ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಜ್ಞಾನಗಂಗೋತ್ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೊತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿಕ್ಷಣದಿಂದ ಏನೇಲ್ಲ ಬದಲಾವಣೆ ಮಾಡಬಹುದು ಎಂಬ ಉದ್ದೇಶದಿಂದ ಶೈಕ್ಷಣಿಕ ಬೆಳವಣಿಗೆಯ ವಾತಾವರಣ ನಿರ್ಮಾಣ ಮಾಡಿದ್ದೇನೆ ಎಂದರು.
ಕಸಾಪ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಅರಣ್ಯಾಧಿಕಾರಿ ಧನರಾಜ ಮುಜಗೊಂಡ ಮಾತನಾಡಿ, ಕೋವಿಡ್ ನಿಂದಾಗಿ ಇಲ್ಲಿಯವರೆಗೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಕಷ್ಟದಲ್ಲದ್ದು, ಜನಪ್ರತಿನಿಧಿಗಳು, ಪಾಲಕರು, ದಾನಿಗಳು ಶಾಲೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶ್ರೀ, ಎಸಿ ಅಬೀದ ಗದ್ಯಾಳ, ಡೈಯಟ್ ಉಪನ್ಯಾಸಕ ಎ.ಆರ್ ಮುಜಾವರ, ಚಿಕ್ಕಬೇವನೂರ ಗ್ರಾಪಂ ಅಧ್ಯಕ್ಷ ಸುನೀಲ ಚವ್ಹಾಣ, ಪತ್ರಕರ್ತ ಶರಣಬಸಪ್ಪ ಕಾಂಬಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಜಟ್ಟಪ್ಪ ರವಳಿ,ಮುಖಂಡರಾದ ಯಶವಂತ ಕಾಡೆಗೋಳ,ಜಿ.ಎನ್.ಘೋರ್ಪಡೆ, ಭೀಮಣ್ಣಾ ಕೌಲಗಿ, ಇಲಿಯಾಸ ಬೋರಾಮಣಿ, ಯುಕೆಪಿ ಎಇಇ ಶ್ರೀಮಂತ ಅಂಗಡಿ, ಎಂ.ಡಿ.ಶೇಖ್, ದಾದಾ ಶ್ಯಾಮನವರ, ಚನ್ನಪ್ಪ ದೇಸಾಯಿ, ಎನ್.ಬಿ.ಶ್ಯಾಮನವರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎನ್.ಘೋರ್ಪಡೆ, ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
ಪೋಟೋಕ್ಯಾಪ್ಸನ್ 05 ಇಂಡಿ01: ಇಂಡಿ ರೈಲು ನಿಲ್ದಾಣದ ಜ್ಞಾನಗಂಗೋತ್ರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಷರ್ಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡುತ್ತಿರುವುದು.