ಕಾಂಗರೋ ಆಸ್ಪತ್ರೆ ಸಮಾಜ ಸೇವೆ ಪ್ರಶಂಸನೀಯ: ಶೇಷಾದ್ರಿ

KannadaprabhaNewsNetwork |  
Published : May 29, 2025, 01:12 AM IST
28ಕೆಆರ್ ಎಂಎನ್ 5.ಜೆಪಿಜಿರಾಮನರದ ಕಾಂಗರೊ ಕೇರ್ ಆಸ್ಪತ್ರೆಯಲ್ಲಿ ಸಂಚಾರಿ ಠಾಣೆ ಪೊಲೀಸರಿಗೆ  ಆರೋಗ್ಯ ಸುರಕ್ಷಾ ಕವಚಗಳನ್ನು ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ರಾಮನಗರ: ಲಾಭ ನಷ್ಟ ಲೆಕ್ಕ ಹಾಕದೆ ಹುಟ್ಟಿದೂರಿಗೆ ಆರೋಗ್ಯ ಸೇವೆ ನೀಡುವ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯಡಿ ಕಾಂಗರೋ ಆಸ್ಪತ್ರೆ ಉತ್ತಮ‌ ಕಾರ್ಯ ಮಾಡುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಶ್ಲಾಘಿಸಿದರು.

ರಾಮನಗರ: ಲಾಭ ನಷ್ಟ ಲೆಕ್ಕ ಹಾಕದೆ ಹುಟ್ಟಿದೂರಿಗೆ ಆರೋಗ್ಯ ಸೇವೆ ನೀಡುವ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯಡಿ ಕಾಂಗರೋ ಆಸ್ಪತ್ರೆ ಉತ್ತಮ‌ ಕಾರ್ಯ ಮಾಡುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಶ್ಲಾಘಿಸಿದರು.

ನಗರದ ಕಾಂಗರೋ ಕೇರ್ ಆಸ್ಪತ್ರೆಯಲ್ಲಿ ಜಿಲ್ಲೆಯ ಸಂಚಾರ ಪೊಲೀಸರಿಗೆ ಆರೋಗ್ಯ ಸುರಕ್ಷತಾ ಕವಚಗಳನ್ನು ವಿತರಿಸಿ ಮಾತನಾಡಿದ ಅವರು, ಪೊಲೀಸರು ಬಿಸಿಲು, ಮಳೆ, ಚಳಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೂ ಆರೋಗ್ಯ ಮತ್ತು ಸುರಕ್ಷತೆ ಬೇಕಾಗುತ್ತದೆ. ಆಸ್ಪತ್ರೆ ವತಿಯಿಂದ ನೀಡುತ್ತಿರುವ ಸೇಫ್ಟಿ ಜಾಕೆಟ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಸಮಾಜದಲ್ಲಿ ಮೊದಲಿನಿಂದಲೂ ಪೊಲೀಸ್ ವ್ಯವಸ್ಥೆಗೆ ಗೌರವ ಇದೆ. ಪೊಲೀಸ್ ಇದ್ದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಇರುತ್ತದೆ. ಪೊಲೀಸ್ ಇಲಾಖೆಗೆ ಜನರು ಹೆಚ್ಚಿನ ಗೌರವ, ಮರ್ಯಾದೆ ಕೊಡುತ್ತಾರೆ ಎಂದರೆ ಖಾಕಿ ಬಟ್ಟೆಗಿರುವ ಶಕ್ತಿಯನ್ನು ತೋರಿಸುತ್ತದೆ. ನಿಮ್ಮಿಂದಲೂ ಸಮಾಜ ಹೆಚ್ಚಿನ ನಿರೀಕ್ಷೆ ಹೊಂದಿರುತ್ತದೆ ಎಂಬುದನ್ನು ಮರೆಯಬಾರದು ಎಂದು ಶೇಷಾದ್ರಿ ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಪ್ರತಿಯೊಬ್ಬರಿಗೂ ಮಕ್ಕಳೇ ಆಸ್ತಿಯಾಗಿದ್ದು, ಅವರಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶೇಖರ್ ಸುಬ್ಬಯ್ಯ ಮಾತನಾಡಿ, ರಾಮನಗರದಲ್ಲಿ ಸುಸಜ್ಜಿತವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಿದ್ದು, ಬಡವರಿಗೆ ರಿಯಾಯಿತಿ ನೀಡಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಆಸ್ಪತ್ರೆಯ ಸಿಎಸ್ಆರ್ ಅನುದಾನದಲ್ಲಿ ಪೊಲೀಸರ ಮೇಲೆ ಕಾಳಜಿ ವಹಿಸಿ ಆರೋಗ್ಯ ಸುರಕ್ಷಾ ಕವಚ ವಿತರಣೆ ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ಎಎಸ್ಪಿ ಸುರೇಶ್ ಮಾತನಾಡಿ, ದೂರದೃಷ್ಟಿತ್ವವನ್ನು ಇಟ್ಟುಕೊಂಡು ಆರೋಗ್ಯ ಸೇವಾ ಮನೋಭಾವದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದು ಸಮಾಜಮುಖಿ ಕಾರ್ಯ ಮಾಡುತ್ತಿ ರುವುದು ಶ್ಲಾಘನೀಯ. ಪೊಲೀಸರ ಸೇವೆ ಎಲ್ಲರಿಗೂ ಬೇಕು. ಆದರೆ, ಅವರ ಸ್ನೇಹ ಮಾತ್ರ ಯಾರಿಗೂ ಬೇಡವಾಗಿದೆ. ನೊಂದವರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವುದು ಪೊಲೀಸರ ಕರ್ತವ್ಯವಾಗಿದೆ.

ಸೇವೆಯೆ ಪೊಲೀಸರ ಆದ್ಯತೆಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಮಳೆ ಬಿಸಿಲಿನಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ಆಸ್ಪತ್ರೆ ವತಿಯಿಂದ ಸೇಫ್ಟಿ ಜಾಕೆಟ್ ವಿತರಣೆ ಮಾಡುತ್ತಿರುವುದಕ್ಕೆ ಪೋಲೀಸ್ ಇಲಾಖೆ ವತಿಯಿಂದ ಕಾಂಗರೋ ಕೇರ್ ಆಸ್ಪತ್ರೆಯ ಮುಖ್ಯಸ್ಥ ರಿಗೆ ಅಭಿನಂದಿಸುವುದಾಗಿ ಹೇಳಿದರು.

ಕಾಂಗರೋ ಕೇರ್ ಆಸ್ಪತ್ರೆ ಮುಖ್ಯಸ್ಥ ಡಾ.ಶೇಖರ್ ಸುಬ್ಬಯ್ಯ ಮಾತನಾಡಿ, ಈ ಭಾಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತೆರೆದಿದ್ದು, 9 ವರ್ಷಗಳಲ್ಲಿ ಇದು ನಾವು ತೆರೆದ ಮೂರನೇ ಆಸ್ಪತ್ರೆಯಾಗಿದೆ. ಆಸ್ಪತ್ರೆಯ ಸಿಎಸ್ ಆರ್ ಅನುದಾನದಲ್ಲಿ ಸಾಮಾಜಿಕ ಹೊಣೆಗಾರಿಕೆಯಡಿ ಬಳಕೆ ಮಾಡಲಾಗುತ್ತಿದ್ದು, ಜಿಲ್ಲೆಯ ಟ್ರಾಪಿಕ್ ಪೊಲೀಸರಿಗೆ ವಾತಾವರಣಕ್ಕೆ ತಕ್ಕಂತೆ ಅನುಕೂಲ ವಾಗುವ ಆರೋಗ್ಯ ಸುರಕ್ಷಾ ಕವಚಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಐಗಳಾದ ಅಲ್ಲಾವುದ್ದೀನ್, ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.

28ಕೆಆರ್ ಎಂಎನ್ 5.ಜೆಪಿಜಿ

ರಾಮನರದ ಕಾಂಗರೊ ಕೇರ್ ಆಸ್ಪತ್ರೆಯಲ್ಲಿ ಸಂಚಾರ ಠಾಣೆ ಪೊಲೀಸರಿಗೆ ಆರೋಗ್ಯ ಸುರಕ್ಷಾ ಕವಚಗಳನ್ನು ವಿತರಣೆ ಮಾಡಲಾಯಿತು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್