ಕನ್ನಡ ಬೆಳೆಸುವ ಕಾಯಕವನ್ನು ಕಟ್ಟಿಬದ್ದರಾಗಿ ಮಾಡಬೇಕು: ಡಿ.ರವಿಶಂಕರ್

KannadaprabhaNewsNetwork |  
Published : Sep 05, 2024, 12:42 AM IST
59 | Kannada Prabha

ಸಾರಾಂಶ

ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಾವೆಲ್ಲರೂ ಕನ್ನಡಿಗರಾಗಿ ಜನಿಸಿರುವುದು ಪೂರ್ವ ಜನ್ಮದ ಸುಕೃತ ಎಂದು ಬಣಿಸಿದ ಅವರು, ಭಾಷೆಯನ್ನು ಶ್ರೀಮಂತಗೊಳಿಸಲು ಮಹಾನ್ ಕವಿಗಳು, ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಶ್ರಮಿಸಿದ್ದು ನಾವು ಅವರುಗಳ ಹಾದಿಯಲ್ಲಿ ಸಾಗಿ ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲ್ಲೆತ್ತರಕ್ಕೆ ಹಾರಿಸೋಣ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ನಾಡು, ನುಡಿ ಮತ್ತು ಭಾಷೆಯ ಬಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಂಡು ಕನ್ನಡ ಬೆಳೆಸುವ ಕಾಯಕವನ್ನು ಕಟ್ಟಿಬದ್ದರಾಗಿ ಮಾಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ತೋಪಮ್ಮನವರ ದೇವಾಲಯದ ಬಳಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಸಂಚಾರ ಮಾಡುತ್ತಿರುವ ಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಿ ಮಾತನಾಡಿದ ಅವರು, ಭಾಷೆ ಮತ್ತು ದೇಶದ ವಿಚಾರ ಬಂದಾಗ ನಾವೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಏಕೀಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆ ಆ ಸಂಭ್ರಮವನ್ನು ಸರ್ವ ವ್ಯಾಪಿ ಮಾಡಿ ಸಂಸತ ಹಂಚಿಕೊಳ್ಳಲು ಸರ್ಕಾರ ರಾಜ್ಯಾದ್ಯಂತ ಜ್ಯೋತಿ ರಥಯಾತ್ರೆ ಸಂಚಾರ ಮಾಡಿಸುತ್ತಿದ್ದು, ಇದು ಅಭಿನಂದನೀಯ ಕೆಲಸ ಎಂದು ತಿಳಿಸಿದರು.

ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಾವೆಲ್ಲರೂ ಕನ್ನಡಿಗರಾಗಿ ಜನಿಸಿರುವುದು ಪೂರ್ವ ಜನ್ಮದ ಸುಕೃತ ಎಂದು ಬಣಿಸಿದ ಅವರು, ಭಾಷೆಯನ್ನು ಶ್ರೀಮಂತಗೊಳಿಸಲು ಮಹಾನ್ ಕವಿಗಳು, ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಶ್ರಮಿಸಿದ್ದು ನಾವು ಅವರುಗಳ ಹಾದಿಯಲ್ಲಿ ಸಾಗಿ ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲ್ಲೆತ್ತರಕ್ಕೆ ಹಾರಿಸೋಣ ಎಂದು ನುಡಿದರು.

ಜ್ಯೋತಿ ರಥಯಾತ್ರೆಗೆ ಶಾಸಕ ಡಿ. ರವಿಶಂಕರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಆನಂತರ ಯಾತ್ರೆಯೂ ಹಾಸನ-ಮೈಸೂರು ರಸ್ತೆಯ ಮೂಲಕ ಸಾಗಿ ಗರುಡಗಂಭದ ವೃತ್ತ, ವಿವಿರಸ್ತೆ, ಸಿಎಂ ರಸ್ತೆ, ಭಾರತಿ ವಿದ್ಯಾ ಮಂದಿರ ರಸ್ತೆ, ಬಜಾರ್ ರಸ್ತೆ, ಮೂಲಕ ಸಾಗಿ ಪುರಸಭೆ ವೃತ್ತದಿಂದ ಹಂಪಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮವಾದ ಭೇರ್ಯಕ್ಕೆ ತಲುಪಿತು.

ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಕೋಶಾಧ್ಯಕ್ಷ ಜಿ. ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ತಾಪಂ ಇಒ ಕುಲದೀಪ್, ಮುಖ್ಯಾಧಿಕಾರಿ ವಿ.ಬಿ. ವೆಂಕಟೇಶ್, ಬಿಇಒ ಆರ್. ಕೃಷ್ಣಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಮುಖಂಡರಾದ ಚಂದ್ರನಾಯಕ, ಹೊಸಕೋಟೆ ಚೆಲುವರಾಜು, ಮಿರ್ಲೆ ದೀಪು ಇದ್ದರು.ಭೇರ್ಯದಲ್ಲಿ ಸುವರ್ಣ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

ಕನ್ನಡಪ್ರಭ ವಾರ್ತೆ ಭೇರ್ಯಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದ ಗಡಿಯನ್ನು ಬುಧವಾರ ಮಧ್ಯಾಹ್ನ ಪ್ರವೇಶಿಸಿ ಸುವರ್ಣ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಕನ್ನಡ ಪರ ಸಂಘ-ಸಂಸ್ಥೆಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಸ್ವಾಗತಿಸಿದರು.

ಗ್ರಾಮದ ಹೊಸ ಬಸ್ ನಿಲ್ದಾಣದಿಂದ ಪ್ರಮುಖ ರಸ್ತೆಗಳಲ್ಲಿ ರಥಯಾತ್ರೆ ಮೆರವಣಿಗೆ ನಡೆಯಿತು. ಶಾಲಾ–ಕಾಲೇಜು ಮಕ್ಕಳು, ಕನ್ನಡಾಭಿಮಾನಿಗಳು ರಸ್ತೆ ಇಕ್ಕೆಲಗಳಲ್ಲಿ ನಿಂತು ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತಿಸಿದರು.ಗ್ರಾಪಂ ಅಧ್ಯಕ್ಷ ಬಿ.ಕೆ. ಮಂಜಪ್ಪ ಮಾತನಾಡಿ, ರಾಜ್ಯಾದ್ಯಂತ ಈ ಸುವರ್ಣ ಕನ್ನಡಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಪಿಡಿಓ ವಿ. ಮಮತ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕವು ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಂತಹ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೇ ಈ ಕರ್ನಾಟಕ ಸಂಭ್ರಮ-50ರ ಆಶಯವಾಗಿದೆ ಎಂದು ತಿಳಿಸಿದರು.ತಹಸೀಲ್ದಾರ್ ನರಗುಂದ, ಗ್ರೇಡ್-2 ತಹಸೀಲ್ದಾರ್ ಸಣ್ಣರಾಮಪ್ಪ, ಸಾಲಿಗ್ರಾಮ ಸಹಾಯಕ ಎಸ್ಐ ಕುಮಾರ್, ಮುಖ್ಯಪೇದೆ ಎಚ್.ಬಿ. ಶಿವಪ್ಪ, ಶಿರೇಸ್ತೆದಾರ್ ಶಿವಕುಮಾರ್, ಮಿರ್ಲೆ ಹೋಬಳಿ ಉಪ ತಹಸೀಲ್ದಾರ್ ಮಹೇಶ್, ಗ್ರಾಪಂ ಸದಸ್ಯ ಬಿ.ಕೆ. ಶಿವಕುಮಾರ್, ಗ್ರಾಪಂ ಲೆಕ್ಕಾಧಿಕಾರಿ ಅಶ್ವಿನಿಸುನಯ್ ಗೌಡ, ಗ್ರಾಮ ಲೆಕ್ಕಾಧಿಕಾರಿ ರಿಯಾನ, ಬಿಲ್ ಕಲೆಕ್ಟರ್ ಕುಮಾರ್, ಮುಖಂಡರಾದ ಹರೀಶ್, ರಾಜಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!