ನಾವೆಲ್ಲ ಹೆಚ್ಚು ಕನ್ನಡ ಮಾತನಾಡುವ ಮೂಲಕ ನಮ್ಮ ಭಾಷೆಯನ್ನೇ ಹೆಚ್ಚು ಬಳಕೆ ಮಾಡಬೇಕಾಗಿದೆ ಜತೆಗೆ ಕನ್ನಡ ನೆಲ,ಜಲ ಮತ್ತು ಸಂಸ್ಕೃತಿ ಕಾಪಾಡಬೇಕಾಗಿದೆ.
ಕುರುಗೋಡು: ಅನ್ಯ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡ ಮರೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ತಹಸೀಲ್ದಾರ್ ನರಸಪ್ಪ.ಹೇಳಿದರು.
ಪಟ್ಟಣದ ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿರಿಗನ್ನಡ ಯುವಕ ಸಂಘದ ನೇತೃತ್ವದಲ್ಲಿ ನಡೆದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತದ ಇತಿಹಾಸಕ್ಕಿಂತ ಕರ್ನಾಟಕದ ಇತಿಹಾಸ ದೊಡ್ಡದಿದ್ದು, ಅರಿತು ಕನ್ನಡ ಉಳಿವಿಗಾಗಿ ನಾವು ಬದುಕು ನಡೆಸಬೇಕು ಕನ್ನಡ ನಾಡಿನ ನೆಲ, ಜಲ ಹಾಗು ಭಾಷೆ ಉಳಿವಿಗೆ ಎಲ್ಲ ಕನ್ನಡಿಗರೂ ಬದ್ಧರಾಗಬೇಕು ಅಂದಾಗ ಮಾತ್ರ ಕನ್ನಡ ಜೀವಂತವಾಗಿರಲು ಸಾಧ್ಯ ಎಂದರು.
ಪಿಎಸ್ಐ ಸುಪ್ರಿತ್ ವಿರೂಪಕ್ಷಪ್ಪ ಮಾತನಾಡಿ, ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ದೊರಕಿದ್ದು ಕನ್ನಡ ನಾಡಿಗೆ. ನಾವೆಲ್ಲ ಹೆಚ್ಚು ಕನ್ನಡ ಮಾತನಾಡುವ ಮೂಲಕ ನಮ್ಮ ಭಾಷೆಯನ್ನೇ ಹೆಚ್ಚು ಬಳಕೆ ಮಾಡಬೇಕಾಗಿದೆ ಜತೆಗೆ ಕನ್ನಡ ನೆಲ,ಜಲ ಮತ್ತು ಸಂಸ್ಕೃತಿ ಕಾಪಾಡಬೇಕಾಗಿದೆ. ನಮ್ಮ ನೆಲ, ಜಲ ಬಳಕೆ ಮಾಡಿಕೊಂಡು ನಮ್ಮ ನಡುವೆ ಜೀವಿಸುವ, ಉದ್ಯೋಗ ಮಾಡುವವರು ಕನ್ನಡ ಭಾಷೆ ಮಾತನಾಡಿ ವ್ಯವಹರಿಸುವಂತೆ ನಾವೆಲ್ಲ ಆಡಳಿತದಲ್ಲಿಯೇ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ ಎಂದರು.
ಸಿರಿಗನ್ನಡ ಯುವಕ ಸಂಘದ ಅಧ್ಯಕ್ಷ ಬಿ.ವೀರಭದ್ರಗೌಡ ಮಾತನಾಡಿ, ಬರೀ ನ.1 ರಂದು ಮಾತ್ರ ಕನ್ನಡಿಗರಾಗದೇ ಪ್ರತಿ ದಿನ ಕನ್ನಡ ಉಳಿಸಿ ಬೆಳೆಸಲು ಅದರಲ್ಲೂ ಕನ್ನಡ ಸರ್ಕಾರಿ ಶಾಲೆ ಉಳಿಸುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ನಮ್ಮನ್ನಾಳುವ ಸರ್ಕಾರ ಕನ್ನಡ ರಾಜ್ಯೋತ್ಸವದ ದಿನ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಗಿವೆ. ನಿಜವಾಗಿಯೂ ಕನ್ನಡ ಶಾಲೆ ಬೆಳೆಸುವ ಯಾವ ಇಚ್ಛಾಶಕ್ತಿ ಇಲ್ಲ. ಇಂತಹ ಕನ್ನಡ ವಿರೋಧಿ ಯಾವುದೇ ಸರ್ಕಾರ ಬರಲಿ ಅವರ ವಿರುದ್ಧ ನಮ್ಮ ಧ್ವನಿ ಎತ್ತೋಣ ಎಂದರು.
ನಂತರ ಹಿರಿಯ ನಿವೃತ್ತ ಶಿಕ್ಷಕ ಚಂದ್ರಶೇಖರ್ ಆಚಾರ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ, ಉಪ ನೋಂದಣಾಧಿಕಾರಿ ಸಂತೋಷ್ ಕುಮಾರ್, ಹೊತೂರು ಹೇಮಾದ್ರಿ, ಉಪ ಖಜಾನಾಧಿಕಾರಿ ಪಿ. ಅಲ್ಲಾಭಕ್ಷ, ಕೆ.ವಿರುಪಾಕ್ಷ ಗೌಡ, ಮದಿರೆ ಕುಮಾರಸ್ವಾಮಿ, ಕೆ ಎಸ್ ಹಸ್ಸನ್ ಭಾಷಾ, ತಂಗಿ ಗವಿಸಿದ್ದಪ್ಪ, ಲೋಕೇಶ್, ಎನ್. ಷಣ್ಮುಖ, ನರಸಪ್ಪ ಯಾದವ್, ಜಕ್ಕಂಡಿ ರಮೇಶ್, ಟಿ.ಚೇತನಕುಮಾರ, ಮುದ್ದನಗೌಡ ,ಎನ್. ಶಣ್ಮುಖ, ಎಸ್.ನಾಗರಾಜ, ವಿ.ವೀರೇಶ್, ಬುಟ್ಟಾ ಮಲ್ಲಿನಾಯಕ, ಸುರೇಶ್ ಬಾಬು, ನಟರಾಜ್ ಗೌಡ, ದ್ಯಾವಣ್ಣ, ಚಂದ್ರಶೇಖರ ಸ್ವಾಮಿ, ಬಾಸ ರವೀಂದ್ರರೆಡ್ಡಿ, ಸಿಬ್ಬಂದಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.