ಕನಕರು ಸಾಮಾಜಿಕ ನ್ಯಾಯ, ಆತ್ಮಗೌರವದ ಪ್ರತಿರೂಪ

KannadaprabhaNewsNetwork |  
Published : Nov 29, 2026, 02:30 AM IST
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಕನಕದಾಸರ ಜಯಂತಿ ಆಚರಣೆ ನಡೆಯಿತು.  | Kannada Prabha

ಸಾರಾಂಶ

ಯುವ ಜನಾಂಗಕ್ಕೆ ಕನಕದಾಸರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ. ಅವರು ಕೇವಲ ಭಕ್ತ ಕವಿಗಳಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವದ ಪ್ರತಿರೂಪ.

ಧಾರವಾಡ:

ಸಾಮಾನ್ಯ ಜನರಲ್ಲೂ ಭಕ್ತಿ, ಭಾವ ಜಾಗೃತಗೊಳಿಸಿದ ಮಹಾನ್ ಚೇತನ ಕನಕದಾಸರ 359ನೇ ಜಯಂತಿಯನ್ನು ಶುಕ್ರವಾರ ನಗರದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಾಂತ ಕಾಲೇಜು:

ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜಿನಲ್ಲಿ ಕನಕದಾಸರ ಜಯಂತಿಯನ್ನು ವಿದ್ಯಾರ್ಥಿ ಒಕ್ಕೂಟ ಮತ್ತು ಎನ್ನೆಸ್ಸೆಸ್‌ ಘಟಕದ ಸಹಯೋಗದಲ್ಲಿ ಆಚರಿಸಲಾಯಿತು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮೀ ಯಂಡಿಗೇರಿ ಮಾತನಾಡಿ, "ಯುವ ಜನಾಂಗಕ್ಕೆ ಕನಕದಾಸರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ. ಅವರು ಕೇವಲ ಭಕ್ತ ಕವಿಗಳಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವದ ಪ್ರತಿರೂಪ, " ಎಂದರು. ಈ ಸಂದರ್ಭದಲ್ಲಿ ಪ್ರೊ. ಕೆ.ಎಸ್. ಮೇಲಮಾಳಗಿ, ಡಾ. ಲತಾ ಶೆಟ್ಟೆಪ್ಪನವರ ಉಪಸ್ಥಿತರಿದ್ದರು.

ಅಂಜುಮನ್‌ ಕಾಲೇಜು:

ಅಂಜುಮನ್ ಪದವಿ ಕಾಲೇಜಿನಲ್ಲಿ ನಡೆದ ಕನಕ ಜಯಂತಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾಗರಾಜ ಕನಕನೆ, ಪ್ರಾಚಾರ್ಯ ಡಾ. ಎನ್.ಬಿ. ನಾಲತವಾಡ ಹಾಗೂ ಇತರರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ತೌಫಿಕ್ ಮಿರಜಾ, ಪ್ರೊ. ಇಸ್ಮಾಯಿಲ್ ಕೋಟೆಕಲ್, ಪ್ರೊ. ಸಂತೋಷ ಹಾಜರಿದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘ:

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಭಕ್ತ ಕನಕದಾಸರ ಜನ್ಮದಿನಾಚರಣೆಯಲ್ಲಿ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, "ಭಕ್ತ ಕನಕದಾಸರ ಸಾಹಿತ್ಯದಲ್ಲಿ ಭಾರತದ ಸಂವಿಧಾನದ ಮೂಲ ಆಶಯಗಳು ಅಡಕವಾಗಿವೆ. ಅವರು ಭಕ್ತಿಯ ಮೂಲಕ ಸಾಮಾಜಿಕ ಸಮಾನತೆಯ ಬೆಳಕನ್ನು ಹರಡಿದರು, " ಎಂದರು. ವೀರಣ್ಣ ಒಡ್ಡೀನ ಮಾತನಾಡಿ, "ಕನಕದಾಸರು ಭಕ್ತಿಪಂಥದ ಪ್ರಮುಖ ಹರಿದಾಸರಲ್ಲೊಬ್ಬರು. ತಮ್ಮ ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ವ್ಯಕ್ತಿ, " ಎಂದು ಸ್ಮರಿಸಿದರು. ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಶ್ರೀಶೈಲಗೌಡ ಕಮತರ ಹಾಗೂ ಎಸ್.ಎಂ. ರಾಚಯ್ಯನವರ ಇದ್ದರು.

ವನಿತಾ ಕಾಲೇಜು:

ವನಿತಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಆಶ್ರಯದಲ್ಲಿ ದಾಸಶ್ರೇಷ್ಠ ಹರಿಭಕ್ತ ಕನಕದಾಸರ ಜಯಂತಿ ನಡೆಯಿತು. ಪ್ರಾಚಾರ್ಯ ಆರ್‌.ಬಿ. ದೊಡಮನಿ, ವಾಗೇಶ್ ಚವಡಿ, ಉಪನ್ಯಾಸಕರಾದ ಸಂತೋಷ್ ಕಲಕೇರಿ, ದೀಪಾ ಪಾಟೀಲ್, ಪದ್ಮಾವತಿ ದಿಬ್ಬದಮನಿ, ಭಾಗ್ಯಶ್ರೀ ಕುಂಟೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನ್‌ಲೈನ್‌ ಗೇಮ್‌ ವಂಚನೆ: 495 ಯುಆರ್‌ಎಲ್‌ಗಳು ಪತ್ತೆ
ಮತದಾನ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಶಕ್ತಿ: ಉಮೇಶ ಮೇಟಿ