೋರಾಟ ಮಾದರಿ: ಬಸವರಾಜ ದೇವರು

KannadaprabhaNewsNetwork |  
Published : Nov 21, 2025, 02:15 AM IST
ನರೇಗಲ್ಲ ಸಮೀಪದ ಕಳಕಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ನಿಸ್ವಾರ್ಥ ಸೆವೆಗಳ ಮುಖಾಂತರ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಕನಕದಾಸರ ವಿಚಾರಧಾರೆಯನ್ನು ಹಂಚಿ ಸಮಾಜವನ್ನು ವ್ಯಸನಮುಕ್ತಗೊಳಿಸಬೇಕು.

ನರೇಗಲ್ಲ: ಯುವ ಸಮುದಾಯ ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವದು ಅಗತ್ಯವಾಗಿದೆ. ಮೂಢನಂಬಿಕೆಗಳನ್ನು ಹೋಗಲಾಡಿಸಲು ಮಾಡಿದ ವೈಚಾರಿಕ ಹೋರಾಟ ಮಾದರಿಯಾಗಿದೆ ಎಂದು ಧಾರವಾಡ ತಾಲೂಕಿನ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ತಿಳಿಸಿದರು.ಸಮೀಪದ ಕಳಕಾಪುರ ಗ್ರಾಮದಲ್ಲಿ ನಡೆದ 538ನೇ ಕನಕದಾಸರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಗ್ರಾಮದಲ್ಲಿ ಕನಕ ಭವನ ನಿರ್ಮಿಸಿ ನಿತ್ಯ ಕನಕದಾಸರ ಕೀರ್ತನೆ ಹಾಗೂ ಸಾಹಿತ್ಯ ಚಿಂತನೆ ಮಾಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಿಸ್ವಾರ್ಥ ಸೆವೆಗಳ ಮುಖಾಂತರ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಕನಕದಾಸರ ವಿಚಾರಧಾರೆಯನ್ನು ಹಂಚಿ ಸಮಾಜವನ್ನು ವ್ಯಸನಮುಕ್ತಗೊಳಿಸಬೇಕು ಎಂದರು.

ಧಾರವಾಡದ ವಿದ್ಯಾರಣ್ಯ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಬಸವರಾಜ ಪಾಟೀಲ ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯ ವಿಷಯದ ಕುರಿತು ಉಪನ್ಯಾಸ ನೀಡಿ, ಕನಕದಾಸರ ತತ್ವಾದರ್ಶಗಳು ಸಮಾಜಕ್ಕೆ ದೀವಿಗೆಯಾಗಿವೆ. ತಾರತಮ್ಯ ಸರಿಪಡಿಸಿ ಸಾಮರಸ್ಯ ತರುವ ಅವರ ವಿಚಾರಗಳು ಬೆಲೆಬಾಳುವ ಮೌಲ್ಯಗಳಾಗಿವೆ. ಕನಕದಾಸರ ಕೀರ್ತನೆಗಳು, ಕಾವ್ಯಗಳು ಮತ್ತು ಮುಂಡಿಗೆಗಳಲ್ಲಿ ಜ್ಞಾನರಾಶಿ ಇದೆ. ಅವುಗಳ ಸವಿರುಚಿ ಯುವ ಪೀಳಿಗೆಗೆ ಉಣಬಡಿಸಬೇಕಾಗಿದೆ. ಅವರ ಸಾಹಿತ್ಯ ಜ್ಞಾನ ಹಂಚುವುದರಿಂದ ಕನಕದಾಸರ ಜಯಂತಿ ಸಾರ್ಥಕ ಎಂದರು.

ಗಜೇಂದ್ರಗಡ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾ. ಆದಬಸವಂತಪ್ಪ ಹೊಸಹಳ್ಳಿ ಮಾತನಾಡಿ, ಹಾಲುಮತ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಮತ್ತು ಡೊಳ್ಳು ಕುಣಿತದ ಇತಿಹಾಸದ ಬಗ್ಗೆ ವಿವರಣೆ ನೀಡಿದರು.

ಈ ವೇಳೆ ರೋಣ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ ಈಶ್ವರ ಕುರಿ, ಸಂಕನೂರಿನ ಧರ್ಮರಮಠದ ಅಭಿಮನ್ಯಪ್ಪಜ್ಜನವರು, ಹಿರೇನಸಿಬಿಯ ಧರ್ಮಾಧಿಕಾರಿ ಬಸಯ್ಯಜ್ಜನವರು, ಇಟಗಿಯ ಧರ್ಮರ ಮಠದ ನಾಗಪ್ಪಜ್ಜ ಧರ್ಮರ, ಶಿಕ್ಷಕ ಕೆ.ಎಸ್. ಬೆನಕನವಾರಿ, ಬನ್ನೆಪ್ಪ ಕಟ್ಟಿಮನಿ, ಯಲ್ಲಪ್ಪ ಕುರಿ, ಕಳಕನಗೌಡ ಗೌಡ್ರ, ಕಳಕಪ್ಪ ರಾಜೂರ, ಈರಪ್ಪ ಮಾಗಿ, ಅಶೋಕ ಶಿರಹಟ್ಟಿ, ಸಿದ್ರಾಮ ಕಟ್ಟಿಮನಿ, ಮುನಿಯಪ್ಪ ಮಾಗಿ, ಶರಣಪ್ಪ ಕಳಕಾಪೂರ ಇದ್ದರು ಹೊನಕೇರಪ್ಪ ಕಟ್ಟಿಮನಿ ನಿರೂಪಿಸಿದರು. ಅಂದಪ್ಪ ಶಿರಹಟ್ಟಿ ಸ್ವಾಗತಿಸಿದರು. ಬಸವರಾಜ ಜಿಗಳೂರ ನಿರೂಪಿಸಿದರು. ಬಸವರಾಜ ಶಿರಹಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!