ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷೆ ಕವಯತ್ರಿ ರುಬೀನಾ

KannadaprabhaNewsNetwork | Published : Mar 3, 2025 1:45 AM

ಸಾರಾಂಶ

ಕನ್ನಡ ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷೆಯಾಗಿ ಕವಯತ್ರಿ ರುಬಿನಾ ಆಯ್ಕೆಯಾದರು.

ಮಡಿಕೇರಿ: ಕೇರಳ ರಾಜ್ಯ - ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡಿನಲ್ಲಿ ಸಾಹಿತಿ, ಪತ್ರಕರ್ತ ಶ್ರೀ ವಿರಾಜ್ ಅಡೂರ್ ಅಧ್ಯಕ್ಷರಾಗಿ ಸಮಿತಿ ವಿಸ್ತರಿಸಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಕಾರ್ಯ ಪ್ರವೀತ್ತವಾಗಿದೆ. ಕರ್ನಾಟಕ ರಾಜ್ಯ ದಲ್ಲಿ ಪರಿಷತ್ತಿನ ಘಟಕ ಸ್ಥಾಪಿಸಿ ಕನ್ನಡ ಪರ ಚಟುವಟಿಕೆ ಗಳನ್ನು ವಿಸ್ತರಿಸುವ ಉದ್ದೇಶದಿಂದ ಇದೀಗ ಕೊಡಗು ಜಿಲ್ಲೆಯಲ್ಲಿ ಕನ್ನಡ ಚು. ಸಾ. ಪ. ಘಟಕವನ್ನು ಸ್ಥಾಪಿಸಿದೆ. ಕನ್ನಡ ಭವನದ ಕೊಡಗು ಜಿಲ್ಲಾ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಇವರು ರುಬೀನಾ ಎಂ. ಎ ಇವರ ನಾಮನಿರ್ದೇಶನ ಮಾಡಿದರು.

ಕೊಡಗು ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಕವಯತ್ರಿ ರುಬೀನಾ ಎಂ ಎ ಇವರು, ಪೆರಿಯಂಡ ಯಶೋಧ ಉಪಾಧ್ಯಕ್ಷರಾಗಿ, ಬೊಟ್ಟೋಳಂಡ ನಿವ್ಯಾ ಕಾವೇರಮ್ಮ, ಕೋಶಾಧಿಕಾರಿಯಾಗಿ ಚಂದನ್ ನಂದರಬೆಟ್ಟು, ಕಾರ್ಯಕಾರೀ ಸಮಿತಿ ಸದಸ್ಯರಾಗಿ, ಕರವಂಡ ಸೀಮಾ ಗಣಪತಿ, ಪಳಂಗೀಯಂಡ ಶರತ್ ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಸಂಕೇತ್ ಕೆ. ಎ., ಹೇಮಂತ್ ಪಾರೇರ, ಪಂದ್ಯಂಡ ರೇಣುಕಾ ಸೋಮಯ್ಯ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಮೊಣ್ಣಂಡ ವಿನು ಕಾರ್ಯಪ್ಪ, ಕಾಣತಂಡ ಭವ್ಯ ದೇವಯ್ಯ, ಉಡುವೆರ ರೇಖಾ ರಘು ಇವರನ್ನು ಆಯ್ಕೆ ಮಾಡಿ ಸಮಿತಿ ಯನ್ನು ರಚಿಸಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಕೇಂದ್ರದಲ್ಲಿ ಅದ್ದೂರಿ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಗೌರವ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಸಂಯುಕ್ತವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article