ಸುಗಮ ಸಂಚಾರಕ್ಕೆ ಆಗ್ರಹಿಸಿ ಮನವಿ

KannadaprabhaNewsNetwork |  
Published : Nov 21, 2025, 02:15 AM IST
20ಕೆಪಿಎಲ್22 ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಸಂಘಟೆಯಿಂದ ಎಸ್ಪಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಸ್ತೆಗಳಲ್ಲಿ ನಡೆದಾಡುವುದರಿಂದ ಅಪಘಾತಗಳು ಜರಗುತ್ತಿವೆ. ಆದ್ದರಿಂದ ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭಾ ಪೌರಾಯುಕ್ತರಿಗೆ ಮನವಿ

ಕೊಪ್ಪಳ: ಕೊಪ್ಪಳ ನಗರದಲ್ಲಿ ಸುಗಮ ಸಂಚಾರ ಎನ್ನುವುದು ಮರೀಚಿಕೆಯಾಗಿದೆ. ಬೈಕ್, ಕಾರು, ಆಟೋ ಮುಂತಾದ ವಾಹನಗಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಬಿಡುತ್ತಿದ್ದು, ಇದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಆದ್ದರಿಂಗ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ನವನಿರ್ಮಾಣ ಸೇನೆ ಸಂಘಟನೆ ಎಸ್ಪಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಹೊಸಪೇಟೆಯ ಕಡೆಗೆ ಹೋಗುವ ಬಸ್‌ಗಳು ಸಿಗ್ನಲ್‌ನಲ್ಲಿಯೇ ನಿಲ್ಲುವುದರಿಂದ ಹಿಂದೆ ಬರುವ ವಾಹನ ಸವಾರರರಿಗೆ ಬಹಳ ತೊಂದರೆ ಉಂಟಾಗುತ್ತಿದ್ದು, ಬಸ್‌ ನಿಲ್ಲುವ ವ್ಯವಸ್ಥೆ ಬದಲಾವಣೆ ಮಾಡಬೇಕು. ಅದೇ ರೀತಿಯಾಗಿ ಹೊಸಪೇಟೆ ಕಡೆಯಿಂದ ಕೊಪ್ಪಳ ನಗರಕ್ಕೆ ಬರುವ ಬಸ್‌ಗಳು ಬಸವೇಶ್ವರ ವೃತ್ತದಲ್ಲಿ ಅಲ್ಲಿಯೂ ಕೂಡಾ ಸಿಗ್ನಲ್‌ನಲ್ಲಿಯೇ ನಿಲ್ಲಿಸುವುದರಿಂದ ಹಿಂದೆ ಬರುವ ವಾಹನ ಸವಾರರರಿಗೆ ತೊಂದರೆಯಾಗುತ್ತದೆ.

ರಸ್ತೆಗಳಲ್ಲಿ ನಡೆದಾಡುವುದರಿಂದ ಅಪಘಾತಗಳು ಜರಗುತ್ತಿವೆ. ಆದ್ದರಿಂದ ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದು. ನಗರದಲ್ಲಿ ಇರುವ ಎಲ್ಲ ಮಾರುಕಟ್ಟೆಗಳ ಮುಂದೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಿಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದೆಲ್ಲವನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ಜಿ.ಎಸ್.ಗೋನಾಳ, ತಾಲೂಕಾಧ್ಯಕ್ಷ ಮಹೇಶ ಅಲ್ಲಾನಗರ, ಮರಿಯಪ್ಪ ಮಂಗಳೂರು, ಆನಂದ ಮಡಿವಾಳರ, ರಾಜಾ ಹುಸೇನ್, ಶಿವರಾಜ ಛಟ್ಟಿ,ಲಿಂಗರಾಜ ಕವಲೂರು, ಶಕೀಲ್ ಬ್ಯಾಗವಾಟ್‌, ನಾಗರಾಜ ನೀಲಗಿರಿ, ರಫೀ ಲೋಹಾರ, ಬಸವರೆಡ್ಡಿ ಮಾದಾಪುರ, ವಿನಾಯಕ ಪಾಸ್ತೆ, ಮಾರುತಿ ಕುಟಗನಹಳ್ಳಿ, ಪ್ರವೀಣಗೌಡ, ಕಿರಣ್ ಜೋಗಿ, ಮಂಜುನಾಥ, ಗವಿ ಬಹದ್ದೂರುಬಂಡಿ, ಗವಿಸಿದ್ದಪ್ಪ ನಾಯಕ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!