ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Sep 29, 2025, 01:03 AM IST
28ಕೆಎಂಎನ್ ಡಿ27 | Kannada Prabha

ಸಾರಾಂಶ

ಆಧುನಿಕ ಯುಗದಲ್ಲಿ ಪುಸ್ತಕ ಓದುಗರ ಸಂಖ್ಯೆ ಕುಗ್ಗುತ್ತಿದೆ. ಕೆಲವರು ಆಧುನಿಕ ತಂತ್ರಜ್ಞಾನ ಬಳಸಿ ಓದುವ ಹವ್ಯಾಸಕ್ಕೆ ಕಟ್ಟು ಬಿದ್ದಿದ್ದಾರೆ. ಆಧುನಿಕ ಸಾಧನಗಳಿಂದ ಓದುವುದು ಅಷ್ಟು ಖುಷಿಯನ್ನು ನೀಡುವುದಿಲ್ಲ. ಕವಿಗಳು ಹೊಸ ಹೊಸ ಚಿಂತನೆಯನ್ನು ಬೆಳೆಸಿ ಸಮಾಜಮುಖಿ ಲೇಖನ ನೀಡುತ್ತಾರೆ. ಅದನ್ನು ಕಾರ್ಯರೂಪಕ್ಕೆ ತರಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಶ್ರೀರಂಗವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕಸಾಪದಿಂದ ಆಯೋಜಿಸಿದ್ದ ದಸರಾ ಕವಿ-ಕಾವ್ಯ ಸಂಭ್ರಮ ಪ್ರಧಾನ ಕವಿಗೊಷ್ಠಿಯಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಪುಸ್ತಕ ಓದುಗರ ಸಂಖ್ಯೆ ಕುಗ್ಗುತ್ತಿದೆ. ಕೆಲವರು ಆಧುನಿಕ ತಂತ್ರಜ್ಞಾನ ಬಳಸಿ ಓದುವ ಹವ್ಯಾಸಕ್ಕೆ ಕಟ್ಟು ಬಿದ್ದಿದ್ದಾರೆ. ಆಧುನಿಕ ಸಾಧನಗಳಿಂದ ಓದುವುದು ಅಷ್ಟು ಖುಷಿಯನ್ನು ನೀಡುವುದಿಲ್ಲ. ಕವಿಗಳು ಹೊಸ ಹೊಸ ಚಿಂತನೆಯನ್ನು ಬೆಳೆಸಿ ಸಮಾಜಮುಖಿ ಲೇಖನ ನೀಡುತ್ತಾರೆ. ಅದನ್ನು ಕಾರ್ಯರೂಪಕ್ಕೆ ತರಬೇಕು. ಕವಿಗಳು ಚಿಂತನೆಯಿಂದ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ದಸರಾ ಆಚರಣೆಯಲ್ಲಿ ನವದುರ್ಗೆಯರಿಗೆ ಪೂಜೆ ಸಲ್ಲಿಸುತ್ತೇವೆ. ಹಲವು ಕವಿಗಳು ತಮ್ಮ ಪಾಂಡಿತ್ಯವನ್ನು ಇತರರಿಗೆ ತಿಳಿಸದೆ ಹೋದರೆ ಆ ಪಾಂಡಿತ್ಯದಿಂದ ಯಾವುದೇ ಪ್ರಯೋಜನವಿಲ್ಲ. ಕವಿಗಳು ತಮ್ಮ ಕವಿತೆಗಳ ಮೂಲಕ ಸಮಾಜದ ಡೊಂಕು ತಿದ್ದಬೇಕು, ಕವಿಗೋಷ್ಠಿಗಳಿಂದ ಸಾಹಿತ್ಯದ ನವರಸಗಳನ್ನು ಸವಿಯಬಹುದು, ಕವಿಗೋಷ್ಠಿಗಳು ನಮ್ಮ ಜ್ಞಾನವನ್ನು ವೃದ್ಧಿಸುತ್ತದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಐತಿಹಾಸಿಕ ಪಾರಂಪರಿಕ ದಸರಾವನ್ನು ಕ್ರಿ.ಶ 1610ರಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಆಚರಣೆ ಮಾಡಿದರು. ಕಾಲಾಂತರ ಟಿಪ್ಪುವಿನ ಆಳ್ವಿಕೆಗೆ ಮೈಸೂರು ಒಳಪಟ್ಟಾಗ ಮೈಸೂರಿಗೆ ಸ್ಥಳಾಂತರಗೊಂಡಿತು. 2008ರಲ್ಲಿ ವಿಜಯಲಕ್ಷ್ಮಮ್ಮ ಶಾಸಕರಾಗಿದ್ದಾಗ ಮತ್ತೆ ಇಲ್ಲಿ ದಸರಾ ಪ್ರಾರಂಭಗೊಂಡಿತು ಎಂದರು.

ಜಿಲ್ಲಾ ಕಸಾಪ ಪ್ರಭಾರ ವಿ.ಹರ್ಷ ಮಾತನಾಡಿ, ಶ್ರೀರಂಗಪಟ್ಟಣ ದಸರಾ ನಮ್ಮ ಕಲೆ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ನಂತರ ಹಲವು ಕವಿಗಳು ತಾವು ರಚಿಸಿದ ಕವಿತೆಗಳನ್ನು ವಾಚನ ಮಾಡುವ ಮೂಲಕ ಸಾಹಿತ್ಯ ಆಸಕ್ತರಿಗೆ ಸಂತೃಪ್ತಿ ಪಡಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಕೃಷ್ಣಪ್ಪ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಬಿ ಕುಮಾರ್, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ನಿಮಿಷಾಂಬ ದೇವಾಲಯದ ಅಧ್ಯಕ್ಷ ಎಚ್.ಎನ್ ದಯಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಎಂ ಸುರೇಶ್, ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಸೋಮಶೇಖರ್, ಮಹಾದೇವಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ