ಕೊಟ್ಟ ಮಾತಿನಂತೆ ನಡೆಯುವುದೇ ಕನ್ನಡದ ಸಂಸ್ಕೃತಿ: ಕುಂದೂರು ಅಶೋಕ್

KannadaprabhaNewsNetwork |  
Published : May 09, 2026, 01:45 AM IST
ತರೀಕೆರೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಅಭಿನಂದನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆತಾವು ಕೊಟ್ಟ ಮಾತಿನಂತೆ ನಡೆಯುವುದೇ ಕನ್ನಡ ನುಡಿ ಸಂಸ್ಕೃತಿ ಎಂದು ಚಿಕ್ಕಮಗಳೂರು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ (ಕುಂದೂರು ಭದ್ರಮ್ಮ ಕಲ್ಲೇಗೌಡ) ಅಧ್ಯಕ್ಷ ಕುಂದೂರು ಅಶೋಕ್ ಹೇಳಿದ್ದಾರೆ.

ತರೀಕೆರೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ತರೀಕೆರೆ

ತಾವು ಕೊಟ್ಟ ಮಾತಿನಂತೆ ನಡೆಯುವುದೇ ಕನ್ನಡ ನುಡಿ ಸಂಸ್ಕೃತಿ ಎಂದು ಚಿಕ್ಕಮಗಳೂರು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ (ಕುಂದೂರು ಭದ್ರಮ್ಮ ಕಲ್ಲೇಗೌಡ) ಅಧ್ಯಕ್ಷ ಕುಂದೂರು ಅಶೋಕ್ ಹೇಳಿದ್ದಾರೆ.ಚಿಕ್ಕಮಗಳೂರು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿಕಾಸ ರಂಗದಿಂದ ಪಟ್ಟಣದ ದಾನಿಗಳಾದ ಶ್ಯಾಮಲ ಮಂಜುನಾಥ್ ಅವರ ನಿವಾಸದಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ 112 ವರ್ಷಗಳ ನೆನಪಿನ ಹಿನ್ನಲೆಯಲ್ಲಿ ಕನ್ನಡಕ್ಕಾಗಿ ದುಡಿದವರಿಗೆ ಸನ್ಮಾನ ನಡೆಯುತ್ತಿರುವುದು ಅರ್ಥಪೂರ್ಣ. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರರಾಗಿದ್ದವರು ಅಂತಹ ಮಹಾರಾಜರು ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪಿಸಿದರು. ಇಂತಹ ಪ್ರತಿಷ್ಠಿತ ಸಂಸ್ಥೆ ಸದಸ್ಯರಾಗುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಮಹಿಳೆಯರಲ್ಲಿ ಸಾಧನೆಯ ಗುರಿ ಇರುತ್ತದೆ. ದಾನಿಗಳಾದ ಶ್ಯಾಮಲ ಮಂಜುನಾಥ್ ಮತ್ತು ಅವರ ಪುತ್ರ ನವೀನ್ ಕುಮಾರ್ ನುಡಿದಂತೆ ನಡೆದು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ತರೀಕೆರೆ ತಾಲೂಕು ಕಸಾಪಗೆ ನಿವೇಶನವನ್ನು ದಾನವಾಗಿ ನೀಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಹಿರಿಯ ಪತ್ರಕರ್ತ ಅನಂತ ನಾಡಿಗ್ ಅವರು ಸೌಜನ್ಯ ಮತ್ತು ಸರಳತೆಯಿಂದ 40 ವರ್ಷಗಳಿಂದ ಪ್ರಾಮಾಣಿಕವಾಗಿ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ದಾನಿಗಳಾದ ಶ್ಯಾಮಲ ಮಂಜುನಾಥ್ ನಿವಾಸ ಒಂದು ದೇವಸ್ಥಾನವಿದ್ದಂತೆ, ಅವರು ನಾಡು ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ನಿರ್ಮಿಸಲು ನಿವೇಶನ ದಾನ ಮಾಡಿದ್ದಾರೆ ಅವರು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಸುರೇಶ್ ಚಂದ್ರ ಮರೆಯುವ ಮುನ್ನ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ದಾನಿಗಳುರು ನುಡಿದಂತೆ ನಡೆದು ತಾ.ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ನಿರ್ಮಾಣಕ್ಕೆ ನಿವೇಶನ ದಾನ ಮಾಡಿ ಆದರ್ಶ ಮೆರೆದಿದ್ದಾರೆ ಎಂದು ಅಭಿನಂದಿಸಿದರು. ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ಹಿರಿಯ ಪತ್ರಕರ್ತ ಅನಂತ ನಾಡಿಗ್ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವುದು ಹೆಮ್ಮೆಯ ವಿಷಯ ಎಂದರು.ಚಿಕ್ಕಮಗಳೂರು ಚಿಂತಕ ಡಿ.ಎಂ.ಮಂಜುನಾಥ ಸ್ವಾಮಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ವರ್ಷದ ನೆನಪಿನ ದಿನದಲ್ಲಿ ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ ಎಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.ದಾನಿಗಳಾದ ಶ್ಯಾಮಲ ಮಂಜುನಾಥ್ ಮಾತನಾಡಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ನಮ್ಮ ಕುಟುಂಬದ

ಗೆಳೆಯರು. ಕನ್ನಡದ ದೊಡ್ಡ ದೊಡ್ಡ ವಿದ್ವಾಂಸರ ಜೊತೆ ನಾನಿರುವುದು ಹೆಮ್ಮೆಯ ವಿಷಯ ಎಂದರು. ಪ್ರತಿಷ್ಠಾನ ವತಿಯಿಂದ ದಾನಿಗಳಾದ ಶ್ಯಾಮಲ ಮಂಜುನಾಥ್ , ಹಿರಿಯ ಪತ್ರಕರ್ತ ಅನಂತ ನಾಡಿಗ್ ಅವರನ್ನು ಅಭಿನಂದಿಸಲಾಯಿತು.ರೋಹಿಣಿ ನರಸಿಂಹಮೂರ್ತಿ ಅವರು ಗೀತೆ ಹಾಡಿದರು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುನಿತಾ ಕಿರಣ್, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕರು ಇಮ್ರಾನ್ ಅಹಮದ್ ಬೇಗ್, ಸೈಯದ್

ಮುಹೀ ಬುಲ್ಲಾ, ನವೀನ್ ಕುಮಾರ್, ಡಿ.ಆರ್.ಹರ್ಷಿಣಿ ಭಾಗವಹಿಸಿದ್ದರು.-

7ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದಾನಿಗಳಾದ ಶ್ಯಾಮಲ ಮಂಜುನಾಥ್, ಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ಅವರನ್ನು ಅಭಿನಂದಿಸಲಾಯಿತು. ಕುಂದೂರು ಅಶೋಕ್, ಪುಟ್ಟಸ್ವಾಮಿ ಹಿರೆಮಗಳೂರು ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ ಉದ್ದೇಶವೇ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಪ್ರಸಾರ: ರವಿ ದಳವಾಯಿ
ಕಾಫಿ ಬೆಳೆಗಾರರ ಸಂಘದ ನೂತನ ಕಟ್ಟಡಕ್ಕೆ ಶಾಸಕರಿಂದ ಭೂಮಿಪೂಜೆ