ನಿತ್ಯ ಬಳಸಿದರೆ ಮಾತ್ರ ಕನ್ನಡಕ್ಕೆ ಉಳಿಗಾಲ

KannadaprabhaNewsNetwork |  
Published : Nov 02, 2024, 01:36 AM IST
೧ಬಿಎಸ್ವಿ೦೧-ಬಸವನಬಾಗೇವಾಡಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಶಿಕ್ಷಕ ಅಶೋಕ ಹಂಚಲಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡದಿದ್ದರೆ ಅದು ನಶಿಸಿಹೋಗುವದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪಪ್ಪಾ-ಮಮ್ಮಿ ಎಂದು ಕರೆಯದೇ ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಮನೆಯಿಂದಲೇ ಕನ್ನಡ ಭಾಷೆಯ ಬಳಕೆ ಮಾಡಿದರೆ ಖಂಡಿತ ಕನ್ನಡ ಉಳಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ವಹಿಸಿದಂತೆ ಎಂದು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡದಿದ್ದರೆ ಅದು ನಶಿಸಿಹೋಗುವದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪಪ್ಪಾ-ಮಮ್ಮಿ ಎಂದು ಕರೆಯದೇ ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಮನೆಯಿಂದಲೇ ಕನ್ನಡ ಭಾಷೆಯ ಬಳಕೆ ಮಾಡಿದರೆ ಖಂಡಿತ ಕನ್ನಡ ಉಳಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ವಹಿಸಿದಂತೆ ಎಂದು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಹಂಚಲಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಇಂದು ಪ್ರತಿಯೊಬ್ಬ ಮಗು ಪಪ್ಪಾ-ಮಮ್ಮಿ, ಅಂಕಲ್-ಆಂಟಿ ಬಳಕೆ ಹೆಚ್ಚು ಮಾಡುವದನ್ನು ನೋಡುತ್ತಿದ್ದೇವೆ. ಮಕ್ಕಳು ಈ ಆಂಗ್ಲ ಶಬ್ದಗಳ ಬದಲಾಗಿ ಕನ್ನಡದ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಕಾಕಾ-ಚಿಕ್ಕಮ್ಮ, ಅತ್ತೆ, ಅಕ್ಕ-ಅಣ್ಣ, ಮಾಮಾ-ಅತ್ತಿಗೆ ಇಂತಹ ಶಬ್ದಗಳನ್ನು ನಿತ್ಯ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಉಳಿವಿಗೆ ಮುಂದಾಗುವ ಅಗತ್ಯವಿದೆ. ಬದುಕಿನಲ್ಲಿ ಆದಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡಲು ಮುಂದಾಗಬೇಕೆಂದರು. ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜೀವನದಲ್ಲಿ ಕನ್ನಡ ಅಳವಡಿಸಿಕೊಂಡಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ತಾವು ಶಿಕ್ಷಕ ವೃತ್ತಿಯಲ್ಲಿದ್ದಾಗ ಆಂಗ್ಲ ಭಾಷೆ ಪಾಠ ಮಾಡುವ ಸಂದರ್ಭದಲ್ಲಿ ಕನ್ನಡ ಭಾಷಾ ಶಿಕ್ಷಕ ಇಲ್ಲದೇ ಇರುವುದರಿಂದ ತಾವು ಕನ್ನಡ ಪಾಠ ಮಾಡಿದೆ. ಮುಂದೆ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿದ್ದಾಗಿ ತಿಳಿಸಿದರು.ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ರಾಜ್ಯಕ್ಕೆ ವಿವಿಧೆಡೆಗಳಿಂದ ಜನರು ವಲಸೆ ಬಂದಿದ್ದಾರೆ. ಅವರ ಭಾಷೆ ಬೆಳೆಯದಂತೆ ಕನ್ನಡಿಗರು ನೋಡಿಕೊಳ್ಳಬೇಕು. ಕರವೇ ಹೋರಾಟ ಫಲದಿಂದಾಗಿ ಈಗಾಗಲೇ ಕನ್ನಡ ನಾಮಫಲಕ ಶೇ.೬೦ ರಷ್ಟು ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಎಂದರು.ಶಿವಪ್ರಕಾಶ ಶಿವಾಚಾರ್ಯ ಸ್ವಾಮಾಜಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕರವೇ ಮುಖಂಡ ಸುನೀಲ ರಾಠೋಡ ಮಾತನಾಡಿದರು.

ತಾಪಂ ಇಒ ಪ್ರಕಾಶ ದೇಸಾಯಿ, ಬಿಇಒ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಜಯಕರ್ನಾಟಕ ಅಧ್ಯಕ್ಷ ಶರಣು ಹೂಗಾರ, ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ ಇದ್ದರು. ಬಿಇಒ ವಸಂತ ರಾಠೋಡ ಸ್ವಾಗತಿಸಿದರು. ಶಿಕ್ಷಕ ಕೊಟ್ರೇಶ ಹೆಗ್ಡಾಳ, ಬಿ.ವಿ.ಚಕ್ರಮನಿ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ವಂದಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಸಾಂಸ್ಕ್ರತಿಕ ನಾಯಕ ಬಸವಣ್ಣ, ಭುವನೇಶ್ವರಿ, ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು