ಕನ್ನಿಕಾ ಪರಮೇಶ್ವರಿ ಜಯಂತಿ

KannadaprabhaNewsNetwork |  
Published : May 13, 2025, 01:35 AM ISTUpdated : May 13, 2025, 06:30 AM IST
೦೨ ವಿಜೆಪಿ೧೨ವಿಜಯಪುರ ಪಟ್ಟಣದ ಆರ್ಯವೈಶ್ಯ ಸಂಘ ಹಾಗೂ ಮಹಿಳಾ ಸಂಘಗಳ ಸಹಕಾರದೊಂದಿಗೆ ಇತಿಹಾಸ ಪ್ರಸಿದ್ಧ ಹರಿಹರ ಸಂಗಮ ಕ್ಷೇತ್ರ ಶ್ರೀನಗರೇಶ್ವರ ಸ್ವಾಮಿ ದೇವಾಲಯದಲ್ಲಿ ೨೩ನೇ ವರ್ಷದ ವಾಸವಿ ಜಯಂತಿ ಪೂಜಾ ಕಾರ್ಯಕ್ರಮ. | Kannada Prabha

ಸಾರಾಂಶ

ವಿಜಯಪುರ: ಪಟ್ಟಣದ ಆರ್ಯವೈಶ್ಯ ಸಂಘ ಹಾಗೂ ಮಹಿಳಾ ಸಂಘಗಳ ಸಹಯೋಗದಲ್ಲಿ ಇತಿಹಾಸ ಪ್ರಸಿದ್ಧ ಹರಿಹರ ಸಂಗಮ ಕ್ಷೇತ್ರ ಶ್ರೀನಗರೇಶ್ವರಸ್ವಾಮಿ ದೇವಾಲಯದಲ್ಲಿ 23ನೇ ವಾಸವಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯಪುರ: ಪಟ್ಟಣದ ಆರ್ಯವೈಶ್ಯ ಸಂಘ ಹಾಗೂ ಮಹಿಳಾ ಸಂಘಗಳ ಸಹಯೋಗದಲ್ಲಿ ಇತಿಹಾಸ ಪ್ರಸಿದ್ಧ ಹರಿಹರ ಸಂಗಮ ಕ್ಷೇತ್ರ ಶ್ರೀನಗರೇಶ್ವರಸ್ವಾಮಿ ದೇವಾಲಯದಲ್ಲಿ 23 ನೇ ವಾಸವಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಆರ್ಯ ವೈಶ್ಯ ಮಂಡಳಿ ಅರ್ಚಕ ವೆಂಕಟೇಶ ಗುಪ್ತ ನೇತೃತ್ವದಲ್ಲಿ ದೇವನಹಳ್ಳಿಯಿಂದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ವಿಜಯಪುರಕ್ಕೆ ತಂದು ಇಲ್ಲಿನ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿ, ಬೆಳಗಿನಿಂದ ಗಣಪತಿ ಹೋಮದೊಂದಿಗೆ ಮತ್ತಿತರ ಹೋಮ ಹವನಾದಿಗಳನ್ನು ನಡೆಸಿ ಪೂರ್ಣಾಹುತಿ ನೀಡಿ, ವಾಸವಿ ದೇವಿಯವರಿಗೆ ಆರತಿ ಬೆಳಗಲಾಯಿತು. ಮದುವೆಯಾಗದ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ ಅವರನ್ನು ಪೂಜಿಸಿ ಅರಿಶಿಣ ಕುಂಕುಮ ಕಾಣಿಕೆ ನೀಡಿ ಗೌರವಿಸಲಾಯಿತು.

ಅರ್ಚಕ ವೆಂಕಟೇಶ ಗುಪ್ತಾ ಮಾತನಾಡಿ, ಪೆನುಗೊಂಡಾದ ಕುಸುಮ ಶ್ರೇಷ್ಠಿ ಹಾಗೂ ಕುಸುಮಾಂಬೆ ದಂಪತಿ ಪುತ್ರಿ ವಾಸವಿ ಮಾತೆ ಬಾಲ್ಯದಿಂದಲೇ ತನ್ನನ್ನು ತಾನು ಶಿವನಿಗೆ ಅರ್ಪಿಸಿಕೊಂಡಿದ್ದು, ಬಲವಂತದಿಂದ ವಿವಾಹವಾಗಲು ಬಂದ ದೊರೆ ವಿಷ್ಣುವರ್ಧನ್‌ನಿಂದ ದೂರ ಹೋಗಿ ತಾಯಿ ಕನ್ನಿಕಾ ಪರಮೇಶ್ವರಿ ತನ್ನನ್ನು ತಾನು ಅಗ್ನಿಗೆ ಸಮರ್ಪಿಸಿಕೊಂಡಳೆಂದು ತಿಳಿಸಿದರು.

ಆರ್ಯ ವೈಶ್ಯ ಸಂಘದ ಜಯಂತ ಬಾಬು, ಪ್ರಕಾಶ್, ಅಶೋಕ್, ಅರ್ಜುನ್, ಆರ್ ಬಿ ಶಿವಕುಮಾರ್, ಶ್ರೀನಿವಾಸ್, ಮುನಿಯಪ್ಪ, ಸುನಿಲ್, ನಾಗೇಂದ್ರ, ಆವತಿ ನಾರಾಯಣಶೆಟ್ಟಿ, ಡಾ.ರಾಜೇಶ್ ಹಾಗೂ ಆರ್ಯ ವೈಶ್ಯ ಮಹಿಳಾ ಸಂಘದ ಶ್ರೀವಳ್ಳಿ, ಪ್ರಮೀಳಮ್ಮ, ಪದ್ಮಲತಾ, ಪದ್ಮಕ್ಕ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯಪುರದ ಆರ್ಯವೈಶ್ಯ ಸಂಘ ಹಾಗೂ ಮಹಿಳಾ ಸಂಘಗಳ ಸಹಕಾರದೊಂದಿಗೆ ಇತಿಹಾಸ ಪ್ರಸಿದ್ಧ ಹರಿಹರ ಸಂಗಮ ಕ್ಷೇತ್ರ ಶ್ರೀನಗರೇಶ್ವರ ಸ್ವಾಮಿ ದೇವಾಲಯದಲ್ಲಿ 23 ನೇ ವಾಸವಿ ಜಯಂತಿ ಪೂಜೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!