ಪ್ರತಿಭೆಗಳಿಗೆ ಕನಕೋತ್ಸವ ಉತ್ತಮ ವೇದಿಕೆ: ಡಿ.ಕೆ. ಸುರೇಶ್

KannadaprabhaNewsNetwork |  
Published : Nov 23, 2025, 01:45 AM IST
ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಬಗಿನಗೆರೆ ಪ್ರೌಢಶಾಲಾ ಆವರಣದಲ್ಲಿ ಕೆಂಪೇಗೌಡ ಉತ್ಸವದ ಅಂಗವಾಗಿ ಹೋಬಳಿ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ  ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಉಚಿತವಾಗಿಡಿ.ಕೆ. ಸುರೇಶ್ ಬ್ಯಾಟ್ ವಿಕೆಟ್ ವಿತರಿಸಿದರು ಶಾಸಕ ಬಾಲಕೃಷ್ಣ ಜತೆ ಇದ್ದರು. | Kannada Prabha

ಸಾರಾಂಶ

ಹೋಬಳಿಯ ಹಲವು ಯುವಕ, ಯುವತಿಯರು ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು, ಭಾನುವಾರ ಕೂಡ ಪಂದ್ಯಾವಳಿ ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮಾಗಡಿ

ಕನಕೋತ್ಸವ ಕಾರ್ಯಕ್ರಮ ಕಳೆದ 14 ವರ್ಷಗಳಿಂದಲೂ ನಡೆಯುತ್ತಿದ್ದು, ಈ ಬಾರಿ ಜಿಲ್ಲೆಯಲ್ಲೂ ಕೂಡ ನಮ್ಮ ಶಾಸಕರು ಇರುವುದರಿಂದ ಹೋಬಳಿ ಮಟ್ಟದಿಂದ ಪ್ರತಿಭಾವಂತ ಯುವಕರನ್ನು ಗುರುತಿಸುವ ಕೆಲಸವನ್ನು ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡುತ್ತಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ. ಕೆ.ಸುರೇಶ್ ಹೇಳಿದರು.

ತಾಲೂಕಿನ ಬಗಿನಗೆರೆ ಬಿಜಿಎಸ್ ಪ್ರೌಢಶಾಲಾ ಆವರಣದಲ್ಲಿ ಮಾಗಡಿ ಕೆಂಪೇಗೌಡ ಉತ್ಸವ- 2025 ಅಂಗವಾಗಿ ತಿಪ್ಪಸಂದ್ರ ಹೋಬಳಿ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಹೊರತಾಗಿ ಕನಕೋತ್ಸವ ಕಾರ್ಯಕ್ರಮ ಮಾಡುತ್ತಿದ್ದು, ಇಲ್ಲಿ ಗೆಲುವು- ಸೋಲು ಮುಖ್ಯವಲ್ಲ. ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು ಇದರ ಸದುಪಯೋಗವನ್ನು ಜಿಲ್ಲೆಯ ಯುವಕರು ಬಳಸಿಕೊಳ್ಳಬೇಕು, ಇದಕ್ಕಾಗಿ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಸಹಕಾರ ನೀಡಿದ್ದು ಎಲ್ಲರ ಒಮ್ಮತದಿಂದ ಈ ಕಾರ್ಯಕ್ರಮ ಮಾಡಲು ತೀರ್ಮಾಸಲಾಗಿದೆ ಎಂದರು.

ಒಂದು ತಿಂಗಳ ಕಾಲ ನಿರಂತರವಾಗಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೆಂಪೇಗೌಡ ಉತ್ಸವದ ಕೊನೆಯ ದಿನ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು, ತಿರುಪತಿಯಿಂದಲೇ ಲಾಡು ತರಿಸಿ ಪ್ರತಿ ಮನೆಗೂ ಕೊಡುವ ಕೆಲಸ ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಕ್ಕೂ ದೇವರ ಆಶೀರ್ವಾದ ಬೇಕಾಗಿದ್ದು, ಮಾಗಡಿಯ ಪ್ರತಿ ಹಳ್ಳಿಯ ಉತ್ಸವ ಮೂರ್ತಿಗಳು ಒಂದೆಡೆ ಸೇರುತ್ತವೆ. ಎಲ್ಲರೂ ಸಹಕಾರ ನೀಡಿ ಕನಕೋತ್ಸವ ಯಶಸ್ವಿಯಾಗಲು ಕೈಜೋಡಿಸಬೇಕು ಕರೆ ನೀಡಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕನಕೋತ್ಸವದ ಅಂಗವಾಗಿ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವವನ್ನು ಒಂದು ತಿಂಗಳ ಕಾಲ ಆಯೋಜಿಸಲಾಗಿದ್ದು, ಕ್ರೀಡೆಗಳಲ್ಲಿ ಹೋಬಳಿ ಮಟ್ಟದಲ್ಲಿ ಗೆದ್ದ ತಂಡಗಳು ಮಾಗಡಿಯಲ್ಲಿ ಡಿ‌. 26 ಮತ್ತು 27 ರಂದು ಫೈನಲ್ ಪಂದ್ಯಾವಳಿ ಆಡಲಿವೆ. ಕೊನೆಯ ದಿನ ಡಿ. 27ರಂದು ಮಾಗಡಿ ಕೋಟೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಹೇಳಿದರು.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರವರ ಸಹಕಾರದಿಂದ ₹ 103 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಕೋಟೆ ಅಭಿವೃದ್ಧಿ ಮಾಡಲಾಗುತ್ತಿದೆ, ₹ 250 ಕೋಟಿ ಅನುದಾನವನ್ನು ಎತ್ತಿನಹೊಳೆ ಯೋಜನೆಗೆ ಕೊಟ್ಟಿದ್ದು, ಇದರ ಮೂಲಕ ತಿಪ್ಪಸಂದ್ರ ಮತ್ತು ಕುದೂರು ಹೋಬಳಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ. ಸತ್ತೇಗಾಲದಿಂದ ಮಾಗಡಿ, ಮಾಡಬಾಳ್ ಹಾಗೂ ಬಿಡದಿ ಹೋಬಳಿಗಳಿಗೆ ಕಾವೇರಿ ನೀರನ್ನು ಹರಿಸುತ್ತೇವೆ ಹಾಗೂ ಹೇಮಾವತಿ ಮೂಲಕ ತಾಲೂಕಿನ 63 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು.

ತಿಪ್ಪಸಂದ್ರ ಹೋಬಳಿಯಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಕುಮಾರ್ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.

ಹೋಬಳಿಯ ಹಲವು ಯುವಕ, ಯುವತಿಯರು ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು, ಭಾನುವಾರ ಕೂಡ ಪಂದ್ಯಾವಳಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಎಚ್. ಎನ್.ಅಶೋಕ್, ಮುಖಂಡರಾದ ಬಿ.ಎಸ್. ಕುಮಾರ್, ಎಂ.ಕೆ.ಧನಂಜಯ್ಯ, ನರಸಿಂಹಮೂರ್ತಿ, ಕೆಂಚೇಗೌಡ, ಶಿವಪ್ರಸಾದ್, ಜೆ.ಪಿ. ಚಂದ್ರೇಗೌಡ, ಕನಕಪುರ ದಿಲೀಪ್, ವಿಶ್ವನಾಥ್, ಮಣಿಗಾನಹಳ್ಳಿ ಸುರೇಶ್, ಗಂಗಾಧರ್, ರೂಪೇಶ್, ಶೈಲಜಾ, ವೆಂಕಟೇಶ್, ಮಂಜೇಶ್, ಕಲ್ಕೆರೆ ಶಿವಣ್ಣ, ರಾಜು, ಜಯಮ್ಮ, ನಾಗಮ್ಮ, ಜಯರಾಂ, ರವೀಶ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್