ವೈಷಮ್ಯ ತಡೆಗೆ ಕನಕರ ತತ್ವಾದರ್ಶ ಅಗತ್ಯ

KannadaprabhaNewsNetwork |  
Published : Nov 28, 2026, 03:00 AM IST
ಪೊಟೋ ನ.27ಎಂಡಿಎಲ್ 2ಎ, 2ಬಿ, 2ಸಿ, 2ಡಿ. ಮುಧೋಳದಲ್ಲಿ ಭಕ್ತ ಕನಕ ದಾಸರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಇಂದಿನ ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಕನಕದಾಸರ ತತ್ವಾದರ್ಶಗಳು ಅಗತ್ಯವಾಗಿವೆ. ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಕನಕದಾಸರ ಜಯಂತಿಯನ್ನು ಸರ್ಕಾರ ಮತ್ತು ಕುರುಬರ ಸಮಾಜದ ಸಂಯುಕ್ತಾಶ್ರಯದಲ್ಲಿ ಆಚರಿಸುವುದರ ಮೂಲಕ ಅವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ ಎಂದು ಶಾಸಕ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಇಂದಿನ ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಕನಕದಾಸರ ತತ್ವಾದರ್ಶಗಳು ಅಗತ್ಯವಾಗಿವೆ. ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಕನಕದಾಸರ ಜಯಂತಿಯನ್ನು ಸರ್ಕಾರ ಮತ್ತು ಕುರುಬರ ಸಮಾಜದ ಸಂಯುಕ್ತಾಶ್ರಯದಲ್ಲಿ ಆಚರಿಸುವುದರ ಮೂಲಕ ಅವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ ಎಂದು ಶಾಸಕ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ತಾಲೂಕಾ ಆಡಳಿತ, ತಾಲೂಕಾ ಪಂಚಾಯತಿ, ನಗರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮುಧೋಳ ತಾಲೂಕು ಕುರುಬರ ಸಮಾಜದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಭವನಗಳ ಸಂಕೀರ್ಣದಲ್ಲಿ ನಡೆದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 539ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಜಾತಿ ವ್ಯವಸ್ಥೆಯನ್ನು ಹೊಡದೊಡಿಸಲು ಕನಕದಾಸರು ಪ್ರಾಮಾಣಿಕ ಪ್ರಯತ್ನ ಮಾಡಿದರು. ಮುಧೋಳದಲ್ಲಿ ಕನಕ ಭವನ ನಿರ್ಮಾಣಕ್ಕೆ 15 ಗುಂಟೆ ನಿವೇಶನ ನೀಡುವುದಲ್ಲದೆ ಒಂದು ವರ್ಷದೊಳಗಾಗಿ ಕನಕ ಭವನವನ್ನು ನಿರ್ಮಿಸಿಕೊಡುವುದಾಗಿ ಶಾಸಕ ಆರ್.ಬಿ.ತಿಮ್ಮಪೂರ ಘೋಷಣೆ ಮಾಡಿದರು.ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಯಮನಪ್ಪ ಹೊರಟ್ಟಿ ಮಾತನಾಡಿ, ಕುರುಬರ ಸಮಾಜಕ್ಕೆ ಕನಕ ಭವನ ನಿರ್ಮಾಣಕ್ಕೆ ನಿವೇಶನ ನೀಡಿ ಕಟ್ಟಡ ನಿರ್ಮಿಸಿಕೊಡುತ್ತಿರುವುದಕ್ಕೆ ಮುಂದಾಗಿರುವ ಶಾಸಕ ಆರ್.ಬಿ.ತಿಮ್ಮಾಪೂರ ಅವರಿಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದರು.ಡಾ.ಎಂ.ಎಚ್.ಜೋಗಿ ಉಪನ್ಯಾಸ ನೀಡಿದರು, ರೂಗಿ ಅಡವಿಸಿದ್ಧೇಶ್ವರ ಮಠದ ನಿತ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ್‌ ಡಾ.ಚಿಕ್ಕಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಾವಿತ್ರಿ ಮರಲಿಂಗಣ್ಣವರ, ಪಿಎಸ್ಐ ಶಿವಾನಂದ ಕಾರಜೋಳ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ.ಪಾಟೀಲ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮಣ್ಣವರ, ಉಪಾಧ್ಯಕ್ಷ ಭೀಮಪ್ಪ ಮೆಟಗುಡ್ಡ, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಮಹಾಂತೇಶ ಮಾಚಕನೂರ, ರಾಜಶೇಖರ ಮುತ್ತಿನಮಠ, ಉಪ ತಹಸೀಲ್ದಾರ ಇಂಡಿಕಾರ ಅತಿಥಿ ಸ್ಥಾನವಹಿಸಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಗಣ್ಯರನ್ನು ಮತ್ತು ಸಮಾಜದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ವಿವಿಧ ವಾದ್ಯಮೇಳದೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಜಡಗಣ್ಣ-ಬಾಲಣ್ಣ ವೃತ್ತ, ಗಾಂಧಿ ವೃತ್ತ, ಶಿವಾಜಿ ವೃತ್ತ, ಗಡದನ್ನವರ ವೃತ್ತ, ರನ್ನ ಸರ್ಕಲ್ ಮೂಲಕ ವೇದಿಕೆಗೆ ಕರೆತರಲಾಯಿತು.ಸಮಾಜದ ಮುಖಂಡರಾದ ಮಲ್ಲಪ್ಪ ಮಂಟೂರ, ದುಂಡಪ್ಪ ಇಟಕನ್ನವರ, ಅಶೋಕ ಕುಳಲಿ, ಕಾಶಿನಾಥ ಹುಡೇದ, ಸದಾಶಿವ ಇಟಕನ್ನವರ, ಪರಮಾನಂದ ಕುಟ್ರಟ್ಟಿ, ಮಹಾದೇವ ಹೊಸಟ್ಟಿ, ಭೀರಪ್ಪ ಹುದ್ದಾರ, ರಂಗಪ್ಪ ಪಾಟೀಲ, ಮಹೇಶ ಮಳಲಿ, ಆನಂದ ಗುರಿಜೆಟ್ಟಿ, ಹೊಳಬಸು ಕಳಲಿ, ನಾಗರಾಜ ಹೊಸಮನಿ, ಡಾ.ಮಹಾಲಿಂಗಪ್ಪ ಜೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಡಿತರ ಅಕ್ರಮ ತಡೆಯಲು ಡಿಜಿಟಲ್‌ ಕರೆನ್ಸಿ ಯೋಜನೆ?
ಸಹಿಗಾಗಿ ಬೇಡಿಕೆ ಹೊಸ ಪರಿಪಾಠವಲ್ಲ: ನಾಗಲಕ್ಷ್ಮಿ